ADVERTISEMENT

ಹಬ್ಬದ ಸವಿಗೆ ವಿಶೇಷ ಖಾದ್ಯಗಳು

ಮೀನಾಕ್ಷಿ ರಮೇಶ್
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಹಬ್ಬದ ಸವಿಗೆ ವಿಶೇಷ ಖಾದ್ಯಗಳು
ಹಬ್ಬದ ಸವಿಗೆ ವಿಶೇಷ ಖಾದ್ಯಗಳು   

ತೆಂಗೊಳ್ಳಿ

ಬೇಕಾಗುವ ಸಾಮಾಗ್ರಿಗಳ: 1 ಕಪ್‌ ಉದ್ದಿನ ಹಿಟ್ಟು, 3 ಕಪ್‌ ಅಕ್ಕಿ ಹಿಟ್ಟು, ಅರ್ಧ ಕಪ್‌ನಷ್ಟು ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ

ಮಾಡುವ ವಿಧಾನ: ಮೊದಲಿಗೆ ಹಿಟ್ಟುಗಳೆಲ್ಲವನ್ನೂ ಸೇರಿಸಿ ಅದಕ್ಕೆ ಬೆಣ್ಣೆ ಹಾಕಿ ಕಲಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಒರಳಿಗೆ ಹಾಕಿ, ತಂಗೊಳ್ಳು ಅಚ್ಚಲಿ ಒತ್ತಿ ಕಾದ ಕಾದ ಎಣ್ಣೆಗೆಗೆ ಹಾಕಿದರೆ ತಂಗೊಳ್ಳಿ ಸವಿಯಲು ಸಿದ್ಧ.

ADVERTISEMENT

**

ಗರಿಗರಿ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಮೂರು ಕಪ್ ಅಕ್ಕಿಹಿಟ್ಟು, ಅರ್ಧ ಕಪ್ ಹುರಿಗಡಲೆ ಹಿಟ್ಟು, ಅರ್ಧ ಕಪ್ ಕಡ್ಲೆಹಿಟ್ಟು, 1 ಚಮಚ ಜೀರಿಗೆ, 1 ಚಮಚ ಎಳ್ಳು, 1 ಚಮಚ ಮೆಣಸಿನ ಪುಡಿ, 1 ಲಿಂಬೆ ಗಾತ್ರದಷ್ಟು ಬೆಣ್ಣೆ, 2 ಚಮಚ ಬಿಸಿ ಎಣ್ಣೆ, ಕರಿಯಲು ಎಣ್ಣೆ, ಅರ್ಧ ಕಪ್ ಕಾಯಿ ಹಾಲು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಎಲ್ಲಾ ಹಿಟ್ಟುಗಳನ್ನು ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಜೀರಿಗೆ, ಎಳ್ಳು, ಮೆಣಸಿನ ಪುಡಿ ಹಾಗೂ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು. ನಂತರ ಬಿಸಿ ಎಣ್ಣೆ ಹಾಕಿ, ಕಾಯಿ ಹಾಲು ಹಾಗೂ ನೀರು ಹಾಕಿ ಕಲಸಿ, ಚಕ್ಕುಲಿ ಒರಳಲ್ಲಿ ಹಾಕಿ ಒತ್ತಿ ಕಾದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಚಕ್ಕುಲಿ ತಯಾರು.

**

ರವೆ ಹೋಳಿಗೆ

ಬೇಕಾಗುವ ಸಾಮಗ್ರಿ: 1 ಕಪ್ ಬಾಂಬೆ ರವೆ, 1 ಕಪ್ ಸಕ್ಕರೆ, 2 ಏಲಕ್ಕಿ, 2 ಕಪ್ ಮೈದಾ, 2 ಚಮಚ ತುಪ್ಪ, 4 ಚಮಚ ಚಿರೋಟಿ ರವೆ, 4 ಚಮಚ ಎಣ್ಣೆ, ಚಿಟಿಕೆ ಉಪ್ಪು ಹಾಗೂ ಚಿಟಿಕೆ ಅರಿಶಿಣ.

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಮೈದಾ, ಚಿರೋಟಿ ರವೆ, ಅರಿಶಿಣ ಹಾಗೂ ಉಪ್ಪು ಹಾಕಿ ಕಲಸಿಕೊಳ್ಳಬೇಕು. ನಂತರ ಮೂರು ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ ಮತ್ತೆ ನೀರು ಹಾಕಿ ಕಣಿಕವನ್ನು ತಯಾರಿಸಿ ಮೇಲಿಂದ 1 ಚಮಚ ಎಣ್ಣೆ ಹಾಕಿ ಕಲಸಿ ಇಡಬೇಕು.

ಇನ್ನೊಂದು ಬಾಣಲೆಯಲ್ಲಿ 1 ಕಪ್ ರವೆಯನ್ನು 2 ಚಮಚ ತುಪ್ಪದಲ್ಲಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ, ಅದೇ ಬಾಣಲಿಗೆ 2 ಕಪ್ ನೀರನ್ನು ಹಾಕಿ ನೀರು ಕುದಿಯುವಾಗ ಸ್ವಲ್ಪ ಸ್ವಲ್ಪವೇ ರವೆ ಹಾಕಿ ಮಗುಚಿ, ರವೆ ಬೆಂದ ಮೇಲೆ ಸಕ್ಕರೆ ಹಾಕಿ ಕುದಿಸಿ ಕೇಸರಿಬಾತ್‌ ತರಹ ಮಾಡಿಟ್ಟುಕೊಳ್ಳಬೇಕು. ಕೊನೆಗೆ ಏಲಕ್ಕಿ ಪುಡಿ ಸೇರಿಸಿ ಕಲಸಿದರೆ ಹೂರಣ ತಯಾರಾಗುತ್ತದೆ. ಹೂರಣ ತಣ್ಣಗಾದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುಕೊಂಡು, ಸ್ವಲ್ಪವೇ ಕಣಿಕ ತೆಗೆದುಕೊಂಡು ಚಪಾತಿ ತರಹ ಲಟ್ಟಿಸಿ ಕಾದ ಹಂಚಿನಲ್ಲಿ ಬೇಯಿಸಿದರೆ ಬಿಸಿಯಾದ ಹಾಗೂ ರುಚಿಕರವಾದ ರವೆ ಹೋಳಿಗೆ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.