ADVERTISEMENT

ಹಾಲಿನ ಕಲಬೆರಕೆ ಅರಿಯುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
ಹಾಲಿನ ಕಲಬೆರಕೆ ಅರಿಯುವುದು ಹೇಗೆ?
ಹಾಲಿನ ಕಲಬೆರಕೆ ಅರಿಯುವುದು ಹೇಗೆ?   

ಹಾಲಿನ ಗುಣಮಟ್ಟ ಅರಿಯಲು ಕೆಲವು ಸುಲಭ ಪರೀಕ್ಷೆಗಳಿವೆ. ಇವುಗಳಲ್ಲಿ ಮೊದಲನೆಯದು ಆರ್ಗನೋಲೆಪ್ಟಿಕ್ ಪರೀಕ್ಷೆ (ಒಟಿ). ಬಾಯಿಗೆ ಕೆಲವು ಹನಿಗಳನ್ನು ಹಾಕಿಕೊಂಡು ಅದು ತಾಜಾ ಆಗಿದೆಯೇ, ಹುಳಿ ಬಂದಿದೆಯೇ ಅಥವಾ ಲೋಳೆ ಲೋಳೆಯಾಗಿದೆಯೇ ಎಂಬುದನ್ನು ಗಮನಿಸಿ ಗುಣಮಟ್ಟ ಅಂದಾಜಿಸುವ ವಿಧಾನ ಇದು.

ಹೀಗೆ ಮಾಡಿದಾಗ, ನಾಲಿಗೆ ಅಥವಾ ಬಾಯಿಯ ಯಾವುದೇ ಭಾಗದಲ್ಲಿ ಕಡಿತದ ಅನುಭವವಾದರೆ ಹಾಲಿಗೆ ಕಾರ್ಬೊನೇಟ್/ ಯೂರಿಯಾ ಸೇರಿಸಿರುವ ಸಾಧ್ಯತೆ ಇರುತ್ತದೆ.

ಎರಡನೆಯದಾಗಿ, ಲ್ಯಾಕ್ಟೊಮೀಟರ್ ರೀಡಿಂಗ್. ಹಾಲಿಗೆ ನೀರು ಸೇರಿಸಲಾಗಿದೆಯೇ ಅಥವಾ ಇನ್ನಿತರ ವಸ್ತುವಿನಿಂದ ಅದನ್ನು ಕಲಬೆರಕೆ ಮಾಡಲಾಗಿದೆಯೇ ಎಂಬುದನ್ನು ದುಬಾರಿಯಲ್ಲದ ಲ್ಯಾಕ್ಟೊಮೀಟರ್‌ನಿಂದ ಯಾರು ಬೇಕಾದರೂ ಕಂಡುಕೊಳ್ಳಬಹುದು.
 
ಕಲಬೆರಕೆಯಾಗದ ಹಾಲಿನ `ಸಾಪೇಕ್ಷ ಸಾಂದ್ರತೆ~ (ಸ್ಪೆಸಿಫಿಕ್ ಗ್ರ್ಯಾವಿಟಿ) ಕೊಠಡಿ ಉಷ್ಣತೆಯಲ್ಲಿ 27/28 ಇರುತ್ತದೆ. ಇದಕ್ಕಿಂತ ಬೇರೆ ಮಾಪನ ತೋರಿಸಿದರೆ ಅದು ಹಾಲು  ಕಲಬೆರಕೆಯಾಗಿರುವುದರ ಸೂಚಕ.

 ಪ್ಯಾಕೆಟ್ ಮೇಲೆ ಏನಿರಬೇಕು?
ನಿಯಮಾವಳಿ ಪ್ರಕಾರ, ಹಾಲಿನ ಪ್ಯಾಕೆಟ್ಟಿನ ಲೇಬಲ್ ಮೇಲೆ ಮುಂದೆ ಹೇಳಿದ ಎಲ್ಲ ಮಾಹಿತಿಗಳೂ ಇರಬೇಕು.

1) ಉತ್ಪಾದಕರ ಹೆಸರು- ವಿಳಾಸ ಹಾಗೂ ಉತ್ಪಾದನಾ ಘಟಕದ ಹೆಸರು-  ವಿಳಾಸ

2) ಉತ್ಪನ್ನದ ಹೆಸರು ಹಾಗೂ ನಮೂನೆ. ಅಂದರೆ, ಟೋನ್ಡ್, ಫುಲ್ ಕ್ರೀಮ್ ಅಥವಾ ಸ್ಟ್ಯಾಂಡರ್ಡೈಸ್ಡ್ ಎಂಬುದು ಸ್ಫುಟವಾಗಿ ನಮೂದಾಗಿರಬೇಕು
 
3) ಡೇರಿಯ ಹೆಸರು ಮತ್ತು ಅಂಚೆ ವಿಳಾಸ

4) ಗ್ರಾಹಕರು ದೂರು ನೀಡಬೇಕಾಗಿ ಬಂದರೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ
 
5) ಉತ್ಪನ್ನದ ಬ್ಯಾಚ್ ಅಥವಾ ಕೋಡ್ ಸಂಖ್ಯೆ, ಉತ್ಪನ್ನ ತಯಾರಾದ ದಿನಾಂಕ, ಯಾವ ದಿನಾಂಕಕ್ಕೆ ಮುನ್ನ ಉತ್ಪನ್ನ ಬಳಸಬೇಕು ಎಂಬುದು ನಮೂದಾಗಿರಬೇಕು
 
6) ಗರಿಷ್ಠ ಮಾರಾಟ ಬೆಲೆ

7) ಪ್ಯಾಕೆಟ್‌ನೊಳಗಿರುವ ಹಾಲಿನ ಪ್ರಮಾಣ (ಲೀಟರ್ ಅಥವಾ ಮಿ.ಲೀ.ಗಳಲ್ಲಿ)

8) ಪ್ರತಿ 100 ಮಿ.ಲೀ. ಹಾಲಿನಲ್ಲಿರುವ ಪೌಷ್ಟಿಕಾಂಶದ ಕುರಿತ ವಿವರ 

9) ಉತ್ಪನ್ನ ಸಂರಕ್ಷಿಸಲು ಅನುಸರಿಸಬೇಕಾದ ವಿಧಾನ- ಇವು ಸ್ಫುಟವಾಗಿ ಮುದ್ರಿತವಾಗಿರಬೇಕು.

ಪರೀಕ್ಷೆಗಳಿಂದ ಗೊತ್ತಾಗಿದ್ದು ಏನು?
ನೀಲ್‌ಗಿರೀಸ್ ಬ್ರ್ಯಾಂಡ್ (ಟೋನ್ಡ್) ಮತ್ತು ನಂದಿನಿ ಬ್ರ್ಯಾಂಡ್ (ಸ್ಟ್ಯಾಂಡರ್ಡೈಸ್ಡ್)ಗಳಲ್ಲಿ ಸಕ್ಕರೆ ಅಂಶ ಕಂಡುಬಂತು. ಅಧಿಕ ದರ ಪಡೆಯುವ ಸಲುವಾಗಿ ಹಾಲನ್ನು ಕೃತಕವಾಗಿ ಗಟ್ಟಿಯಾಗಿಸಲು ಹೀಗೆ ಮಾಡಲಾಗುತ್ತದೆ. ಉಳಿದಂತೆ ಪರೀಕ್ಷೆಯ ಇನ್ನಿತರ ಫಲಿತಾಂಶಗಳು ಈ ಪಟ್ಟಿಗಳಲ್ಲಿದೆ.
(ನಾಳೆ ಕೊನೆಯ ಕಂತು)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.