ADVERTISEMENT

ಶುಚಿಯಾಗಿರಲಿ ಅಡುಗೆಮನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಶುಚಿಯಾಗಿರಲಿ ಅಡುಗೆಮನೆ
ಶುಚಿಯಾಗಿರಲಿ ಅಡುಗೆಮನೆ   

ಮನೆ ಸ್ವಚ್ಛ ಮಾಡುವ ಗೃಹಿಣಿಯರಿಗೆ ಸದಾ ಸವಾಲೊಡ್ಡುವುದು ಅಡುಗೆಮನೆ. ಡಬ್ಬಗಳು , ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿದ್ದರೆ ಅಡುಗೆಕೋಣೆ ಕೊಳಕಾಗಿ ಕಾಣುತ್ತದೆ. ಹೀಗಾಗಿ ಶೆಲ್ಫ್‌ನಲ್ಲಿ ವಸ್ತುಗಳನ್ನು ನೀಟಾಗಿ ಜೋಡಿಸಿಡುವುದು ಉತ್ತಮ.

* ಪದಾರ್ಥ ಹಾಕಿಡಲು ಬೇರೆ ಬೇರೆ ಬಣ್ಣದ ಡಬ್ಬ ಉಪಯೋಗಿಸಿ. ಇದರಿಂದ ಯಾವ ಡಬ್ಬದಲ್ಲಿ ಯಾವ ಪದಾರ್ಥ ಇದೆ ಎನ್ನುವುದು ಬೇಗ ತಿಳಿಯುತ್ತದೆ. ಸ್ಟೀಲ್‌ ಡಬ್ಬಗಳನ್ನು ಉಪಯೋಗಿಸುತ್ತಿದ್ದಲ್ಲಿ  ಅದರ ಮೇಲೆ ಯಾವ ಪದಾರ್ಥ ತುಂಬಿಸಿಡಲಾಗಿದೆ ಎಂದು ಒಂದು ಸ್ಟಿಕ್ಕರ್ ಅಂಟಿಸಿ

* ಒಂದು ಪಟ್ಟಿ ಮಾಡಿ, ಪಟ್ಟಿಯ ಪ್ರಕಾರ ಚಮಚ, ಡಬ್ಬಗಳು, ಪಾತ್ರೆಗಳು ಮತ್ತು ಇತರ ವಸ್ತುಗಳಿಗೆ ಶೆಲ್ಫ್‌ನಲ್ಲಿ ಜಾಗ ಮೀಸಲಿಡಿ. ಇದರಿಂದ ಯಾವ ವಸ್ತುವನ್ನು ಯಾವ ಜಾಗದಲ್ಲಿ ಇಡಲಾಗಿದೆ ಎಂದು ಬೇಗ ಗೊತ್ತಾಗುತ್ತದೆ. ಕಾಳುಗಳು, ಉಪಾಹಾರದ ತಿಂಡಿಗಳು... ಹೀಗೆ ಒಂದೇ ರೀತಿಯ ವಸ್ತುಗಳನ್ನು ಒಂದೇ ಕಡೆ ಇರಿಸಿ

ADVERTISEMENT

* ಶೆಲ್ಫ್ ಶುಚಿಯಾಗಿಡಿ. ಒಣಬಟ್ಟೆಯಿಂದ ಆಗಾಗ ದೂಳನ್ನು ಒರೆಸಿ. ಲಿಕ್ವಿಡ್ ಕ್ಲೀನರ್‌ಗಳಿಂದ ಒರೆಸಿ. ಇದರಿಂದ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ

* ಶೆಲ್ಫ್‌ನಲ್ಲಿಟ್ಟಿರುವ ಡಬ್ಬಗಳನ್ನು ಯಾವಾಗಲೂ ಮುಚ್ಚಿಡಬೇಕು. ತೆರೆದಿಟ್ಟರೆ ಗಾಳಿಯಾಡುವ ಕಾರಣ ಪದಾರ್ಥಗಳು ಬೇಗ ಹಾಳಾಗುತ್ತವೆ

* ಶೆಲ್ಫ್‌ ಕೆಲವೊಮ್ಮೆ ಎಣ್ಣೆ ಹಾಗೂ ಮಸಾಲೆ ಬಿದ್ದು ಕೊಳಕಾಗಬಹುದು. ಆಗ ಬೇಕಿಂಗ್ ಸೋಡಾವನ್ನು ನೀರಿಗೆ ಹಾಕಿ ಕಲಸಿ ಒಂದು ಸ್ಪಂಜ್ ಅಥವಾ ಬಟ್ಟೆಯಿಂದ ಉಜ್ಜಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.