ADVERTISEMENT

Recipe| ಬಲ್ಲವರೇ ಬಲ್ಲರು ಬೇಲದ ರುಚಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:31 IST
Last Updated 31 ಮಾರ್ಚ್ 2023, 19:31 IST
ಬೇಲದ ಹಣ್ಣಿನ ಪಾನಕ
ಬೇಲದ ಹಣ್ಣಿನ ಪಾನಕ    

ಬೇಲದ ಹಣ್ಣಿನಲ್ಲಿ ಸಾಕಷ್ಟು ಜೀವಸತ್ವ ಹಾಗೂ ಪೋಷಕಾಂಶಗಳಿವೆ, ಬೇಸಿಗೆಯ ಸಮಯದಲ್ಲಿ ಬೆಲ್ಲದೊಡನೆ ಸೇವಿಸುತ್ತಾರೆ. ದೇಹವನ್ನು ತಂಪುಮಾಡುತ್ತದೆ, ಇದು ಹುಳಿ ಸಿಹಿಯಾಗಿರುತ್ತದೆ. ಬೇಲದ ಹಣ್ಣಿನಿಂದ ಮಾಡಬಹುದಾದ ಸ್ವಾದಿಷ್ಟ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಸೌಖ್ಯ ಮೋಹನ್ ಮತ್ತು ಪವಿತ್ರ ನವೀನ್

ಹಣ್ಣಿನ ಜಾಮ್

ಬೇಕಾಗುವ ಸಾಮಗ್ರಿ: ಬೇಲದ ಹಣ್ಣಿನ ಪಲ್ಪ್ ಒಂದು ಕಪ್, ಸಕ್ಕರೆ 2 ಕಪ್, ನೀರು ಅರ್ಧ ಕಪ್, ಏಲಕ್ಕಿ 4,
ಮಾಡುವ ವಿಧಾನ: ಮೊದಲಿಗೆ ಸಕ್ಕರೆ ಮತ್ತು ನೀರು ಹಾಕಿ ಕುದಿಯಲು ಬಿಡಿ. ಕುದಿ ಬಂದ ನಂತರ ಹಣ್ಣಿನ ಪಲ್ಪ್ ಹಾಕಿ. ಪಾಕ ಬರುವವರೆಗೂ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿದರೆ ಬೇಲದ ಹಣ್ಣಿನ ಜಾಮ್ ಸವಿಯಲು ಸಿದ್ಧ.

ADVERTISEMENT

ರುಚಿಯಾದ ಚಟ್ನಿ

ಬೇಕಾಗುವ ಸಾಮಗ್ರಿ: ಬೇಲದ ಹಣ್ಣು ಅರ್ಧ, ಕೊತ್ತಂಬರಿ ಸೊಪ್ಪು ಒಂದು ಕಟ್ಟು, ತೆಂಗಿನ ಕಾಯಿ ಒಂದು ಕಪ್, ಉಪ್ಪು, ಒಣ ಮೆಣಸು,
ಮಾಡುವ ವಿಧಾನ: ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ ಕರಿಬೇವು, ಮೊದಲು ಒಣಮೆಣಸು ಮತ್ತು ಕೊತ್ತುಂಬರಿ ಸೊಪ್ಪನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಉಳಿದ ಎಲ್ಲಾ ವಸ್ತುಗಳನ್ನು ಹಾಕಿ ನುಣ್ಣನೆ ರುಬ್ಬಿ, ಒಗ್ಗರಣೆ ಕೊಡಿ. ಈಗ ಸವಿಯಲು ಚಟ್ನಿ ಸಿದ್ದ. ಇದು ಹುಳಿ, ಸಿಹಿ ಮತ್ತು ಖಾರ ಮಿಶ್ರಿತವಾಗಿರುತ್ತದೆ.

ಪುಳಿಯೋಗರೆ

ಬೇಕಾಗುವ ಸಾಮಗ್ರಿಗಳು: ಬೇಲದ ಹಣ್ಣು, ಉಪ್ಪು, ಒಣಮೆಣಸು ಉದುರಾದ ಅನ್ನ, ಒಣಮೆಣಸು ಆರು, ಉದ್ದಿನ ಬೇಳೆ 2 ಚಮಚ, ಕಡಲೇಬೇಳೆ 2 ಚಮಚ, ಕೊತ್ತಂಬರಿ ಬೀಜ 2 ಚಮಚ, ಜೀರಿಗೆ 2 ಚಮಚ, ಮೆಂತೆ , ಇಂಗು, ಅರಿಷಿಣ, ಕೊಬ್ಬರಿ ತುರಿ, ಕೊಬ್ಬರಿ ಎಣ್ಣೆ, ಒಗ್ಗರೆಣೆಗೆ ಎಣ್ಣೆ , ಶೇಂಗಾ, ಉದ್ದಿನ ಬೇಳೆ, ಕರಿಬೇವು.
ಮಾಡುವ ವಿಧಾನ: ಮೊದಲು ಎಲ್ಲಾ ಮಸಾಲ ಪದಾರ್ಥಗಳನ್ನು ಹುರಿದು ಪುಡಿಮಾಡಿಕೊಳ್ಳಿ. ಒಗ್ಗರೆಣೆಗೆ ಇಟ್ಟು ಉಳಿದ ವಸ್ತು ಹಾಕಿ. ಅದಕ್ಕೆ ಬೇಲದ ಹಣ್ಣನ್ನು ಕಿವುಚಿ ಹಾಕಿ. ಉಪ್ಪು ಹಾಕಿ, ಕುದಿಸಿ. ಆಮೇಲೆ ಮಸಾಲ ಪುಡಿ ಹಾಕಿ, ಕುದಿಸಿ, ಇಳಿಸಿ. ನಂತರ ಉದುರಾದ ಅನ್ನ ಹಾಕಿ ಕಲೆಸಿ. ಈಗ ಬೇಲದ ಹಣ್ಣಿನ ಪುಳಿಯೊಗರೆ ರೆಡಿ. ಹಣ್ಣಿನ ಹುಳಿ ಮತ್ತು ಸಿಹಿಯ ಪ್ರಮಾಣ ನೋಡಿಕೊಂಡು, ಬೇಕಾದರೆ ಸ್ವಲ್ಪ ಸೇರಿಸಿಕೊಳ್ಳಿ.

ತಂಪಿಗೆ ಪಾನಕ

ಬೇಕಾಗುವ ಸಾಮಗ್ರಿ: ಬೇಲದ ಹಣ್ಣು 1, ಬೆಲ್ಲ , ಏಲಕ್ಕಿ ಪುಡಿ ಸ್ವಲ್ಪ, ನೀರು, ಚಿಟಿಕೆ ಉಪ್ಪು
ಮಾಡುವ ವಿಧಾನ: ಮೊದಲು ಹಣ್ಣಿನ ಪಲ್ಪ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಹಾಕಿ ಕಿವುಚಿ. ನಂತರ ಶೋಧಿಸಿ. ಉಪ್ಪು ಮತ್ತು ಸಿಹಿಗಾಗಿ ಬೆಲ್ಲ ಹಾಕಿ. ಚೆನ್ನಾಗಿ ಕದಡಿ. ಏಲಕ್ಕಿ ಪುಡಿ ಹಾಕಿ. ಅಗತ್ಯವಿರುವಷ್ಟು ತಣ್ಣನೆ ನೀರು ಹಾಕಿ. ಪಾನಕ ಕುಡಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.