ADVERTISEMENT

ವರ್ಜೀನಿಯಾದಲ್ಲಿ ‘ಫುಡ್‌ ಕಾರ್ನಿವಲ್‌’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:45 IST
Last Updated 11 ಫೆಬ್ರುವರಿ 2019, 19:45 IST
ಫುಡ್‌ ಕಾರ್ನಿವಲ್‌
ಫುಡ್‌ ಕಾರ್ನಿವಲ್‌   

‘ಬಾರ್ಬೆಕ್ಯು ನೇಷನ್‌’ ವೈಟ್‌ಫೀಲ್ಡ್‌ನಲ್ಲಿರುವ ವರ್ಜೇನಿಯಾ ಮಾಲ್‌ನಲ್ಲಿ ಫೆ.24ರವರೆಗೆ ‘ದಿ ಫುಡ್‌ ಕಾರ್ನಿವಲ್‌’ ಆಯೋಜಿಸಿದೆ. ಈ ಫುಡ್‌ ಫೆಸ್ಟಿವಲ್‌ನಲ್ಲಿ ರುಚಿಕರ ಆಹಾರಗಳ ಜತೆಗೆ ವಿವಿಧ ಆಟಗಳೊಂದಿಗೆ ಮನರಂಜನೆಗೂ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿಗೆ ಪ್ರವೇಶ ಪಡೆಯುತ್ತಿದ್ದಂತೆ ಗ್ರಾಹಕರಿಗೆ ಎರಡು ಕಾಯಿನ್‌ಗಳನ್ನು ನೀಡಲಾಗುತ್ತದೆ. ಆ ಕಾಯಿನ್ ಬಳಸಿ ಬೆಟ್‌ ಮಾಡುವ ಮೂಲಕ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು. ಕಾಫಿ ಮಗ್‌ಗಳು, ಕ್ಯಾಪ್‌ಗಳು ಮತ್ತು ವಾಲೆಟ್‌ಗಳನ್ನು ಗೆಲ್ಲಲು ಅವಕಾಶಗಳಿವೆ. ಜತೆಗೆ ಮ್ಯಾಜಿಕ್‌ ಶೋ, ಫೈರ್‌ ಜಗಲಿಂಗ್‌ ಕೂಡ ಇದೆ.

ಉತ್ಸವದಲ್ಲಿ ಬಫೆ ವ್ಯವಸ್ಥೆ ಇದೆ. ಸಸ್ಯಾಹಾರಿ ಸ್ಟಾರ್ಟರ್‌ಗಳಲ್ಲಿ ಕ್ಲಾಸಿ ಕಾಕ್‌ಟೇಲ್‌ ಪೊಟ್ಯಾಟೊ, ಎಕ್ಸಾಟಿಕ್‌ ವೆಜ್‌ ಮತ್ತು ತೋಪು ಟೆಪನ್‌ ಯಾಕಿ, ಮಿಯಾಮಿ ಮಶ್ರೂಮ್‌, ಹುಝಾರಿ ಪನೀರ್‌ ಟಿಕ್ಕಾ, ಮೆಕ್ಸಿನ್‌ ವೆಜ್‌ ಫಜಿಟಾಸ್‌ ಮತ್ತು ಬಿಬಿಕ್ಯೂ ಫ್ರೂಟ್‌ ಸ್ಕ್ಯೂವರ್‌ ಲಭ್ಯ. ಮಾಂಸಹಾರದಲ್ಲಿ ಆಫ್ಘಾನಿ ಚಿಕನ್‌, ಬೆಟ್‌ ಮ್ಯಾಕ್ಸ್‌ ಡ್ರಮ್‌ ಸ್ಟಿಕ್‌, ರಾಬಿಟ್‌ ಬಟರ್‌ ಮಸಾಲ, ರೋಸ್ಟೆಡ್‌ ಡಕ್‌ ಬಾರ್ಬೆಕ್ಯೂ ಸಾಸ್‌, ಚಟ್‌ ಪಟಾ ಕ್ವೇಲ್‌ ಮತ್ತು ಕಾರ್ನ್‌ಬೆರ್ರಿ ಸಾಸ್‌ ಲಭ್ಯ.

ADVERTISEMENT

ಡೆಸರ್ಟ್‌ ಸೆಕ್ಷನ್‌ನಲ್ಲಿ ಟೆರಾಮಿಸು, ಮಿಕ್ಸ್ಡ್‌ ಫ್ರೂಟ್‌ ಟಾರ್ಟ್‌, ಕಸ್ಸಾಟ ಪೇಸ್ಟ್ರಿ, ಜಿಲೇಬಿ ವಿಶೇಷವಾದವು. ವೈವಿಧ್ಯಮಯ ಶ್ರೇಣಿಯ ಕುಲ್ಫಿಗಳಿವೆ. ಪ್ರಮುಖವಾಗಿ ಓರಿಯೊ ಕುಲ್ಫಿ, ಸ್ಟ್ರಾಬೆರಿ ಕುಲ್ಫಿ, ಮ್ಯಾಂಗೊ ಕುಲ್ಫಿ ಮತ್ತು ಸಕ್ಕರೆ ರಹಿತ ಕುಲ್ಫಿ, ಈ ಫೆಸ್ಟಿವಲ್‌ನ ವಿಶೇಷತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.