ADVERTISEMENT

ಹೊಸಕೋಟೆ ದಮ್ ಬಿರಿಯಾನಿಗೆ ಒಂದೂವರೆ ಕಿ.ಮೀ. ಸಾಲು

ಏಜೆನ್ಸೀಸ್
Published 11 ಅಕ್ಟೋಬರ್ 2020, 6:45 IST
Last Updated 11 ಅಕ್ಟೋಬರ್ 2020, 6:45 IST
ಹೊಸಕೋಟೆ ದಮ್‌ ಬಿರಿಯಾನಿ–ಚಿತ್ರ: ಎಎನ್‌ಐ
ಹೊಸಕೋಟೆ ದಮ್‌ ಬಿರಿಯಾನಿ–ಚಿತ್ರ: ಎಎನ್‌ಐ   

ಬೆಂಗಳೂರು: ಅಡಿಕೆ ತಟ್ಟೆಯಲ್ಲಿ ಬಿಸಿ ಬಿಸಿ ಮಟನ್‌ ಬಿರಿಯಾನಿ ತಿನ್ನಲು ಬೆಳಿಗ್ಗೆ 4 ಗಂಟೆಯಿಂದ ಜನರು ಸಾಲುಗಟ್ಟಿ ನಿಂತಿದ್ದಾರೆ. ಬಿರಿಯಾನಿಗಾಗಿ ಸುಮಾರು ಒಂದೂವರೆ ಕಿ.ಮೀ. ವರೆಗೂ ಜನರು ನಿಂತು ಕಾಯುತ್ತಿದ್ದಾರೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿದೆ ಬ್ರೇಕ್‌ಫಾಸ್ಟ್‌ ಸ್ಪೆಷಲ್ 'ಆನಂದ್‌ ದಮ್‌ ಬಿರಿಯಾನಿ'. ನಾಟಿ ಪದಾರ್ಥಗಳನ್ನೇ ಬಳಸಿ ಮಾಡುವ ಘಮಘಮಿಸುವ ಬಿರಿಯಾನಿಗಾಗಿ ಭಾನುವಾರ ಬೆಳಿಗ್ಗೆ ಎರಡು–ಮೂರು ಗಂಟೆ ಕಾಯುವವರಿದ್ದಾರೆ.

ಗಂಟೆಗಟ್ಟಲೆ ಕಿ.ಮೀ. ವರೆಗೂ ಸಾಲಿನಲ್ಲಿ ಕಾದರೂ 'ರುಚಿಗೆ ಮೋಸ ಇಲ್ಲ' ಎಂಬುದು ಹೆಚ್ಚಿನ ಬಿರಿಯಾನಿ ಪ್ರಿಯರ ಅಂಬೋಣ. ಬೆಳ್ಳಂಬೆಳಗ್ಗೆ ಹೊಸ ರುಚಿಯನ್ನು ಹುಡುಕಿ ನಗರದಿಂದ ಹೊರಗೆ ರೈಡ್‌ ಹೊರಡುವುದು ಬಹುತೇಕ ಬೆಂಗಳೂರಿಗರ ರೂಢಿ. ಹೊಸಕೋಟೆಯಲ್ಲಿರುವ ಬಿರಿಯಾನಿ ಹೊಟೇಲ್‌ನಲ್ಲೇ ವಾರಕ್ಕೊಮ್ಮೆ ತಿಂಡಿ ತಿನ್ನುವುದು ಹಲವರಿಗೆ ಅಭ್ಯಾಸವಾಗಿ ಹೋಗಿದೆ.

ADVERTISEMENT

ಸುಮಾರು 22 ವರ್ಷಗಳಿಂದ ಆನಂದ್‌ ಬಿರಿಯಾನಿ ಹೊಟೇಲ್‌ ನಡೆಸುತ್ತಿದ್ದಾರೆ. ಹೆಚ್ಚು ಮಸಾಲೆಯಿಲ್ಲದೆ ಮತ್ತು ಹಳ್ಳಿ ಸೊಗಡಿನ ಶೈಲಿಯಲ್ಲಿ ತಯಾರಾಗುವ ನೂರಾರು ಕೆ.ಜಿ. ಕುರಿ ಮಾಂಸದ ಬಿರಿಯಾನಿ ಕೆಲವೇ ಗಂಟೆಗಳಲ್ಲಿ ಮಾರಾಟವಾಗುತ್ತದೆ. ಕುರಿ ಮಾಂಸದ ಕಾಲಿನ ಮೂಳೆ (ನಲ್ಲಿ) ಸೂಪು ಇಲ್ಲಿನ ಮತ್ತೊಂದು ವಿಶೇಷ.

ಜೀರಾ ಸಂಬಾ, ಬಾಸೂಮತಿ ಹಾಗೂ ಕೇಸರ್ ಕೇಳಿ ಎಂಬ ಮೂರು ಬಗೆಯ ಅಕ್ಕಿಯಿಂದ ಬಿರಿಯಾನಿ ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.