ಬೇಕಾಗುವ ಸಾಮಗ್ರಿಗಳು: ತುರಿದ ಬೂದುಗುಂಬಳಕಾಯಿ , ಒಂದು ಕಪ್ ಸಕ್ಕರೆ, ಕಾಲು ಟೀ ಸ್ಪೂನ್ ಕೇಸರಿ, ಅರ್ಧ ಕಪ್ ತುಪ್ಪ, 15 ಗೋಡಂಬಿ, ಕಾಲು ಟೀ ಸ್ಪೂನ್ ಏಲಕ್ಕಿ
ಮಾಡುವ ವಿಧಾನ: ತುರಿದ ಬೂದುಗುಂಬಳಕಾಯಿಯನ್ನು ಅದರ ಸಿಪ್ಪೆಯಿಂದ ಬೇರ್ಪಡಿಸಿ ಸಂಪೂರ್ಣವಾಗಿ ಬೇಯಿಸಿ. ಚೆನ್ನಾಗಿ ಬೆಂದ ಬೂದುಗುಂಬಳಕಾಯಿಗೆ ಸಕ್ಕರೆ, ಕೇಸರಿ ಸೇರಿಸಿ. ಸಕ್ಕರೆ ಕರಗುವವರೆಗೂ ಚೆನ್ನಾಗಿ ತಿರುವಿ. ಸಕ್ಕರೆ ಪಾಕ ದಪ್ಪವಾಗುವವರೆಗೂ ಕುದಿಸಿ. ಇದಕ್ಕೆ ತುಪ್ಪ ಸೇರಿಸಿ ತಿರುವಿ. ಈಗ ಸಿದ್ಧಗೊಂಡ ಕಾಶಿ ಹಲ್ವಾಗೆ ಹುರಿದ ಗೋಡಂಬಿ, ಏಲಕ್ಕಿ ಪುಡಿಯನ್ನು ಹಾಕಿ ತಿರುವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.