ADVERTISEMENT

ಔಷಧೀಯ ಗುಣವಿರುವ ಶುಂಠಿ ತಂಬುಳಿ!

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 16:57 IST
Last Updated 14 ಜೂನ್ 2017, 16:57 IST
ಔಷಧೀಯ ಗುಣವಿರುವ ಶುಂಠಿ ತಂಬುಳಿ!
ಔಷಧೀಯ ಗುಣವಿರುವ ಶುಂಠಿ ತಂಬುಳಿ!   

ಹೊಟ್ಟೆಯುಬ್ಬರ, ಅಜೀರ್ಣ , ನೆಗಡಿ, ಗಂಟಲು ನೋವು, ಕೆಮ್ಮು  ಮತ್ತು ತಲೆನೋವು ನಿವಾರಣೆಗೆ ಮನೆಗಳಲ್ಲಿ ಸಾಮಾನ್ಯವಾಗಿ ಶುಂಠಿ ಬಳಸುತ್ತಾರೆ. ಅಡುಗೆ ರುಚಿ ಹೆಚ್ಚಿಸುವ ಮತ್ತು ಔಷಧೀಯ ಗುಣವಿರುವ ಶುಂಠಿಯನ್ನು ಬಳಸಿ ತಂಬುಳಿ ಮಾಡಬಹುದು. ಶುಂಠಿ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ  ನೀಡಲಾಗಿದೆ.

ಸಾಮಗ್ರಿಗಳು
1. ಶುಂಠಿ -                 ಒಂದು ಇಂಚು
2. ತೆಂಗಿನ ತುರಿ -        1/4 ಕಪ್
3. ಉಪ್ಪು –                ರುಚಿಗೆ ತಕ್ಕಷ್ಟು
4. ಮೊಸರು -              2 ಕಪ್

ಒಗ್ಗರಣೆಗೆ:
ಎಣ್ಣೆ -                      ಒಂದು ಸ್ಪೂನ್
ಸಾಸಿವೆ -                 ಸ್ವಲ್ಪ
ಇಂಗು -                   ಚಿಟಿಕೆ
ಒಣಮೆಣಸಿನ ಕಾಯಿ -  02
ಕರಿಬೇವು -               ಸ್ವಲ್ಪ
ಮಾಡುವ ವಿಧಾನ: ಸ್ವಲ್ಪ ಸ್ವಲ್ಪ  ನೀರು ಸೇರಿಸುತ್ತಾ ತೆಂಗಿನ ತುರಿ ಹಾಗೂ ಶುಂಠಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಇಂಗು, ಒಣಮೆಣಸಿನ ಕಾಯಿ, ಕರಿಬೇವು ಸೇರಿಸಿ ಹುರಿಯಿರಿ. ನಂತರ ರುಬ್ಬಿದ ಮಿಶ್ರಣ, ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ, ತಣ್ಣಗಾದ ನಂತರ ಗಟ್ಟಿ ಮೊಸರಿಗೆ ಸೇರಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.