ADVERTISEMENT

ದೇಹಕ್ಕೆ ತಂಪು ನೀಡುವ ಮೆಂತ್ಯ ಸೊಪ್ಪಿನ ಪಲ್ಯ!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 14:17 IST
Last Updated 7 ಏಪ್ರಿಲ್ 2017, 14:17 IST
ದೇಹಕ್ಕೆ ತಂಪು ನೀಡುವ ಮೆಂತ್ಯ ಸೊಪ್ಪಿನ ಪಲ್ಯ!
ದೇಹಕ್ಕೆ ತಂಪು ನೀಡುವ ಮೆಂತ್ಯ ಸೊಪ್ಪಿನ ಪಲ್ಯ!   

ಬಿರು ಬೇಸಿಗೆಯಲ್ಲಿ ಜನರು ತಂಪು ನೀಡುವ ಆಹಾರ ಪದಾರ್ಥಗಳನ್ನು ಸೇವಿಸುವುದು ಹೆಚ್ಚು. ಈ ಬಾರಿ ಪ್ರಜಾವಾಣಿಯು ದೇಹಕ್ಕೆ ತಂಪು ನೀಡುವ ಮತ್ತು ಸಾಕಷ್ಟು ಖನಿಜಾಂಶಗಳಿರುವ ಮೆಂತ್ಯ ಸೊಪ್ಪಿನ ಪಲ್ಯ ರೆಸಿಪಿಯನ್ನು ಈ ವಾರಾಂತ್ಯದಲ್ಲಿ ತಂದಿದೆ.  ರೆಸಿಪಿ ವಿಡಿಯೊ ನೋಡಿ ಮೆಂತ್ಯ ಸೊಪ್ಪಿನ ಪಲ್ಯ ತಯಾರಿಸಿ ಚಪಾತಿಯೊಂದಿಗೆ ಸವಿಯಿರಿ!

ಸಾಮಗ್ರಿಗಳು
1. ಮೆಂತ್ಯ ಸೊಪ್ಪು ಹೆಚ್ಚಿದ್ದು -   2 ಕಪ್
2. ಉಪ್ಪು -                        ಸ್ವಲ್ಪ

ರುಬ್ಬುವುದಕ್ಕೆ:
ನೆನೆಸಿದ ಕಡಲೆಬೇಳೆ -         1/4 ಕಪ್
ಅರಿಶಿನ -                          ಸ್ವಲ್ಪ
ತೆಂಗಿನತುರಿ -                    1/4 ಕಪ್
ಹಸಿಮೆಣಸಿನ ಕಾಯಿ -          

ADVERTISEMENT

ಒಗ್ಗರಣೆಗೆ:-
ಎಣ್ಣೆ -                            02 ಸ್ಪೂನ್
ಸಾಸಿವೆ -                       ಸ್ವಲ್ಪ
ಜೀರಿಗೆ -                        ಸ್ವಲ್ಪ
ಒಣಮೆಣಸಿನ ಕಾಯಿ -        02
ಕರಿಬೇವು -                     ಸ್ವಲ್ಪ

ಮಾಡುವ ವಿಧಾನ: ರುಬ್ಬುವುದಕ್ಕೆ ಬೇಕಾದ ಸಾಮಾಗಿರಿಗಳನ್ನು ಮಿಕ್ಸಿಯಲ್ಲಿ ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಿ. ಅದು ಪಕ್ಕಕ್ಕಿರಲಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಸಾಮಗ್ರಿಗಳನ್ನು ಸೇರಿಸಿ, ಮೆಂತ್ಯ ಸೊಪ್ಪನ್ನೂ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ಆಮೇಲೆ ರುಬ್ಬಿದ ಮಿಶ್ರಣ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.