ADVERTISEMENT

ನಾಲಿಗೆಗೆ ಖುಷಿ ಕೊಡುವ ಮದ್ರಾಸ್ ಸೂಪ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 14:31 IST
Last Updated 23 ಜನವರಿ 2017, 14:31 IST
ನಾಲಿಗೆಗೆ ಖುಷಿ ಕೊಡುವ ಮದ್ರಾಸ್ ಸೂಪ್
ನಾಲಿಗೆಗೆ ಖುಷಿ ಕೊಡುವ ಮದ್ರಾಸ್ ಸೂಪ್   

ಘಮ ಘಮ ಪರಿಮಳ ಸೂಸುವ ಮದ್ರಾಸ್ ಸೂಪ್ ಸವಿಯುವುದೇ ಒಂದು ಚೆಂದ! ನಾಲಿಗೆಗೆ ಖುಷಿ ಕೊಡುವ ರಸವತ್ತಾದ, ರುಚಿಕಟ್ಟಾದ ಮದ್ರಾಸ್ ಸೂಪ್‌ ಮಾಡುವುದು ಬಹಳ ಸುಲಭ. ಇದರ ರೆಸಿಪಿ ಮತ್ತು ಮಾಡುವ ವಿಧಾನಕ್ಕೆ ಈ ವಿಡಿಯೊ ನೋಡಿ.

ಬೇಕಾಗುವ ಸಾಮಗ್ರಿಗಳು:
1. ಟೊಮ್ಯಾಟೊ ಹೆಚ್ಚಿದ್ದು         3
2. ಈರುಳ್ಳಿ ಹೆಚ್ಚಿದ್ದು               01
3. ಕ್ಯಾರೇಟ್ ತುರಿದಿದ್ದು           01
4. ತೆಂಗಿನ ಕಾಯಿ ತುರಿದಿದ್ದು     1/2 ಕಪ್
5. ನೀರು  2ಕಪ್ (ಇವುಗಳನ್ನು ಕುಕ್ಕರ್‍ನಲ್ಲಿ 3 ವಿಶಲ್ ಕೂಗಿಸುವುದು)
6. ಕೊತ್ತಂಬರಿಸೊಪ್ಪು            ಸ್ವಲ್ಪ
7. ಉಪ್ಪು                           ಸ್ವಲ್ಪ
8. ಮೆಣಸಿನ ಪುಡಿ                ಸ್ವಲ್ಪ
9. ಎಣ್ಣೆ                             ಸ್ವಲ್ಪ

ವೈಟ್ ಸಾಸ್ : ಸ್ವಲ್ಪ
ಬೆಣ್ಣೆ            : ಒಂದು ಚಮಚ
ಮೈದಾ        : ಒಂದು ಚಮಚ
ಹಾಲು          : ಒಂದು ಕಪ್

ADVERTISEMENT

ಮಾಡುವ ವಿಧಾನ: ಬಾಂಡ್ಲಿಯಲ್ಲಿ ಬೆಣ್ಣೆ ಕರಗಿಸಿ ಇದಕ್ಕೆ ಮೈದಾ, ಹಾಲು ಸೇರಿಸಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ ತಯಾರಾದ ಟೊಮ್ಯಾಟೊ ರಸವನ್ನು ಹಾಕಿ ಜೊತೆಗೆ ಉಪ್ಪು, ಮೆಣಸಿನ ಹುಡಿ ಬೆರೆಸಿ ಚೆನ್ನಾಗಿ ಕುದಿಸಿ ಕಡೆಯಲ್ಲಿ ಕೊತ್ತ್ತಂಬರಿ ಸೊಪ್ಪು ಸುರಿದರೆ ಮದ್ರಾಸ್ ಸೂಪ್ (ಮಾಲಗುತಣ್ಣಿ ಸೂಪ್) ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.