ADVERTISEMENT

ಬಲ್ಲವರೇ ಬಲ್ಲರು ಮೆಂತ್ಯ ಗೊಜ್ಜಿನ ರುಚಿಯ!

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 17:26 IST
Last Updated 3 ಮಾರ್ಚ್ 2017, 17:26 IST
ಬಲ್ಲವರೇ ಬಲ್ಲರು ಮೆಂತ್ಯ ಗೊಜ್ಜಿನ ರುಚಿಯ!
ಬಲ್ಲವರೇ ಬಲ್ಲರು ಮೆಂತ್ಯ ಗೊಜ್ಜಿನ ರುಚಿಯ!   

ಕೆಲವೊಮ್ಮೆ ಅಡುಗೆ ಮಾಡಲು ಬೋರ್ ಹೊಡೆದಾಗ, ಬಿಸಿ ಅನ್ನಕ್ಕೆ  ಮೆಂತ್ಯ ಗೊಜ್ಜುಪುಡಿ ಬೆರಸಿ, ತುಪ್ಪ ಹಾಕಿಕೊಂಡು ತಿಂದರೆ ಅದರ ಸವಿಯೇ ಬೇರೆ! ಆದರೆ ಮೆಂತ್ಯ ಗೊಜ್ಜುಪುಡಿ ಮಾಡುವುದು ಹೇಗೆ ಎಂಬ ಚಿಂತೆಯೇ? ಆ ಚಿಂತೆ ಬಿಡಿ!! ಪ್ರಜಾವಾಣಿ ನಿಮಗಾಗಿ ಮೆಂತ್ಯ ಗೊಜ್ಜುಪುಡಿ ಮಾಡುವುದು ಹೇಗೆ ಎಂಬ ರೆಸಿಪಿಯನ್ನು ತಂದಿದೆ. ವಿಡಿಯೊ ನೋಡುವ ಮೂಲಕ ಮೆಂತ್ಯ ಗೊಜ್ಜುಪುಡಿ ಮಾಡುವುದನ್ನು ಕಲಿಯಿರಿ.

ಬೇಕಾಗುವ ಸಾಮಗ್ರಿಗಳು :
1 ಮೆಂತ್ಯ                   1ಚಮಚ
2 ಜೀರಿಗೆ                    1/4ಚಮಚ
3 ಕಡಲೆಬೇಳೆ              1ಚಮಚ
4 ಗೋಧಿ                    2 ಚಮಚ
5 ಕರಿಬೇವು                 ಸ್ವಲ್ಪ
6 ಉದ್ದಿನಬೇಳೆ             1ಚಮಚ
7 ತೊಗರಿಬೇಳೆ             1ಚಮಚ
8 ಒಣಮೆಣಿಸಿನಕಾಯಿ       8

ಮಾಡುವ ವಿಧಾನ: ಬಾಂಡ್ಲಿಯಲ್ಲಿ ಎಣ್ಣೆ ಬಿಸಿ ಮಾಡಿ ಮೆಂತ್ಯ, ಕಡಲೇಬೇಳೆ, ಗೋದಿ, ಉದ್ದಿನಬೇಳೆ, ತೊಗರಿಬೇಳೆ ಎಲ್ಲಾ ಸಾಮಗ್ರಿಗಳನ್ನು ಹುರಿದು ತಣ್ಣಗಾದ ನಂತರ ಸ್ವಲ್ಪ ಉಪ್ಪು ಸೇರಿಸಿ  ಪುಡಿಮಾಡಿಕೊಳ್ಳಿ.

ADVERTISEMENT

ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗು, 2 ಒಣಮೆಣಸಿನ ಕಾಯಿ, ಸ್ವಲ್ಪ ಬೆಲ್ಲ ಉಪ್ಪು, ಹಾಗೂ 1/4 ಚಮಚ ಹುಣಸೆರಸ ಸೇರಿಸಿ ಚೆನ್ನಾಗಿ ಕುದಿಸಿ ಮೆಂತ್ಯ ಪುಡಿಯೊಂದಿಗೆ ಒಗ್ಗರಣೆ ಮಿಶ್ರಣ ಮಾಡಿದರೆ ಮೆಂತ್ಯ ಗೊಜ್ಜು ಪುಡಿ ಬಡಿಸಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.