ADVERTISEMENT

ನಾಕ್ಟರ್ನಲ್ ಡಯಾಲಿಸಿಸ್

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಭಾರತದಲ್ಲಿ ಸುಮಾರು ಎರಡರಿಂದ ನಾಲ್ಕು ಲಕ್ಷ ಜನರು ಗಂಭೀರ ಸ್ಥಿತಿಗೆ ಮರಳುವ ಕಿಡ್ನಿ ಸಮಸ್ಯೆಗೆ ಒಳಗಾಗುತ್ತಾರೆ (ಕಿಡ್ನಿ ವೈಫಲ್ಯ). ಕಿಡ್ನಿ ಸಮಸ್ಯೆಗೆ ಒಳಗಾಗುವ ಪ್ರಕರಣಗಳ ಸಂಖ್ಯೆ ಪ್ರತಿ ವರ್ಷ ಆತಂಕ ಮೂಡಿಸುವಷ್ಟು ವೇಗದಲ್ಲಿ ಹೆಚ್ಚುತ್ತಿದೆ.

ಪ್ರಸ್ತುತ ಇವರು ವಾರಕ್ಕೆ ಎರಡರಿಂದ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕಿದ್ದು, ಇದು ಇವರ ದೈನಿಕ ಕೆಲಸದ ಮೇಲೂ ಪರಿಣಾಮ ಬೀರಲಿದೆ.

 `ನಾಕ್ಟರ್ನಲ್ ಡಯಾಲಿಸಿಸ್~ ಅಥವಾ ರಾತ್ರಿಯ ವೇಳೆಯಲ್ಲಿ ಮಾಡಲಾಗುವ ಡಯಾಲಿಸಿಸ್ ಇಂಥ ವೃತ್ತಿಪರರಿಗೆ ದೈನಿಕ ಡಯಾಲಿಸಿಸ್ ಪಡೆಯಲು ನೆರವಾಗಲಿದೆ. ನಾಕ್ಟರ್ನಲ್ ಡಯಾಲಿಸಿಸ್‌ನಲ್ಲಿ ರೋಗಿಗಳಿಗೆ ರಾತ್ರಿ ವೇಳೆಯಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಇದರಿಂದ ಅವರ ಸಾಮಾನ್ಯ ಜೀವನದ ಮೇಲೂ ಪರಿಣಾಮ ಆಗದು.

 `ರೋಗಿಗಳ ಒತ್ತಡ  ನಿಭಾಯಿಸುವಲ್ಲೂ `ನಾಕ್ಟರ್ನಲ್ ಡಯಾಲಿಸಿಸ್~ ನೆರವಾಗಲಿದೆ. ಇದು ಕಾರ್ಪೊರೆಟ್ ವಲಯದ ಸಿಬ್ಬಂದಿಗಳು ಮತ್ತು ಯುವ ಕಿಡ್ನಿ ಸಂಬಂಧಿತ ರೋಗಿಗಳಲ್ಲಿ ಜನಪ್ರಿಯವಾಗಿದೆ. ಸಾಮಾನ್ಯವಾದ ಹೆಮೊಡಯಾಲಿಸಿಸ್‌ಗೆ ಹೋಲಿಸಿದರೆ ಇದು, ನಿಧಾನ, ಸೂಕ್ತ.

ಇದು, ರಕ್ತವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲಿದೆ~ ಎಂದು ನೆಪ್ರೋಪ್ಲಸ್‌ನ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣನ್ ಹೇಳುತ್ತಾರೆ. `ನಾಕ್ಟರ್ನಲ್ ಡಯಾಲಿಸಿಸ್~ ಎಂಬುದು ಹೊಸ ಕಲ್ಪನೆ. ಭಾರತದಲ್ಲಿ ಇನ್ನೂ ಜನಪ್ರಿಯವಾಗಬೆಕು. ಆದರೆ, ಇದು, ಜನರಿಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ನೆರವಾಗಲಿದೆ.
 
ಇದು, ರೋಗಿಗಳು ಗುಣಮಟ್ಟದ ಜೀವನ ಸಾಧಿಸಲು ಉತ್ತೇಜನ ನೀಡಲಿದೆ ಎಂದು ನೆಪ್ರೊಪ್ಲಸ್ ಕಿಡ್ನಿ ಕೇರ್ ಕ್ಲಿನಿಕ್ಸ್‌ನ ನಿರ್ದೇಶಕ (ರೋಗಿಗಳ ಸೇವೆ) ಮತ್ತು ಸಹ ಸ್ಥಾಪಕ ಕಮಲ್ ಷಾ ತಿಳಿಸುತ್ತಾರೆ. ವಿಶೇಷ ಎಂದರೆ, ಕಮಲ್ ಷಾ ಅವರು ಸ್ವತಃ ಕಳೆದ 15 ವರ್ಷದಿಂದ ಡಯಾಲಿಸಿಸ್ ಸೇವೆಗೆ ಒಳಗಾಗುತ್ತಿದ್ದಾರೆ. ಇವರು, ಪ್ರತಿ ರಾತ್ರಿ ತಮ್ಮ ಮನೆಯಲ್ಲಿಯೇ ಡಯಾಲಿಸಿಸ್‌ಗೆ ಒಳಗಾಗುತ್ತಾರೆ.

ರೋಗಿಗಳು ಸಾಮಾನ್ಯ ಜೀವನ ನಡೆಸಲು ನೆರವಾಗುವುದರ ಜೊತೆಗೆ ನಾಕ್ಟರ್ನಲ್ ಡಯಾಲಿಸಿಸ್ ಇನ್ನೂ ಅನೇಕ ಲಾಭಗಳನ್ನು ಮಾನಸಿಕವಾಗಿ ಮತ್ತು ವೈದ್ಯಕೀಯವಾಗಿ ನೀಡಲಿದೆ. ನಾಕ್ಟರ್ನಲ್ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಚಿಕಿತ್ಸೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ಒಗ್ಗಿಕೊಳ್ಳುತ್ತಾರೆ.

ಇದು, ರೋಗಿಗಳ ಆರೋಗ್ಯ ಉತ್ತಮ ಪಡಿಸಲಿದೆ. ಇದಷ್ಟೇ ಅಲ್ಲ, ನಾಕ್ಟರ್ನಲ್ ಡಯಾಲಿಸಿಸ್ ರೋಗಿಗಳಿಗೆ ಉತ್ತಮ ನಿದ್ರೆ ಮಾಡುವ ಅವಕಾಶ ಕಲ್ಪಿಸಲಿದೆ. ಇದು, ರಾತ್ರಿಯವೇಳೆ ಡಯಾಲಿಸಿಸ್ ನಡೆಯುತ್ತಿರುವಂತೆಯೇ ಸಾಧ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.