ADVERTISEMENT

ಮಧುಮೇಹ ನಿರ್ವಹಣೆಗೆ 10 ಸೂತ್ರಗಳು

ಡಾ.ಎಂ.ವಿ.ಜಲಿ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

೧.ಮಧುಮೇಹ ನಿಯಂತ್ರಣ ಎಂದರೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸ್ಥಿರವಾಗಿಸುವುದು ಆಗಿದೆ. ನಿಯಮಿತ ಪರಿಶೀಲನೆಯಿಂದ ಏರುಪೇರುಗಳ ಮೇಲೆ ನಿಗಾ ಇಡಬಹುದು. ಎಚ್‌ಬಿಎ೧ಸಿ ತಪಾಸಣೆಯಿಂದ  ಕಳೆದ 2–3 ತಿಂಗಳ ಅವಧಿಯಲ್ಲಿ ಸರಾಸರಿ ಸಕ್ಕರೆ ಅಂಶ  ತಿಳಿಯಬಹುದು. ಮಧುಮೇಹದಿಂದ ಬಳಲುವ ಬಹುತೇಕ ರೋಗಿಗಳ ಗುರಿ ಎಂದರೆ ಸಕ್ಕರೆ ಅಂಶವನ್ನು ಶೇ. ೭ಕ್ಕಿಂತಲೂ ಕಡಿಮೆ ಇಡುವುದು. ಎಚ್‌ಬಿಎ೧ಸಿ ಪರೀಕ್ಷೆಯು ಶೇ ೭.೫ ಕ್ಕಿಂತಲೂ ಅಧಿಕ ಪ್ರಮಾಣವನ್ನು ತೋರಿಸಿದರೆ ಚಿಕಿತ್ಸೆಯ ಕ್ರಮವನ್ನು ಬದಲಿಸಬಹುದು. ಟೈಪ್-೨ ಮಧುಮೇಹ ಇದ್ದಲ್ಲಿ ಚಿಕಿತ್ಸೆಯ ಕ್ರಮವನ್ನು ನಿಯಮಿತ ಕಾಲಾವಧಿಯಲ್ಲಿ ಬದಲಿಸಬೇಕು. ಎಚ್‌ಬಿಎ೧ಸಿ ಪ್ರಮಾಣ ಶೇ ೯.೫ಕ್ಕೂ ಹೆಚ್ಚು ಇದ್ದಲ್ಲಿ ಇನ್ಸುಲಿನ್ ಅಗತ್ಯವಿರುತ್ತದೆ.

೨.ಮಧುಮೇಹಿಗಳು ರಕ್ತದೊತ್ತಡ ೧೩೦/೮೦ ಇದ್ದರೆ ಕಿಡ್ನಿ ಸ್ಥಿತಿ ಆರೋಗ್ಯ ಚೆನ್ನಾಗಿದೆ ಎಂಬುದನ್ನು ತೋರಿಸುತ್ತದೆ. ಇದರಲ್ಲಿ ಏರುಪೇರಾದರೆ ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

೩.ಬೊಜ್ಜು ಪ್ರಮಾಣ ೧೦೦ ಎಂಜಿ/ಡಿಎಲ್‌ಗಿಂತಲೂ ಕಡಿಮೆ ಇರಬೇಕು. ಎಚ್‌ಡಿಎಲ್ (ಗುಡ್) ಬೊಜ್ಜು ಪ್ರಮಾಣವು ೫೦ ಎಂಜಿ/ಡಿಎಲ್ ಗೂ ಅಧಿಕ ಇರಬೇಕು ಮತ್ತು ಟ್ರಿಗ್ಲಿಸೆರೈಡ್ಸ್ ಪ್ರಮಾಣವು ೧೫೦ಎಂಜಿ/ಡಿಎಲ್‌ಗಿಂತಲೂ ಕಡಿಮೆ ಇರಬೇಕು.

೪.ಮಧುಮೇಹ ನೆಪ್ರೋಥೆರಪಿಯ ಅಪಾಯಗಳು ಇದ್ದಲ್ಲಿ ಹೃದ್ರೋಗ ಸಮಸ್ಯೆ ಮತ್ತು ರೆಟಿನೋಪಥಿ ಸಮಸ್ಯೆ ಇರುವುದರ ಖಾತರಿಗೂ ತಪಾಸಣೆಗೂ ಒಳಗಾಗುವುದು ಸೂಕ್ತ.

೫.ಔಷಧಗಳು, ಇನ್ಸುಲಿನ್, ಆಹಾರದ ಯೋಜನೆ, ದೈಹಿಕ ಚಟುವಟಿಕೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶಗಳನ ನಿರ್ವಹಣೆ ಕುರಿತು ವೈದ್ಯರ ಸಲಹೆ ಪಾಲಿಸುವುದು ಅಗತ್ಯ.

೬.ಆಗಾಗ್ಗೆ ಮೂತ್ರ ವಿಸರ್ಜಿಸಬೇಕು ಎಂಬ ಬಯಕೆ ಅಥವಾ  ಉರಿಮೂತ್ರ ಇಲ್ಲವೇ ಮೂತ್ರದೊಂದಿಗೆ ರಕ್ತದ ಕಲೆ ಕಂಡು ಬಂದಲ್ಲಿ ತಕ್ಷಣವೇ ಈ ಸಮಸ್ಯೆಯ ಕುರಿತು ವೈದ್ಯರ ಗಮನಕ್ಕೆ ತರಬೇಕು.

೭.ಯಾವುದೇ ನೋವು ನಿವಾರಕ ಅಥವಾ ಹರ್ಬಲ್‌ ಔಷಧಿ ಸೇವನೆಗೆ ಮುನ್ನ  ಅದನ್ನು ವೈದ್ಯರ ಗಮನಕ್ಕೆ ತರಬೇಕು.

೮.ಧೂಮಪಾನ ನಿಲ್ಲಿಸಬೇಕು. ಪ್ರತಿಯೊಬ್ಬರು ಕನಿಷ್ಠ ೩೦ ನಿಮಿಷ ವ್ಯಾಯಾಮ ಮಾಡಬೇಕು. ಸುಸ್ತೆನಿಸಿದರೆ ಕೂಡಲೇ ವಿರಮಿಸಬೇಕು ಹಾಗೂ ತೊಂದರೆ ಎನಿಸಿದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

೯.ಮಧುಮೇಹಿಗಳು ವೈದ್ಯರ ಶಿಫಾರಸ್ಸಿನ ಮೇರೆಗೆ ಪ್ರೋಟೀನ್ ಅಂಶಗಳನ್ನು ಪಡೆಯಬೇಕು    ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರೆ ಆಹಾರ ಪಥ್ಯ ಸಲಹೆಗಾರರು ಪ್ರೊಟೀನ್‌ ಅಂಶ ಕುಗ್ಗಿಸಲು ಸೂಚಿಸಬಹುದು.

೧೦.ರಕ್ತದಲ್ಲಿನ ಸಕ್ಕರೆ ಅಂಶ  ರಕ್ತದೊತ್ತಡ ನಿಯಂತ್ರಣ ಹಾಗೂ ಮೂತ್ರಪಿಂಡದ ಆರೋಗ್ಯ ತಪಾಸಣೆ ನಿಯಮಿತವಾಗಿ ಮಾಡಿಕೊಂಡರೆ ಮಧುಮೇಹವನ್ನು ಸಮರ್ಪಕವಾಗಿ ನಿರ್ವಹಿಸಿದಂತೆಯೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.