ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆಗೆ ಅನುಕೂಲವಾಗಲೆಂದು ಜೈನ್‌ಮಿಲನ್ ಹೆಲ್ತ್‌ಕೇರ್ ಫೌಂಡೇಷನ್ ‘ಆರೋಗ್ಯ ರಕ್ಷಾ ಯೋಜನೆ’ ಆರಂಭಿಸಿದೆ.
ಜೈನ್‌ಮಿಲನ್ ಹೆಲ್ತ್‌ಕೇರ್ ಅಧ್ಯಕ್ಷ, ಔಷಧ ಉದ್ಯಮಿ ಎಸ್.ಬಿ.ಸುರೇಶ್ ಜೈನ್, ಬಡವರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಬೇಕೆಂಬ ಉದ್ದೇಶದಿಂದ, 3 ವರ್ಷಗಳ ಹಿಂದೆ ‘ಆರೋಗ್ಯ ರಕ್ಷಾ ಯೋಜನೆ’ ಆರಂಭಿಸಿದರು. ಪ್ರಸ್ತುತ ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ.
ಜೈನ್‌ಮಿಲನ್‌ನ ಮೈಸೂರು ವಿಭಾಗದ ಉಪಾಧ್ಯಕ್ಷ ಎನ್.ಪ್ರಸನ್ನಕುಮಾರ್, ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳದ ಸುರೇಂದ್ರಕುಮಾರ್ ಅವರು ಬಯೋಕಾನ್ ಫೌಂಡೇಶನ್‌ನ ರಾಣಿ ದೇಸಾಯಿ, ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಹಾಗೂ ಎಚ್‌ಡಿಎಫ್‌ಸಿ ಅವರೊಡನೆ ಈ ವಿಚಾರವನ್ನು ಚರ್ಚಿಸಿ ಒಟ್ಟಾಗಿ ಈ ಯೋಜನೆಯನ್ನು ರೂಪಿಸಿ ರಾಜ್ಯದಾದ್ಯಂತ ಜಾರಿಗೊಳಿಸಲಾಗಿದೆ.
ಏನಿದು ಆರೋಗ್ಯ ರಕ್ಷಾ ಯೋಜನೆ
‘ಆರೋಗ್ಯ ರಕ್ಷಾ ಯೋಜನೆ’ಯಲ್ಲಿ ಸದಸ್ಯರಾದವರು ಈ ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಶೇ 70ರಿಂದ 90ರಷ್ಟು ರಿಯಾಯಿತಿ ಪಡೆಯಬಹುದು.
ನೀವು ಸದಸ್ಯರಾಗಿ
ಆರೋಗ್ಯ ರಕ್ಷಾ ಯೋಜನೆ ಸದಸ್ಯರಾಗಲು ವರ್ಷಕ್ಕೆ 200 ರೂಪಾಯಿ ಪಾವತಿಸಿದರೆ ಸಾಕು. ಹೆಚ್ಚು ಜನ ಸದಸ್ಯರಾದಂತೆ ಇದು ಕಡಿಮೆಯಾಗುತ್ತಾ ಬರುತ್ತದೆ. 0-70 ವಯೋಮಿತಿಯವರು ಇದರ ಸದಸ್ಯರಾಗಬಹುದು. ನೀವು ಮಾಡಬೇಕಾದುದು ಇಷ್ಟೆ. ಸ್ಥಳೀಯ ಜೈನ್‌ಮಿಲನ್ ಶಾಖೆಯಿಂದ ಒಂದು ಅರ್ಜಿ ಪಡೆದು, ಅದನ್ನು ತುಂಬಿ. ನೀವು ಮತ್ತು ನಿಮ್ಮ ಕುಟುಂಬದ ಪಾಸ್‌ಪೋರ್ಟ್ ಸೈಜಿನ ಭಾವಚಿತ್ರಗಳು, ಚುನಾವಣಾ ಗುರುತಿನ ಪತ್ರ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ಗಳನ್ನು ಆಯಾ ಪ್ರದೇಶಗಳ ಜೈನ್‌ಮಿಲನ್ ಶಾಖೆಗೆ ತಲುಪಿಸಿದರೆ ಸಾಕು. ಸದಸ್ಯತ್ವ ದೊರೆಯುತ್ತದೆ.
ಈ ಕೆಳಕಂಡ ಶಸ್ತ್ರ ಚಿಕಿತ್ಸೆಗೂ ಇದು ಅನ್ವಯ
ಸಿಜೇರಿಯನ್ ಸೆಕ್ಷನ್ ಮತ್ತು ಸಾಮಾನ್ಯ ಪ್ರಸವ, ಅಪೆಂಡಿಕ್ಸ್ ತೆಗೆದು ಹಾಕುವುದು, ಹರ್ನಿಯಾ, ಗರ್ಭಕೋಶ ತೆಗೆಯುವುದು (ಷರತ್ತುಗಳು ಅನ್ವಯಿಸುತ್ತವೆ), ಬೈಪಾಸ್, ಕ್ಲೋಸ್ಡ್ ಹಾರ್ಟ್ ಸರ್ಜರಿ ಮತ್ತು ಕರೋನರಿ ಅಂಜಿಯೋಗ್ರಾಂ, ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ, ಮೂಳೆಗಳ ಮುರಿತ, ಇಎನ್‌ಟಿ ಶಸ್ತ್ರಚಿಕಿತ್ಸೆಗಳು ಮತ್ತು ಟಾನ್ಸಿಲ್ ತೆಗೆಯುವುದು, ಗಾಲ್ ಸ್ಟೋನ್ ತೆಗೆಯುವುದು ಹಾಗೂ ಸಣ್ಣಗಾತ್ರದ ಗಡ್ಡೆಗಳನ್ನು ತೆಗೆಯುವುದು.
ಮಾಹಿತಿಗೆ : ಜ್ವಾಲಿನಿ ದೂ-9731546080 (ಬೆಂಗಳೂರು) ಎಸ್.ಬಿ.ಸುರೇಶ್ ಜೈನ್ ದೂ; 9986898465 (ಮೈಸೂರು) ಎಸ್.ಜಿ. ಅಮರ್‌ಜೀತ್ 9448783114 (ಸಾಲಿಗ್ರಾಮ) ಎಂ.ಆರ್.ಸುನಿಲ್‌ಕುಮಾರ್ 9980849136 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.