ADVERTISEMENT

ಮಕ್ಕಳಾಗದ ಮಹಿಳೆಯರಿಗೆ ಅಸಿಸ್ಟೆಡ್ ಹ್ಯಾಚಿಂಗ್ ವಿಧಾನ ಸಹಕಾರಿ

ಡಾ.ಎಸ್.ಎಸ್.ವಾಸನ್
Published 6 ಸೆಪ್ಟೆಂಬರ್ 2019, 19:30 IST
Last Updated 6 ಸೆಪ್ಟೆಂಬರ್ 2019, 19:30 IST
   

ಅಸಿಸ್ಟೆಡ್ ಹ್ಯಾಚಿಂಗ್ ಎನ್ನುವುದು ಪ್ರಯೋಗಾಲಯದ ಒಂದು ವಿಧಾನವಾಗಿದ್ದು, ಇದನ್ನು ಕೆಲವೊಮ್ಮೆ ವಿಟ್ರೊ ಫಲೀಕರಣ (ಐವಿಎಫ್) ಚಿಕಿತ್ಸೆಯೊಂದಿಗೆ ನಿರ್ವಹಿಸಲಾಗುತ್ತದೆ. ಐವಿಎಫ್ ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಅಂಡಾಣುವನ್ನು ಸೇರಿಸಲಾಗುತ್ತದೆ. ವೀರ್ಯವು ಅಂಡಾಣುವನ್ನು ಭೇದಿಸುವಲ್ಲಿ ಯಶಸ್ವಿಯಾದಾಗ ಅದನ್ನು ಫಲವತ್ತತೆ ಎಂದು ಪರಿಗಣಿಸಲಾಗುತ್ತದೆ. ಐವಿಎಫ್ ಅವಧಿಯಲ್ಲಿ, ಫಲವತ್ತಾದ ಅಂಡಾಣುವನ್ನು 3 ರಿಂದ 6 ದಿನಗಳವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಅದು ವಿಭಜನೆಗೊಂಡು, ಭ್ರೂಣವಾಗಿ ಬೆಳೆಯುತ್ತದೆ. ಆಗ ಅದನ್ನು ಪರೀಕ್ಷೆ ಮಾಡಿ ಎಲ್ಲಾ ರೀತಿಯಿಂದ ಆರೋಗ್ಯವಾಗಿದೆಯೇ ಎನ್ನುವುದನ್ನು ಪರಿಶೀಲಿಸಿ ಮಹಿಳೆಯ ಗರ್ಭಾಶಯಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಭ್ರೂಣವು ಬೆಳವಣಿಗೆಯಾಗುವಾಗ, ಅದು ಕೋಶಗಳಿಂದ ಆವೃತವಾಗಿರುತ್ತದೆ ಮತ್ತು ಅದು ರಕ್ಷಣಾತ್ಮಕ ಕೋಶವಾಗಿ (ಜೋನಾ ಪೆಲ್ಲುಸಿಡ) ರೂಪುಗೊಳ್ಳುತ್ತದೆ. ಭ್ರೂಣವು ಬೆಳೆಯುತ್ತ ಹೋದಂತೆ ಈ ಕೋಶದಿಂದ ಸ್ವಾಭಾವಿಕವಾಗಿ ಬೇರ್ಪಡುತ್ತದೆ. ಕೆಲವೊಮ್ಮೆ ಭ್ರೂಣದ ಹೊರ ಕವಚದಲ್ಲಿ ಸಣ್ಣ ಬಿರುಕು ಮೂಡುವಂತೆ ಒಡೆಯಲು ಪ್ರಯೋಗಾಲಯ ಸಿಬ್ಬಂದಿಗೆ ವೈದ್ಯರೇ ಹೇಳಬಹುದು. ಇದೇ ಅಸಿಸ್ಟೆಡ್ ಹ್ಯಾಚಿಂಗ್– ಭ್ರೂಣವನ್ನು ವಿಸ್ತರಿಸಲು, ಗರ್ಭಾಶಯದ ಗೋಡೆಗೆ ಅಳವಡಿಸಲು ಮತ್ತು ಅಂತಿಮವಾಗಿ ಯಶಸ್ವಿ ಗರ್ಭಧಾರಣೆ ಸಂಭವಿಸಲು ಇದು ಸಹಾಯಕ.

ಅಸಿಸ್ಟೆಡ್‌ ಹ್ಯಾಚಿಂಗ್‌ ಪ್ರಕ್ರಿಯೆಲ್ಲಿ, ಭ್ರೂಣದ ಹೊರ ಕವಚವನ್ನು ಕೃತಕವಾಗಿ ದುರ್ಬಲಗೊಳಿಸಲು ಜೋನಾ ಪೆಲ್ಲುಸಿಡದಲ್ಲಿ ಸಣ್ಣ ರಂಧ್ರವನ್ನು ಮಾಡಲಾಗುತ್ತದೆ. ಫಲವಂತಿಕೆಯ ನಂತರ ಭ್ರೂಣದ ಜೀವಕೋಶಗಳನ್ನು ಒಟ್ಟಾಗಿ ಇಡುವಲ್ಲಿ ಮತ್ತು ಭ್ರೂಣ ಗರ್ಭದಲ್ಲಿ ವಿಲೀನವಾಗುವಂತೆ ಮಾಡುವಲ್ಲಿ ಜೋನಾ ಸೀಳುವಿಕೆ ಬಹಳ ಮುಖ್ಯ. ಇದನ್ನು ಹಲವಾರು ವಿಧಗಳಲ್ಲಿ ಮಾಡಬಹುದು. ಶೆಲ್‌ನಲ್ಲಿ ಸಣ್ಣ ರಂಧ್ರವನ್ನು ಮಾಡಲು ಟೈರೋಡ್‌ನ ದ್ರಾವಣ ಎಂದು ಕರೆಯಲ್ಪಡುವ ಆಮ್ಲ ದ್ರಾವಣವನ್ನು ಉಪಯೋಗಿಸುವುದು ಒಂದು ವಿಧಾನ. ಕೋಶದಲ್ಲಿ ಬಿರುಕು ಮೂಡಿಸಲು ಲೇಸರ್ ಚಿಕಿತ್ಸೆಯನ್ನು ಬಳಸುವುದು ಮತ್ತೊಂದು ವಿಧಾನ.

ADVERTISEMENT

ಅಸಿಸ್ಟೆಡ್‌ಹ್ಯಾಚಿಂಗ್ ಮಾಡುವುದರಿಂದ ಭ್ರೂಣ ಅಥವಾ ಗರ್ಭಧಾರಣೆಯಲ್ಲಿ ಸಮಸ್ಯೆಗಳು ತಲೆದೋರಬಹುದೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುವುದುಂಟು. ಕೆಲವು ಸಂದರ್ಭಗಳಲ್ಲಿಅಸಿಸ್ಟೆಡ್‌ ಹ್ಯಾಚಿಂಗ್ ಭ್ರೂಣವನ್ನು ಹಾನಿಗೊಳಿಸಬಹುದಾದ ಸಾಧ್ಯತೆ ಇರುತ್ತದೆ.ಅವಳಿ ಭ್ರೂಣಗಳಿದ್ದಾಗ ಈ ಅಪಾಯ ಹೆಚ್ಚಬಹುದು. ಸಾಮಾನ್ಯ ಗರ್ಭಧಾರಣೆಗಳಿಗಿಂತ ಅವಳಿ ಗರ್ಭಧಾರಣೆಗಳಲ್ಲಿ ವೈದ್ಯಕೀಯ ತೊಂದರೆಗಳು ಹೆಚ್ಚು. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆಆ್ಯಂಟಿಬಯೋಟಿಕ್ಸ್‌ ಮತ್ತು ಸ್ಟೀರಾಯ್ಡ್ ಹಾರ್ಮೋನುಗಳಂತಹ ಔಷಧಿಗಳನ್ನು ಭ್ರೂಣ ವರ್ಗಾವಣೆಯ ದಿನದಂದು ಸೂಚಿಸಲಾಗುತ್ತದೆ. ಈ ಔಷಧಿಗಳ ಬಳಕೆಯಿಂದಲೂ ಒಮ್ಮೊಮ್ಮೆ ಅಡ್ಡಪರಿಣಾಮಗಳು ಉಂಟಾಗಬಹುದು.

ಅಸಿಸ್ಟೆಡ್ ಹ್ಯಾಚಿಂಗ್‌ ಲಾಭಗೇಳನು?

ಗರ್ಭಧರಿಸಲು ಐವಿಎಫ್ ಚಿಕಿತ್ಸೆಗೆ ಒಳಗಾಗುವ ಎಲ್ಲರಿಗೂ ಅಸಿಸ್ಟೆಡ್ ಹ್ಯಾಚಿಂಗ್ ಬಳಕೆಯನ್ನು ತಜ್ಞರು ಶಿಫಾರಸು ಮಾಡುವುದಿಲ್ಲ. ಕೆಲವು ರೋಗಿಗಳಿಗೆ ಮಾತ್ರವೇ ಈ ವಿಧಾನ ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸಲು ಸಹಾಯದ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಎಲ್ಲರಿಗೂ ಅಲ್ಲ, ಹಿಂದಿನ ಕೆಲವು ಐವಿಎಫ್ ಪ್ರಯತ್ನಗಳಲ್ಲಿ ಗರ್ಭಿಣಿಯಾಗಲು ವಿಫಲರಾದ ಮಹಿಳೆಯರಿಗೆ ಮತ್ತು ಗರ್ಭಧರಿಸುವ ಸಾಧ್ಯತೆಯಿಲ್ಲದ ಮಹಿಳೆಯರಿಗೆ ಮಾತ್ರ ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸಲು ಅಸಿಸ್ಟೆಡ್ ಹ್ಯಾಚಿಂಗ್ ಸಹಾಯ ಮಾಡುತ್ತದೆ. ಇದು ಯಾರಿಗೆ ಸೂಕ್ತ, ಯಾರಿಗೆ ಅಲ್ಲ ಎನ್ನುವುದನ್ನು ತಜ್ಞ ವೈದ್ಯರು ನಿರ್ಧರಿಸುತ್ತಾರೆ.

ಅಲ್ಲದೆ, ಪ್ರಿಇಂಪ್ಲಾಂಟೇಶನ್ ಜೆನೆಟಿಕ್ ಡಯಾಗ್ನೋಸಿಸ್ (ಪಿಜಿಡಿ) ಯೋಜಿಸಿದ್ದರೆ, ಫಲೀಕರಣದ ನಂತರ ಮೂರನೇ ದಿನದಲ್ಲಿ ಮಾಡಲಾಗುವ ಭ್ರೂಣದ ಅಸಿಸ್ಟೆಡ್ ಹ್ಯಾಚಿಂಗ್ ಬಯಾಪ್ಸಿಯನ್ನು (ಪಿಜಿಡಿಗೆ) ಸುಲಭಗೊಳಿಸುತ್ತದೆ. ಬಯಾಪ್ಸಿ ಸಮಯದಲ್ಲಿ, ಫಲೀಕರಣದ ನಂತರ (ಬ್ಲಾಸ್ಟೊಸಿಸ್ಟ್ ಹಂತ) ಐದನೇ ದಿನದಂದು ಭ್ರೂಣದ ಹೊರಗಿನ ಕೋಶಗಳಿಂದ (ಟ್ರೋಫೆಕ್ಟೊಡರ್ಮ್) ಒಂದು ಸಣ್ಣ ಪ್ರಮಾಣದ ಅಂಗಾಂಶವನ್ನು ತೆಗೆದುಕೊಳ್ಳಲಾಗುತ್ತದೆ. ಇದು ಟ್ರೋಫೆಕ್ಟೊಡರ್ಮ್ ಅನ್ನು ನೋಡುವ ಮತ್ತು ಹ್ಯಾಚಿಂಗ್ ಭ್ರೂಣದಲ್ಲಿನ ಕೋಶಗಳನ್ನು ತೆಗೆದುಹಾಕುವ ಕೆಲಸವನ್ನು ಸುಲಭಗೊಳಸುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.