ADVERTISEMENT

ಮಾಸ್ಕ್ ಬಳಕೆಯ ಅನಿವಾರ್ಯ ಕಾಲದಲ್ಲಿ ಸಂವಹನ ಕ್ರಮ ಹೇಗಿರಬೇಕು?

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 5:42 IST
Last Updated 25 ಆಗಸ್ಟ್ 2020, 5:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಂವಹನ ಎಂಬುದು ನಮ್ಮ ಭಾವನೆಗಳನ್ನು ಅಭಿವ್ಯಕ್ತಿಗೆ ಪೂರಕವಾದ ಅಂಶ. ಮುಖದಲ್ಲಿನ ಭಾವನೆಗಳ ಅಭಿವ್ಯಕ್ತಿಯು ಪರಿಣಾಮಕಾರಿ ಸಂವಹನಕ್ಕೆ ಅವಶ್ಯಕ. ಕೋವಿಡ್-19 ಮಹಾಮಾರಿಯು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಮುಖ ಸಾಧನವಾಗಿ ಫೇಸ್ ಮಾಸ್ಕ್ ಬಳಸುವುದನ್ನು ಜನತೆಗೆ ಕಲಿಸಿತು. ಇದರಿಂದ ಕಣ್ಣು ಹಾಗೂ ಹುಬ್ಬುಗಳ ಅಭಿವ್ಯಕ್ತಿಯು ಪ್ರಮುಖ ಪಾತ್ರ ವಹಿಸುವಂತಾಗಿದೆ. ಇದರೊಂದಿಗೆ ದೇಹದ ಭಾಷೆ ಅಂದರೆ ಬಾಡಿ ಲ್ಯಾಂಗ್ವೇಜ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮಾತುಗಳಲ್ಲದೆ ಭಾವನೆಗಳ ಅಭಿವ್ಯಕ್ತಿಗೆ ಕಣ್ಣುಗಳ ಹಾಗೂ ದೇಹದ ಭಾಷೆಯು ಅತ್ಯಂತ ಅವಶ್ಯಕ. ಆದರೆ ಫೇಸ್ ಮಾಸ್ಕ್ ಧರಿಸುವುದರಿಂದ ಮುಖದಲ್ಲಿನ ಅಭಿವ್ಯಕ್ತಿಯು ಮಸುಕಿ ಹೋಗಿದೆ.

ಮಾಸ್ಕ್ ಧರಿಸುವುದರಿಂದ ಆಗುವ ಅಡಚಣೆಗಳು :
- ಮಾಸ್ಕ್ ಧರಿಸುವುದರಿಂದ ಮಾತುಗಳು ಎದುರು ಇರುವವರಿಗೆಕೇಳಿಸದೆ ಇರಬಹುದು.
- ತುಟಿಗಳ ಚಲನವಲನಗಳನ್ನು ನೋಡಲುಸಾಧ್ಯವಾಗದು.
- ಭಾವನೆಗಳ ಮೌಕಿಕ ಅಭಿವ್ಯಕ್ತಿಗೆ ಅಡಚಣೆ ಮಾಡಬಹುದಾಗಿದೆ.
-ಸಂವಹನ ತೊಂದರೆಗಳಿರುವವರಿಗೆ, ತೊದಲು ಮಾತನಾಡುವವರಿಗೆ, ಧ್ವನಿ ತೊಂದರೆಗಳಿಂದ ಬಳಲುತ್ತಿರುವವರಿಗೆ ತೊಂದರೆಯಾಗಬಹುದಾಗಿದೆ.
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಸಹ ಪರಿಣಾಮಕಾರಿ ಸಂವಹನಕ್ಕೆ ತೊಂದರೆಯಾಗಬಹುದಾಗಿದೆ.

ಪರಿಣಾಮಕಾರಿ ಸಂವಹನಕ್ಕೆ ಏನು ಮಾಡಬೇಕು?
- ದೇಹದ ಭಾಷೆ, ಭಂಗಿ, ಸನ್ನೆಗಳು, ಅಮೌಕಿಕ ಸಂವಹನಕ್ಕೆ ಪೂರಕ.
- ಭುಜಗಳನ್ನು ಶಾಂತವಾಗಿರಿಸುವುದು ಉತ್ತಮ.
- ಕಣ್ಣುಗಳು ಹಾಗೂ ಹುಬ್ಬುಗಳನ್ನು ಸಂವಹನಕ್ಕೆ ಬಳಸಬಹುದಾಗಿದೆ.
- ಮಾಸ್ಕ್ ಧರಿಸಿ ಮಾತನಾಡುವಾಗ ಸರಿಯಾದ ಟೆಂಪೊ, ಪಿಚ್ ಅಥವಾ ಏರಿಳಿತಗಳನ್ನು ಬಳಸಬೇಕಾಗಿದೆ.
- ನಮ್ಮ ಆಂತರಿಕ ಆತಂಕ, ದುಗುಡ ಹಾಗೂ ನಕಾರಾತ್ಮಕ ಭಾವನೆಗಳನ್ನು ಮಾತಿನಲ್ಲಿ ತೋರಿಸಿಕೊಳ್ಳುವುದು ಒಳಿತಲ್ಲ.
- ಎದುರಿಗೆ ಇರುವ ಅಡ್ಡಗಾವಲುಗಳನ್ನು ಸರಿಸಿ ನೇರ ದೃಷ್ಠಿ ಸಂಪರ್ಕವನ್ನು ಹೊಂದಿ ಮಾತನಾಡುವುದು ಉತ್ತಮ.
- ಎದುರಿರುವವರಿಗೆ ಒಪ್ಪಿಗೆ ಸೂಚಿಸಲು ಹೆಬ್ಬೆರಳನ್ನು ಮೇಲೆ ತಮ್ಸ್ ಅಪ್ ಮಾಡಿ ಸೂಚಿಸಬಹುದು.
- ಕತ್ತನ್ನು ಹಿಂದೆ ಮುಂದೆ ಅಲುಗಾಡಿಸುವುದರಿಂದ ಒಪ್ಪಿಗೆಯನ್ನು ಸೂಚಿಸುತ್ತದೆ, ಎಡ ಹಾಗೂ ಬಲ ಬದಿಗೆ ಅಲುಗಾಡಿಸುವುದರಿಂದ ಒಪ್ಪಿಗೆ ಇಲ್ಲದಿರುವುದನ್ನು ಸೂಚಿಸಬಹುದಾಗಿದೆ.
- ತುಸು ಏರು ಧ್ವನಿಯಲ್ಲಿ, ನಿಧಾನವಾಗಿ ಸ್ಪಷ್ಟವಾಗಿ ಮಾತನಾಡುವುದನ್ನು ಅಭ್ಯಾಸಿಸಬೇಕಾಗಿದೆ.

ADVERTISEMENT

ಸಂವಹನ ಎಂಬುದು ಎಲ್ಲರಿಗೂ ಅವಶ್ಯಕವಿರುವ ಹಾಗೂ ಸೂಕ್ಷ್ಮವಾಗಿರುವ ಅಂಶ. ನಾವು ಕೆಲಸ ಮಾಡುವ ಸ್ಥಳದಲ್ಲಿ, ಹಿರಿಯರಲ್ಲಿ, ಮಕ್ಕಳೊಟ್ಟಿಗೆ ಮಾತನಾಡುವಾಗ ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳಿತು.

ಲೇಖಕರು: ಡಾ.ಸ್ಮಿತಾ ಡಿ.ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.