ADVERTISEMENT

ಲೈಪೋಮಾಶಸ್ತ್ರಚಿಕಿತ್ಸೆಯಿಂದ ಕೂಡಲೇ ಉಪಶಮನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST
ಭುಜದ ಮೇಲೆ ಕಾಣಿಸಿಕೊಂಡ ಲಿಪೊಮಾ ಗಡ್ಡೆ
ಭುಜದ ಮೇಲೆ ಕಾಣಿಸಿಕೊಂಡ ಲಿಪೊಮಾ ಗಡ್ಡೆ   

ಲೈಪೋಮಾ ಎನ್ನುವುದು ಚರ್ಮದ ಕೆಳಗಿರುವ ಒಂದು ಗೆಡ್ಡೆಯಾಗಿದ್ದು ಅದು ಕೊಬ್ಬಿನ ಕೋಶಗಳ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಇವುಗಳನ್ನು ಹಾನಿಕರವಲ್ಲದ ಗೆಡ್ಡೆಗಳು ಎಂದು ಪರಿಗಣಿಸಲಾಗುತ್ತದೆ. ಕೊಬ್ಬಿನ ಕೋಶಗಳು ಇರುವ ಭಾಗದ ಮೇಲೆ ಲೈಪೋಮಾಗಳು ಎಲ್ಲಿ ಬೇಕಾದರೂ ಆಗಬಹುದು. ಆದರೆ ಅವು ಸಾಮಾನ್ಯವಾಗಿ ಮುಂದೋಳು, ತೋಳು, ಹೊಟ್ಟೆ, ತೊಡೆ, ಬೆನ್ನು, ಎದೆ ಮತ್ತು ಹಣೆಯ ಮೇಲೆ ಕಾಣಿಸಿಕೊಳ್ಳುತ್ತವೆ.

ಕೆಲವು ಲೈಪೋಮಾಗಳು ಮೃದುವಾಗಿರುತ್ತವೆ ಮತ್ತು ಜನರು ಅವುಗಳ ಮೇಲೆ ಒತ್ತಿದಾಗ ಚರ್ಮದ ಕೆಳಗೆ ಸ್ವಲ್ಪ ಸರಿಯಬಹುದು. ಅವುಗಳು ಸಾಮಾನ್ಯವಾಗಿ ತಿಂಗಳುಗಳು ಅಥವಾ ವರ್ಷಗಳ ಅವಧಿಯಲ್ಲಿ ನಿಧಾನವಾಗಿ ಬೆಳೆಯುತ್ತವೆ ಮತ್ತು ಸಾಮಾನ್ಯವಾಗಿ ಸುಮಾರು 2-3 ಸೆಂಟಿಮೀಟರ್ ಗಾತ್ರವನ್ನು ತಲುಪುತ್ತವೆ. ಕೆಲವೊಮ್ಮೆ ಅವು 10 ಸೆಂ.ಮೀ.ಗಿಂತ ಹೆಚ್ಚು ಬೆಳೆಯುತ್ತವೆ.

‘ಲೈಪೋಮಾಗಳು ಸಾಮಾನ್ಯವಾಗಿ ನೋವುರಹಿತವಾಗಿರುತ್ತವೆ. ನೋಡಲು ವಿಕಾರವಾಗಿ ಕಾಣಿಸುವುದರಿಂದ ಅವುಗಳನ್ನು ತೆಗೆದುಹಾಕಬಹುದು. ಬೇರೆ ಲೈಪೋಮಾಗಳು ನೋವು ಕೊಡುತ್ತಿದ್ದರೆ ಅಥವಾ ನೋಡಲು ದೊಡ್ಡದಾಗಿದ್ದರೆ ಅವುಗಳನ್ನೂ ತೆಗೆಯಬಹುದು’ ಎನ್ನುತ್ತಾರೆ ತಜ್ಞ ವೈದ್ಯರಾದ ಡಾ.ಸಾಹೇಬಗೌಡ ಶೆಟ್ಟಿ.

ADVERTISEMENT

ಇಪ್ಪತ್ತಕ್ಕಿಂತ ಕಡಿಮೆ ಲೈಪೋಮಾಗಳನ್ನು ತೆಗೆಯುವುದಿದ್ದರೆ ಅದೇ ಭಾಗದಲ್ಲಿ ಅರಿವಳಿಕೆ ಕೊಟ್ಟು ಚಿಕ್ಕ ರಂಧ್ರದಿಂದ ಅವುಗಳನ್ನು ಹೆಚ್ಚು ಕಡಿಮೆ ದ್ರವೀಕರಿಸಿ ತೆಗೆಯಬಹುದು. ಇದರ ಕಲೆ ಕಾಣಿಸದಿರುವಷ್ಟು ಕಡಿಮೆಯಾಗಿರುತ್ತದೆ.

ಇಪ್ಪತ್ತಕ್ಕಿಂತ ಹೆಚ್ಚು ಲೈಪೋಮಾಗಳನ್ನು ತೆಗೆಯಬೇಕಾದರೆ ಪೂರ್ಣ ಅರಿವಳಿಕೆ ಕೊಟ್ಟು ಲೈಪೋಸಕ್ಷನ್ ಪದ್ಧತಿಯಿಂದ ತೆಗೆಯಲಾಗುತ್ತದೆ. ಒಂದು ಚಿಕ್ಕ ರಂಧ್ರದ ಮುಖಾಂತರ ಚಿಕ್ಕ ನಳಿಕೆಯನ್ನು ಲೈಪೋಮಾಗಳಿರುವ ಜಾಗದವರೆಗೂ ಸರಿಸಿ ಅದನ್ನು ಚಿಕ್ಕ ಚಿಕ್ಕ ತುಣುಕುಗಳನ್ನಾಗಿ ಮಾಡಿ ತೆಗೆಯಲಾಗುತ್ತದೆ. ಚಿಕಿತ್ಸೆಯ ನಂತರ ಅದೇ ದಿನ ಮನೆಗೆ ಮರಳಬಹುದು. ರಂಧ್ರಗಳು ಸುಮಾರು ಐದು ದಿನಗಳಲ್ಲಿ ವಾಸಿಯಾಗುತ್ತವೆ ಎಂದು ಡಾ.ಶೆಟ್ಟಿ ವಿವರಿಸುತ್ತಾರೆ.

‘ಚಿಕಿತ್ಸೆ ನೀಡಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ನೋವು ಕೂಡ ವ್ಯಕ್ತಿಯನ್ನು ಅಷ್ಟಾಗಿ ಬಾಧಿಸುವುದಿಲ್ಲ. ಎಲ್ಲ ವಯೋಮಾನದವರೂ ಈ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ಅವರು ಹೇಳುತ್ತಾರೆ.

l ಸಂಪರ್ಕಕ್ಕೆ: ಡಾ.ಸಾಹೇಬಗೌಡ ಶೆಟ್ಟಿ, ನವರಂಗ ಸರ್ಕಲ್, ಸಂಗೀತ ಶೋರೂಂ ಮೊದಲನೇ ಮಹಡಿ, ಡಾ.ರಾಜಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು–560010

l ಮೊ. 8050008855, ವೆಬ್‌ಸೈಟ್ : www.drshettys.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.