ADVERTISEMENT

ಅರ್ತಿಂಗ್ ಥೆರಪಿ: ಬರಿಗಾಲಿನ ಚಿಕಿತ್ಸೆಯಿಂದ ದೇಹಕ್ಕಿದೆ ಹಲವು ನೈಸರ್ಗಿಕ ಅನುಕೂಲ

ಪ್ರಜಾವಾಣಿ ವಿಶೇಷ
Published 7 ಡಿಸೆಂಬರ್ 2020, 7:55 IST
Last Updated 7 ಡಿಸೆಂಬರ್ 2020, 7:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೂಮಿಯ ಶಕ್ತಿಯು ಮಾನವನ ಶರೀರ ಶಾಸ್ತ್ರದ ಮೇಲೆ ಅಗಾದ ಪರಿಣಾಮವನ್ನು ಬೀರುತ್ತದೆ. ಮಾನವನ ಜೀವಕೋಶಗಳ ದುರಸ್ಥಿ, ಯೋಗಕ್ಷೇಮ, ಹುರುಪು ಹಾಗೂ ಗುಣಮಟ್ಟದ ನಿದ್ರೆ, ಆರೋಗ್ಯ, ಚೈತನ್ಯಗಳಿಗೆ ಭೂಮಿಯ ಶಕ್ತಿ ಪ್ರಭಾವ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ.

ಭೂಮಿಯ ಶಕ್ತಿ ಮಾನವನ ಜೈವಿಕ ವಲಯಗಳ ಮೇಲೆ, ಶಾರೀರಿಕ ಬದಲಾವಣೆಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಮನುಷ್ಯನ ಚರ್ಮವು ಭೂಮಿಯ ಮೇಲ್ಮೈ ಮೇಲೆ ನೇರ ಸಂಪರ್ಕವನ್ನು ಹೊಂದಿದಾಗ ಇವೆಲ್ಲವೂ ಸಾಧ್ಯವಾಗುತ್ತದೆ. ಇದನ್ನು ಬರಿಗಾಲಿನ ಚಿಕಿತ್ಸೆ ಅಥವಾ ಅರ್ತಿಂಗ್ ಥೆರಪಿ ಎನ್ನಬಹುದಾಗಿದೆ.

ಬರಿಗಾಲಿನಿಂದ ಭೂಮಿಯನ್ನು ಸ್ಪರ್ಷಿಸಿದಾಗ ಭೂಮಿಯಲ್ಲಿನ ಎಲೆಕ್ಟ್ರಾನ್ ಗಳು ಶರೀರವನ್ನು ಪ್ರವೇಶಿಸುತ್ತವೆ. ಇವುಗಳ ಉತ್ಕರ್ಷಣ ನಿರೋಧಕಗಳಾಗಿದ್ದು, ಶರೀರಕ್ಕೆ ಹಾನಿ ಮಾಡುವ ಫ್ರೀ ರಾಡಿಕಲ್ಸ್ ಅನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಶರೀರದಲ್ಲಿನ ಉರಿ, ಊತ, ನೋವು, ಆತಂಕ ಮತ್ತು ಒತ್ತಡಗಳನ್ನು ನಿವಾರಿಸುವಲ್ಲಿ ಸಹಾಯಕವಾಗುತ್ತದೆ.

ADVERTISEMENT

ಅರ್ತಿಂಗ್ ಥೆರಪಿಯ ಉಪಯೋಗಗಳು :

* ದೀರ್ಘಕಾಲದ ನೋವು ನಿವಾರಣೆ.

* ತಲೆನೋವು ಹಾಗೂ ಸ್ನಾಯು ಸೆಳೆತ ನಿವಾರಣೆಯಾಗಬಹುದು.

* ಹಾರ್ಮೋನ್ ಅಥವಾ ಮುಟ್ಟಿನ ಸಮಸ್ಯೆಗಳು, ಆತಂಕ, ಖಿನ್ನತೆ, ಒತ್ತಡಗಳು ನಿವಾರಣೆಯಾಗಬಹುದಾಗಿದೆ.

* ನಿದ್ರೆಯ ಸಮಸ್ಯೆಗಳು ಸಹ ನಿವಾರಣೆಯಾಗಬಹುದಾಗಿದೆ.

ದೈನಂದಿನ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವುದು ಹೇಗೆ ?

* ಬರಿಗಾಲಿನಲ್ಲಿ ನಡೆಯುವುದು, ಅದು ಹುಲ್ಲಿನ ಮೇಲೆ, ಮರಳಿನ ಮೇಲೆ ಅಥವಾ ಬರಿ ನೆಲದ ಮೇಲೆ ದಿನಕ್ಕೆ 30 ನಿಮಿಷ ಕನಿಷ್ಠ ನಡೆಯಬಹುದು.

* ನೀರಿನಲ್ಲಿ ಸ್ವಚ್ಛಂದವಾಗಿ ಈಜುವುದು.

* ಬರಿಗೈಯಲ್ಲಿ ಗಾರ್ಡನಿಂಗ್ ಮಾಡುವುದು.

* ಮರದ ತಪ್ಪಲಿನಲ್ಲಿ ಮರವನ್ನು ಒರಗಿ ಕೂರುವುದು.

* ಚರ್ಮದಿಂದ ಅಥವಾ ಲೆದರ್‌ನಿಂದ ಮಾಡಿದ ಚಪ್ಪಲಿಗಳನ್ನು ಬಳಸುವುದು( ಸಿಂಥೆೆಟಿಕ್ ಅಥವಾ ಪ್ಲಾಸ್ಟಿಕ್ ಸೋಲ್ ಇರುವ ಚಪ್ಪಲಿಗಳನ್ನು ಬಳಸದೆ ಇರುವುದು)

ಇವುಗಳಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅರ್ತಿಂಗ್ ಉತ್ಪನ್ನಗಳು ಅಂದರೆ ಅರ್ತಿಂಗ್ ಚಾಪೆ, ಪ್ಯಾಡ್ ಗಳು, ಬ್ಯಾಂಡ್ ಗಳನ್ನು ಬಳಸಬಹುದಾಗಿದೆ.

ಇತಿಹಾಸದಲ್ಲಿ ನಾವು ಓದಿದಂತೆ ಮಾನವನು ಬರಿಗಾಲಿನ ನಡಿಗೆ, ನೆಲದ ಮೇಲೆ ಮಲಗುವುದು, ಭೂಮಿಯಲ್ಲಿ ಬಿತ್ತನೆ, ಬೆಳೆ ಬೆಳೆಯುವುದನ್ನು ಬರಿಗೈಯಲ್ಲಿ ಮಾಡುವುದು, ಮರದ ತಪ್ಪಲಿನಲ್ಲಿ ಮಲಗುವುದು ಮುಂತಾದವನ್ನು ನೋಡಿದ್ದೇವೆ. ಆದರೆ, ಆಧುನಿಕ ಬದಲಾದ ಜೀವನಶೈಲಿಯಲ್ಲಿ ಇವೆಲ್ಲವೂ ಮಾಯವಾಗಿದೆ. ನೈಸರ್ಗಿಕವಾಗಿ ಸಿಗಬಹುದಾದಂತಹ ಉತ್ಕರ್ಷಣಶಕ್ತಿಯುಳ್ಳ ಅಂಶಗಳಿಂದ ದೂರ ಉಳಿಯುವಂತಾಗಿದೆ. ಯುವಜನತೆ ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ತುಸು ಬದಲಾವಣೆಗಳಿಂದ ನೈಸರ್ಗಿಕವಾಗಿ ಆರೋಗ್ಯವಂತರಾಗಬಹುದಾಗಿದೆ.

– ಡಾ. ಸ್ಮಿತಾ, ಜೆಡಿ, ಎಂಡಿಎಸ್
ಓರಲ್ ಮಡಿಸಿನ್ ಮತ್ತು ರೇಡಿಯೋಲಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.