ADVERTISEMENT

ಓಮನ್‌ ಮಗುಗೆ ಸರ್ಜರಿಯಿಂದ ಮರುಜನ್ಮ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 4:58 IST
Last Updated 17 ಫೆಬ್ರುವರಿ 2020, 4:58 IST
ಮಗು ಮರಿಯಂ ಜೊತೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ
ಮಗು ಮರಿಯಂ ಜೊತೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ   

ಡಿ ಸ್ಟೋನಿಯಾ ಎಂಬ ಅಪರೂಪದ ಆನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದ ಓಮನ್‌ನ ಐದೂವರೆ ವರ್ಷದ ಮಗುವಿಗೆ ಮಿಲ್ಲರ್ಸ್‌ ರಸ್ತೆಯ ವಿಕ್ರಂ ಆಸ್ಪತ್ರೆಯು ಡೀಪ್ ಬ್ರೇನ್ ಸ್ಟಿಮ್ಯುಲೇಷನ್(ಡಿಬಿಎಸ್) ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯಕೀಯ ಲೋಕ ಅಚ್ಚರಿಪಡುವಂತೆ ಮಾಡಿದೆ. ಭಾರತದಲ್ಲಿ ಅತಿ ಚಿಕ್ಕ ವಯಸ್ಸಿನ ರೋಗಿಯೊಬ್ಬರಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು.

ಮಗು ಮರಿಯಂಗೆ ಒಂದೂವರೆ ವರ್ಷವಿದ್ದಾಗಲೇ ಡಿಸ್ಟೋನಿಯಾ ನೂನ್ಯತೆ ಕಾಣಿಸಿಕೊಂಡಿತು. ಮಗುವನ್ನು ಬೇರೆ ಬೇರೆ ತಜ್ಞರಲ್ಲಿ ತೋರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಓಮನ್‌ ದಂಪತಿ ಬಂದಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ.

ಆಸ್ಪತ್ರೆಯ ಪಾರ್ಕಿನ್‌ಸನ್‌ ಆ್ಯಂಡ್‌ ಮೂವ್‍ಮೆಂಟ್ ಡಿಸಾರ್ಡರ್ ಸ್ಪೆಷಲಿಸ್ಟ್ ಡಾ.ಪ್ರಶಾಂತ್ ಎಲ್‍.ಕೆ. ಅವರು ಮಗುವಿನಲ್ಲಿ ಡಿವೈಟಿ 16 ರೋಗಲಕ್ಷಣ ಗುರುತಿಸಿದರು. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ‘ಡಿಸ್ಟೋನಿಯಾ’ ಎಂದು ಕರೆಯಲಾಗುತ್ತದೆ.

ADVERTISEMENT

ದಿನವಿಡೀ ಮಲಗಿಕೊಂಡೇ ಇರುವ ಮಗುವು ತನ್ನ ದೈನಂದಿನ ಚಟುವಟಿಕೆಗಳಿಗೆಲ್ಲಾ ಪೋಷಕರ ಮೇಲೆ ಅವಲಂಬಿತವಾಗಬೇಕಿತ್ತು. ಡಿವೈಟಿ 16 ಅಪರೂಪದಲ್ಲಿ ಅಪರೂಪದ ರೋಗ. ಇಡೀ ವಿಶ್ವದಲ್ಲಿ 10-15 ಪ್ರಕರಣ ಮಾತ್ರ ದಾಖಲಾಗಿವೆ. ಡಿವೈಟಿಯಲ್ಲಿ ಬೇರೆ ಬೇರೆ ಬಗೆಗಳಿವೆ. ವಂಶವಾಹಿ ಹಾಗೂ ರೋಗಲಕ್ಷಣದ ಆಧಾರದಲ್ಲಿ ಡಿವೈಟಿ 1, 2 ಎಂದು ಗುರುತಿಸಲಾಗುತ್ತದೆ. ಮರಿಯಂನಲ್ಲಿ ಆನುವಂಶೀಯವಾಗಿ ಡಿವೈಟಿ 16 ಲಕ್ಷಣ ಗುರುತಿಸಿದೆವು ಎಂದು ಹೇಳುತ್ತಾರೆ ವೈದ್ಯರಾದ ಪ್ರಶಾಂತ್‌ ಎಲ್‌.ಕೆ.

ಸೂಕ್ತ ಚಿಕಿತ್ಸೆ ಇಲ್ಲ

ಡಿವೈಟಿ 16 ರೋಗಕ್ಕೆ ಇದುವರೆಗೂ ಸೂಕ್ತ ಚಿಕಿತ್ಸೆ ಇಲ್ಲ. ಮಕ್ಕಳಲ್ಲಿ ಆನುವಂಶೀಯ, ಸ್ಟ್ರೋಕ್‌ ಮೊದಲಾದ ಕಾರಣದಿಂದ ಕಾಣಿಸಿಕೊಳ್ಳಬಹುದು. ಇದು ಮಾನವನ ದೇಹದ ಅಂಗಗಳ ಚಲನೆಗೆ ಸಂಬಂಧಿಸಿದ ನರಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಿದೇ ಇದ್ದಾಗ ಕಾಣಿಸಿಕೊಳ್ಳುತ್ತವೆ.

ಅಂಗಾಂಗಗಳ ಬಿಗಿತ, ಸ್ನಾಯುಗಳಲ್ಲಿ ನೋವು, ಸೆಟೆತ ಇದರ ರೋಗ ಲಕ್ಷಣ. ರೋಗಿ ಎಲ್ಲಾ ಕೆಲಸಕ್ಕೂ ಪರರನ್ನು ಅವಲಂಭಿಸಬೇಕಾಗುತ್ತದೆ. ಇಲ್ಲಿಯವರೆಗೆ ಇಡೀ ವಿಶ್ವದಲ್ಲಿ 15–20 ಮಂದಿ ಡಿವೈಟಿ16 ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.