ಭುವನೇಶ್ವರ್: ದುಬಾರಿ ವೆಚ್ಚ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನ ಮೂಗು ಮುರಿಯುವುದನ್ನು ನೋಡಿರುತ್ತೀರಿ. ಕಡು ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಲು ಕಷ್ಟ. ಹಾಗಾಗಿ, ಒಡಿಶಾದ ವೈದ್ಯ ಶಂಕರ್ ಎಂಬುವವರು ಬುರ್ಲಾ ಎಂಬಲ್ಲಿ ಒಂದು ರೂಪಾಯಿ ಕ್ಲಿನಿಕ್ ಆರಂಭಿಸಿದ್ದಾರೆ. ಇಲ್ಲಿಗೆ ಬರುವ ಜನರಿಂದ ಕೇವಲ ಒಂದು ರೂಪಾಯಿ ಫೀ ಪಡೆದು ತಮ್ಮ ಕೈಲಾದ ಚಿಕಿತ್ಸೆ ಕೊಡುತ್ತಿದ್ದಾರೆ. ವೀರ್ ಸುರೇಂದ್ರ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಪ್ರತಿ ದಿನ ಸಂಜೆ 6 ರಿಂದ 7 ಗಂಟೆವರೆಗೆ ಬಡವರ ಸೇವೆಯಲ್ಲಿ ತೊಡಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.