ADVERTISEMENT

ಅರೆದಲೆಶೂಲೆಗೆ ಸರಳ ಪರಿಹಾರ

ಪ್ರಜಾವಾಣಿ ವಿಶೇಷ
Published 28 ಜುಲೈ 2020, 19:45 IST
Last Updated 28 ಜುಲೈ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಗ್ರೇನ್‌ ಅಥವಾ ಅರೆದಲೆಶೂಲೆ ಇತ್ತೀಚಿಗೆಹಲವರನ್ನು ಕಾಡುತ್ತಿರುವ ಸಮಸ್ಯೆ. ತಲೆಯ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವ ಈ ನೋವು ತಕ್ಷಣಕ್ಕೆ ಶಮನವಾಗುವುದಿಲ್ಲ.ಸದಾ ಕಾಡುವ ಈ ತಲೆನೋವು ಒಮ್ಮೆ ಬಂದರೆ ಹೋಗುವುದಿಲ್ಲ. ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಹಿಂಸೆ ನೀಡುತ್ತದೆ. ಮೈಗ್ರೇನ್‌ ತಲೆನೋವು ನಿವಾರಣೆಗೆ ಪದೇ ಪದೇಔಷಧ ತೆಗೆದುಕೊಂಡರೂ ಅಷ್ಟು ಪ್ರಯೋಜನವಿಲ್ಲ. ಮನೆ ಮದ್ದಿನಿಂದ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿ ಉಪಶಮನ ಮಾಡಿಕೊಳ್ಳಬಹುದು. ಇದರಿಂದ ಅಡ್ಡಪರಿಣಾಮಗಳು ಕಡಿಮೆ, ನೋವು ಕೂಡ ಬೇಗ ಶಮನವಾಗುತ್ತದೆ.

ಮಂಜುಗಡ್ಡೆಯ ಪ್ಯಾಕ್‌

ಅರೆದಲೆಶೂಲೆ ಕಾಣಿಸಿಕೊಂಡ ತಕ್ಷಣ ಹಣೆಯ ಮೇಲೆ ಮಂಜುಗಡ್ಡೆ ಪ್ಯಾಕ್‌‌ ಅಥವಾ ತಣ್ಣೀರಿನ ಬಟ್ಟೆ ಇರಿಸಿಕೊಳ್ಳುವುದು ಉತ್ತಮ. ಇದು ತಕ್ಷಣಕ್ಕೆ ಆರಾಮ ನೀಡಬಹುದು. ಮಂಜುಗಡ್ಡೆಯನ್ನು ಟವಲ್‌ನಲ್ಲಿ ಸುತ್ತಿ ಹಣೆಯ ಮೇಲೆ 15 ನಿಮಿಷಗಳ ಕಾಲ ಒತ್ತಿ ಹಿಡಿಯಿರಿ. ಪ್ರತಿ 15 ನಿಮಿಷಕ್ಕೊಮ್ಮೆ ಈ ರೀತಿ ಮಾಡುವುದರಿಂದ ತಲೆನೋವು ಬೇಗ ನಿವಾರಣೆಯಾಗುತ್ತದೆ.

ADVERTISEMENT

ಬಿಸಿ ಪೇಯ ಕುಡಿಯಿರಿ

ಕೆಫಿನ್‌ ಅಂಶ ಇರುವ ಪದಾರ್ಥಗಳು ಮೈಗ್ರೇನ್‌ ಅನ್ನು ಬೇಗ ನಿವಾರಿಸುತ್ತವೆ. ಆ ಕಾರಣಕ್ಕೆ ನಿಮ್ಮ ಮನಸ್ಸಿಗೆ ಹಿತ ನೀಡುವ ಸಲುವಾಗಿ ಒಂದು ಕಪ್ ಟೀ ಅಥವಾ ಕಾಫಿ ಕುಡಿಯಿರಿ. ಇದರಿಂದ ತಲೆನೋವು ಕೊಂಚ ಕಡಿಮೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.