ADVERTISEMENT

ಆಸರ: ಅಪರೂಪದ ರೊಬೊಟಿಕ್ ಶಸ್ತ್ರಚಿಕಿತ್ಸೆ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 20:06 IST
Last Updated 24 ಜೂನ್ 2022, 20:06 IST

ಬೆಂಗಳೂರು: ‘ಆಸರ ಸಮೂಹ ಆಸ್ಪತ್ರೆ ಸಂಪೂರ್ಣ ರೊಬೊಟಿಕ್ ಶಸ್ತ್ರಚಿಕಿತ್ಸಾ ಕೇಂದ್ರವಾಗಿದೆ. ಯಾವುದೇ ಲೋಪಗಳಿಲ್ಲದೆ ನಿಖರವಾದ ಶಸ್ತ್ರಚಿಕಿತ್ಸೆಯನ್ನು ಕೈಗೆಟಕುವ ದರದಲ್ಲಿ ಲಭಿಸುವಂತೆ ಮಾಡುವುದು ಆಸ್ಪತ್ರೆಯ ಉದ್ದೇಶ’ ಎಂದು ಪ್ರಕಟಣೆ ಹೇಳಿಕೊಂಡಿದೆ.

‘ರಾಜ್ಯದಲ್ಲಿ ಮೆಕೋ ರೊಬೊಟಿಕ್–ಆರ್ಮ್ ಅಸಿಸ್ಟೆಡ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಹೆಗ್ಗಳಿಕೆ ಆಸ್ಪತ್ರೆಯದ್ದಾಗಿದೆ’ ಎಂದು ಆಸ್ಪತ್ರೆ ಸಂಸ್ಥಾಪಕ ಮತ್ತು ಸಿಇಒ ಡಾ.ಜಗದೀಶ.ಜೆ. ಹಿರೇಮಠ ಮಾಹಿತಿ ನೀಡದರು.

‘ಆಸರ ಸಮೂಹ ಆಸ್ಪತ್ರೆಯಲ್ಲಿ ರೊಬೊಟಿಕ್ಸ್ ನೆರವಿನಿಂದ ಇಂಟೆಲಿಜೆಂಟ್ ರೊಬೊಟಿಕ್ ವೆಂಟಿಲೇಷನ್ ವ್ಯವಸ್ಥೆ, ಅಡ್ವಾನ್ಸ್ಡ್‌ ಕಂಪ್ಯೂಟರ್ ನೆರವಿನ ಚಿಕಿತ್ಸೆಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಶಸ್ತ್ರಚಿಕತ್ಸೆ, ಆರೈಕೆಗಾಗಿ ನೂತನ ತಂತ್ರಜ್ಞಾನ ಲಭ್ಯ ಇವೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.