ADVERTISEMENT

ದಿನ ಭವಿಷ್ಯ: ಈ ರಾಶಿಯವರು ಆರ್ಥಿಕವಾಗಿ ಬಲಿಷ್ಟರಾಗುವಿರಿ.

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಮಾರ್ಚ್ 2024, 22:37 IST
Last Updated 27 ಮಾರ್ಚ್ 2024, 22:37 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಯೋಜನಾ ಬದ್ಧವಾದ ಕೆಲಸವನ್ನು ರೂಪಿಸದಿದ್ದರೆ ಈ ದಿನದ ನಿಮ್ಮ ಶ್ರಮವು ವ್ಯರ್ಥವಾಗಲಿದೆ. ಪ್ರಾಮಾಣಿಕವಾಗಿ ದೇವರು ಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದು ಉತ್ತಮ. ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ ಸಲ್ಲಲಿದೆ.
  • ವೃಷಭ
  • ಮನೆ ಬದಲಾವಣೆಯ ಬಗ್ಗೆ ಮನೆಯವರ ಅಭಿಪ್ರಾಯವನ್ನು ತಿಳಿದುಕೊಳ್ಳುವಿರಿ. ಸರಿಯಾದಂತಹಾ ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಸಲ್ಲದು. ಪೋಲಿಸ್ ವರಿಷ್ಟರಿಗೆ ವರ್ಗಾವಣೆಯ ಸಂಭವವಿದೆ.
  • ಮಿಥುನ
  • ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುಲು ಕಲಿಯಬೇಕಾಗುತ್ತದೆ. ಆಫೀಸಿನಲ್ಲಿ ಧನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಇಂದು ಉತ್ತಮ ಸಮಯವಾಗಿದೆ. ಒಂದು ರೀತಿಯ ಸ್ಫರ್ಧಾತ್ಮಕ ವಾತಾವರಣ ಎದುರಿಸಬೇಕಾಗುವುದು.
  • ಕರ್ಕಾಟಕ
  • ಆರ್ಥಿಕವಾಗಿ ಬಲಿಷ್ಟರಾಗುವಿರಿ. ಕೃಷಿಯ ಮೇಲೆ ಹೆಚ್ಚು ಬಂಡವಾಳ ಹೂಡುವಿಕೆ ಲಾಭದಾಯಕವಾದದ್ದು. ಎಷ್ಟೆ ಕಷ್ಟಬಂದರೂ ಸಹ ನೀವು ನಿಮ್ಮ ಗುರಿಯನ್ನು ಇಂದು ಸಾಧಿಸಿಯೇ ತೀರುತ್ತೀರಿ.
  • ಸಿಂಹ
  • ವಿವಾಹದ ಅಥವಾ ದಾಂಪತ್ಯದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿಬಂದು ಅಶಾಂತಿಯ ವಾತಾವರಣ ಕಂಡುಬರಲಿದೆ.
  • ಕನ್ಯಾ
  • ಹೂವು-ಹಣ್ಣು, ತರಕಾರಿಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಲಾಭವನ್ನು ವ್ಯಾಪಾರದಲ್ಲಿ ಪಡೆದಕೊಳ್ಳುವುದರಿಂದ ಸಂತೋಷ ಇರುವುದು. ನಿಮ್ಮ ಸಹವರ್ತಿಗಳಲ್ಲಿ ಸಲಹೆ ಸಹಕಾರಗಳನ್ನು ಕೋರುವಿರಿ.
  • ತುಲಾ
  • ಶಿಕ್ಷಕ ವೃತ್ತಿಯನ್ನು ನೆಡೆಸಿ ವಿದ್ಯಾದಾನ ಮಾಡುವವರಿಗೆ ಸೂಕ್ತ ಗೌರವಾದರಗಳು ದೊರೆಯಲಿದೆ. ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟ ಇರಲಿದೆ. ವಿವಾಹದ ಪ್ರಯತ್ನಗಳು ಯಶಸ್ಸನ್ನು ಹೊಂದಲಿದೆ.
  • ವೃಶ್ಚಿಕ
  • ವೈಯಕ್ತಿಕ ಕಾರ್ಯದೊತ್ತಡದ ನಡುವೆಯೂ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ನಿಮಗೆ ರಾಜಕೀಯ ಸೇರಲು ಆಹ್ವಾನ ಬರಲಿದೆ. ಅದರ ಪರಿಣಾಮವಾಗಿ ನಿಮ್ಮ ಜೀವನದ ಮುಂದಿನ ಹಾದಿಯು ಸುಗಮವಾಗಲಿದೆ.
  • ಧನು
  • ಮಹಿಳೆಯರಿಗೆ ಆದರ ಮನ್ನಣೆ ಹೆಚ್ಚಲಿದ್ದು ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ಬಂಧುಗಳಲ್ಲಿ ವ್ಯವಹರಿಸಿದ ಸಾಲ ಮರು ಪಾವತಿ ಮಾಡುವ ಬಗ್ಗೆ ಹೆಚ್ಚಿನ ಗಮನಕೊಡಿ. ತೀರ್ಥಯಾತ್ರೆಗೆ ಹೋಗುವ ಮನಸ್ಸಾಗುವುದು.
  • ಮಕರ
  • ಹೊಸ ಜನರ ಭೇಟಿಯಾಗುವುದು ಹಾಗೂ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನೀವು ಬಹಳಷ್ಟು ಜಾಣತನ ತೋರಬೇಕಾಗುವುದು. ತಂದೆ ತಾಯಿಯ ಆರೋಗ್ಯದಲ್ಲಿ ಅಧಿಕವಾದ ಗಮನವಿರಲಿ.
  • ಕುಂಭ
  • ನಿಮ್ಮ ಆಲೋಚನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವಿರಿ. ಛಾಯಾಗ್ರಾಹಕರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಮಾತಿನಲ್ಲಿ ಕಪಟತನ ಇಲ್ಲವಾದ್ದರಿಂದ ನಿಷ್ಠೂರವಾಗಬಹುದು.
  • ಮೀನ
  • ಕಟ್ಟಡ ನಿರ್ಮಾಣದ ಕೆಲಸಗಾರರಿಗೆ ವೃತ್ತಿಯಲ್ಲಿ ಬೇಸರ ಹುಟ್ಟಬಹುದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮದ ಅಗತ್ಯವಿದೆ. ದೂರ ಸಂಚಾರದಲ್ಲಿ ವೃಥಾ ಖರ್ಚುಗಳಿದ್ದರೂ ಸಂತೋಷ ಇರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.