ADVERTISEMENT

ದಿನ ಭವಿಷ್ಯ: ವ್ಯಾಪಾರ ವ್ಯವಹಾರಗಳಲ್ಲಿ ಚತುರ ನಡೆ ಇರಲಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಜುಲೈ 2024, 18:30 IST
Last Updated 31 ಜುಲೈ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರದವರಿಗೆ ಲಾಭಾಂಶ ವೃದ್ಧಿಯಾಗಿ ಬೆಳವಣಿಗೆ ಕಾಣಬಹುದು. ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಚತುರ ನಡೆ ಇರಲಿ.
  • ವೃಷಭ
  • ಸಾಮಾಜಿಕವಾಗಿ ವರ್ತನೆಯಲ್ಲಿ ಸ್ಥಿರತೆ ಹಾಗೂ ಸಮತೋಲನ ಕಾಯ್ದುಕೊಳ್ಳಿ. ಬಹಳಷ್ಟು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ಅನವಶ್ಯಕವಾಗಿ ಪ್ರಯಾಣದ ಸಾಧ್ಯತೆ ಇದೆ. ಶಾರೀರಿಕ ಆರೋಗ್ಯ ಉತ್ತಮ.
  • ಮಿಥುನ
  • ಆಕಾಂಕ್ಷೆಗಳ ಸಿದ್ಧಿಯಾಗಿ, ಧಾರ್ಮಿಕ ಪ್ರವೃತ್ತಿಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಕೆಲಸದ ಹೊರೆ ಹೆಚ್ಚಾಗಿ ಮಡದಿ ಮಕ್ಕಳಿಂದ ಸಹಕಾರ ಯಾಚಿಸ ಬೇಕಾಗುವುದು. ಉದ್ಯೋಗ ಬದಲಾಗುವ ಸಂಭವವಿದೆ.
  • ಕರ್ಕಾಟಕ
  • ಕಳೆಯಿತು ಎಂದುಕೊಂಡ ರೋಗವೊಂದು ಬೆಂಬಿಡದೆ ಕಾಡಿ ಸುತ್ತದೆ. ಬಂಧುಗಳಲ್ಲಿನ ಮಾತಿನ ಚಕಮಕಿ ಮನಸ್ಸಿಗೆ ಗೊಂದಲ ತಂದೀತು. ಸರ್ಕಾರ ಅಥವಾ ಸಂಸ್ಥೆಗಳ ನಿಯಮಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ.
  • ಸಿಂಹ
  • ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರೂ ಆರ್ಥಿಕವಾಗಿ ಉತ್ತಮವಾಗಿರುವುದು. ಯಂತ್ರಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಅವಕಾಶಗಳು ದೊರಕಲಿವೆ. ಆದಾಯದ ಮೂಲಗಳು ಗೋಚರಿಸಲಿವೆ.
  • ಕನ್ಯಾ
  • ಮನೋಬಲದ ಜತೆಯಲ್ಲಿ ಆರ್ಥಿಕ ಬಲ ದೃಢವಾಗಿಸಿಕೊಂಡರೆ ಮಾತ್ರ ಕಾರ್ಯ ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಆದಾಯದ ಅವಕಾಶವಿದೆ.
  • ತುಲಾ
  • ಹಣಕಾಸು ಸಂಸ್ಥೆಗೆ ಪಾಲುದಾರರಾಗಿ ಸೇರಿಕೊಳ್ಳುವ ಯೋಚನೆಯಲ್ಲಿರುವವರಿಗೆ ವ್ಯವಹಾರದ ಉದ್ದಗಲವು ತಿಳಿಯುವುದು. ಔಷಧ ಕಂಪನಿಗಳಿಗೆ ಮತ್ತು ಔಷಧ ಮಾರಾಟ ಪ್ರತಿನಿಧಿಗಳಿಗೆ ಮಾರಾಟದಲ್ಲಿ ಹೆಚ್ಚಳವಾಗುವುದು.
  • ವೃಶ್ಚಿಕ
  • ವಿದೇಶ ವ್ಯವಹಾರಗಳಿಂದ ಆದಾಯ ಕೈಗೂಡಲಿದೆ. ಆರ್ಥಿಕವಾಗಿ ಸಂತೃಪ್ತಿ ಇರುವುದು. ಜನರೊಂದಿಗೆ ಬೆರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಅಂತಿಮ ಕ್ಷಣಗಳಲ್ಲಿ ಪಶ್ಚತ್ತಾಪ ಪಡುವ ಬದಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ.
  • ಧನು
  • ಅಸೂಯೆಯಾಗದಂತೆ ಕಾರ್ಯಗಳನ್ನು ಸಾಧಿಸಿಕೊಳ್ಳುವ ಉತ್ತಮ ಗುಣವನ್ನು ಜೀವನದ ಶೈಲಿಯಲ್ಲಿ ವೃದ್ಧಿಸಿಕೊಳ್ಳಿರಿ. ಶ್ರಮ ಜೀವಿಗಳಿಗೆ ಶ್ರಮಕ್ಕೆ ಮೀರಿದ ಪ್ರತಿಫಲ ಅನುಭವಕ್ಕೆ ಬರಲಿದೆ.
  • ಮಕರ
  • ಆರ್ಥಿಕ ರಂಗದಲ್ಲಿ ನೂತನವಾಗಿ ಹೂಡಿಕೆ ಮಾಡುವುದು ಉತ್ತಮವಲ್ಲ. ದಂತ ವೈದ್ಯರಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ವೃತ್ತಿಯಲ್ಲಿ ಅತೀವ ಗಮನವಿರಬೇಕಾಗುತ್ತದೆ. ವಿಶೇಷ ಪೂಜೆ ನಡೆಸಲು ತಯಾರಿ ಮಾಡುವಿರಿ.
  • ಕುಂಭ
  • ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಸಂಪನ್ನಗೊಳ್ಳಲಿವೆ. ಕೆಲವೊಂದು ಪ್ರತಿಕೂಲ ಫಲಗಳೇ ಕಾರ್ಯಕ್ಷೇತ್ರದಲ್ಲಿದ್ದರೂ ಚಿಂತಿಸುವ ಅವಶ್ಯಕತೆ ಇಲ್ಲ. ಕಷ್ಟಕಾರ್ಪಣ್ಯಗಳಿಗೆ ತಂದೆ ತಾಯಿ ನೆರವಾಗಲಿದ್ದಾರೆ.
  • ಮೀನ
  • ಆಪ್ತಸ್ನೇಹಿತರ ಸಹಾಯದಿಂದ ಗೃಹ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಿರಿ. ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಬೇಕಾದ ಧಾರ್ಮಿಕ ಪ್ರಯತ್ನ ಮಾಡಿ. ರಫ್ತು ಮಾರಾಟಗಳಿಂದ ಆದಾಯ ಹೆಚ್ಚಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.