ದಿನ ಭವಿಷ್ಯ: ಈ ರಾಶಿಯವರು ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ ಗಳಿಸಬಹುದು..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
ದಿನ ಭವಿಷ್ಯ
ಮೇಷ
ಮಗಳ ಮದುವೆ ವಿಚಾರವಾಗಿ ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗುವುದು. ವಾಹನ ಖರೀದಿ ಬೇಡ. ಗಣಪತಿಯ ಅನುಗ್ರಹದಿಂದ ಗೊಂದಲಗಳು ನಿವಾರಣೆಯಾಗಲಿವೆ.
ವೃಷಭ
ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ಸಂಪೂರ್ಣವಾಗಿ ಓದಿ ತಿಳಿದು ಒಪ್ಪಿಕೊಳ್ಳಿ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ ಗಳಿಸಬಹುದು.
ಮಿಥುನ
ಜೀವನದ ಅತ್ಯಂತ ಪ್ರಮುಖ ಘಟ್ಟವೊಂದರಲ್ಲಿ ಆ ಕ್ಷಣವನ್ನು ಅನುಭವಿಸಲು ಆಗುವುದಿಲ್ಲ. ಹರಿತವಾದ ಮಾತುಗಳು ತಾಯಿಯ ಮನಸ್ಸನ್ನು ನೋಯಿಸುವ ಸಾಧ್ಯತೆ ಇದೆ.
ಕರ್ಕಾಟಕ
ಭಾಗ್ಯವಂತರಾದ ನಿಮಗೆ ನಿಮ್ಮ ಸಂಸ್ಥೆಯ ಹೊಸ ಯೋಜನೆಯು ಸುಲಭವೆನಿಸಲಿದೆ. ದುರ್ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವುದು ಸೂಕ್ತ. ವ್ಯವಸಾಯಕ್ಕೆ ಶ್ರಮ ಪಡುವಂತಾಗಲಿದೆ.
ಸಿಂಹ
ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯ. ಮಿತ್ರವರ್ಗದಿಂದ ದುಃಖದ ಸಮಾಚಾರಗಳನ್ನು ಕೇಳಬೇಕಾಗಬಹುದು. ದೀರ್ಘ ಪ್ರಯಾಣವನ್ನು ಮುಗಿಸಲಿದ್ದೀರಿ.
ಕನ್ಯಾ
ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿ. ಸರ್ಕಾರ ಅಥವಾ ಸಂಸ್ಥೆಗಳ ನಿಯಮಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ. ಉದ್ಯೋಗ ಬದಲಾಗುವ ಸಂಭವವಿದೆ.
ತುಲಾ
ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರೂ ಆದಾಯ ಉತ್ತಮವಾಗಿರುವುದು. ಯಂತ್ರಗಳ ಬಿಡಿಭಾಗಗಳ ಮಾರಾಟಗಾರರಿಗೆ ಅವಕಾಶಗಳು ದೊರಕಲಿವೆ. ಆದಾಯದ ಮೂಲಗಳು ಗೋಚರಿಸಲಿವೆ.
ವೃಶ್ಚಿಕ
ಆಪ್ತಸ್ನೇಹಿತರ ಸಹಾಯದಿಂದ ಗೃಹ ಸಮಸ್ಯೆಗಳನ್ನು ಬಗೆಹರಿಸುವಿರಿ. ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಧಾರ್ಮಿಕ ಪ್ರಯತ್ನವನ್ನು ಮಾಡಿ. ರಫ್ತು ಮಾರಾಟದಿಂದ ಆದಾಯ ಹೆಚ್ಚಳ.
ಧನು
ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಕೋರ್ಟಿನಲ್ಲಿರುವ ಹಳೆಯ ವ್ಯಾಜ್ಯಗಳು ಇತ್ಯರ್ಥಗೊಳ್ಳಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ನಡೆಯುತ್ತಿದ್ದ ಸಣ್ಣ-ಪುಟ್ಟ ಅವ್ಯವಹಾರಗಳು ಹಿಡಿತಕ್ಕೆ ಬರಲಿವೆ.
ಮಕರ
ಸಂಗತಿಗಳನ್ನು ಹಗುರವಾಗಿ ಪರಿಗಣಿಸುವ ಸ್ವಭಾವ ಬದಲಿಸಿಕೊಳ್ಳಿ. ಬಂಧುಮಿತ್ರರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ. ಲೋಹದ ವಸ್ತು ಮಾರಾಟಗಾರಿಗೆ ದುಪ್ಪಟ್ಟು ಲಾಭ.
ಕುಂಭ
ನಕಾರಾತ್ಮಕ ಚಿಂತನೆಗಳನ್ನು ಅನವಶ್ಯಕವಾಗಿ ಮಾಡದಿರಿ. ಧಾರ್ಮಿಕ ಚಿಂತನೆಯನ್ನು ಮುಂದುವರಿಸಿದರೆ ಶುಭ. ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶು ಸಂಗೋಪನೆಯಿಂದ ಲಾಭ ಇರುವುದು.
ಮೀನ
ವ್ಯಾಪಾರ, ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳಲ್ಲಿನ ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ಶೀತಬಾಧೆಯಿಂದ ಮುಕ್ತರಾಗಲು ಗಿಡಮೂಲಿಕೆಯ ಕಷಾಯವನ್ನು ಸೇವಿಸಿ. ಮನೆ ಕೊಳ್ಳುವ ವಿಷಯ ಇತ್ಯರ್ಥ.