ಹಲವು ದಿನಗಳಿಂದ ನೀವು ನಿರೀಕ್ಷಿಸುತ್ತಿದ್ದಂತೆ ವ್ಯವಹಾರಗಳ ಬಗ್ಗೆ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಪ್ರಾಧ್ಯಾಪಕರಿಗೆ ಹಾಗೂ ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭದಿನ.
ವೃಷಭ
ಗಂಭೀರ ವಿಚಾರಗಳ ಬಗ್ಗೆ ಮಡದಿಯೊಂದಿಗೆ ಚರ್ಚಿಸಿ, ತೀರ್ಮಾನಿಸಿ. ಚಿತ್ರಕಲೆಯ ಬಗ್ಗೆ ಉತ್ಸಾಹ ಹೆಚ್ಚಾಗಲಿದೆ. ಮಿತ್ರರ ಜೊತೆಗೆ ಮಾಡುವ ಸಾಹಸ ಕಾರ್ಯಗಳಿಂದ ಜಯ ಸಿಗಲಿದೆ. ಹಸಿರು ಬಣ್ಣ ಶುಭಕರವಾಗುವುದು.
ಮಿಥುನ
ಜನೋಪಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗಲಿವೆ. ಸೃಜನಶೀಲ ಬರವಣಿಗೆಗಳಿಂದ ಖ್ಯಾತಿ ಹಾಗೂ ಹೆಚ್ಚಿನ ಹಣವನ್ನು ಗಳಿಸುವಿರಿ.
ಕರ್ಕಾಟಕ
ಇನ್ನೊಬ್ಬರ ಭಾವನೆಗಳನ್ನು ನೋಯಿಸುವ ಬದಲು, ಬೆಲೆಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿ. ನಿಮ್ಮಲ್ಲಿದ್ದ ದುಡುಕು ಬುದ್ಧಿ ಕಡಿಮೆಯಾಗುವ ಸೂಚನೆ ಅರಿವಾಗುತ್ತದೆ. ದೇವತಾ ಕಾರ್ಯಗಳಿಗಾಗಿ ಪ್ರಯಾಣ ಮಾಡಲಿದ್ದೀರಿ.
ಸಿಂಹ
ಕಾನೂನು ವಿಷಯದ ಬಗ್ಗೆ ನಂಬಿಕಸ್ಥ ಹಾಗೂ ತಿಳಿವಳಿಕೆಯುಳ್ಳ ವ್ಯಕ್ತಿಯಿಂದ ಸಲಹೆ ಪಡೆಯುವಿರಿ. ಬಾಕಿ ಹಣ ಪಡೆಯಲು ಅಡಚಣೆಗಳನ್ನು ನಿವಾರಿಸಿಕೊಳ್ಳಿ. ವಿಷ್ಣುಸಹಸ್ರಮಾನ ಸ್ತೋತ್ರ ಪಠಣೆ ಶ್ರೇಯಸ್ಕರವಾಗುವುದು.
ಕನ್ಯಾ
ವೃತ್ತಿಯಲ್ಲಿನ ಸಣ್ಣ-ಪುಟ್ಟ ಬದಲಾವಣೆಯು ಹೆಚ್ಚಿನ ಧನಲಾಭ ತಂದು ಕೊಡಲಿದೆ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರಕುವುದು. ಕಾರ್ಮಿಕರ ಬೇಡಿಕೆಗಳು ಈಡೇರಲಿವೆ.
ತುಲಾ
ಷೇರುಗಳ ಮೇಲೆ ಹೆಚ್ಚಿನ ಹೂಡಿಕೆಯ ಬಗ್ಗೆ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ಕೃಷಿ ಚಟುವಟಿಕೆ ಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗುವುದು.
ವೃಶ್ಚಿಕ
ಶ್ರಮಿಕರಾದ ನಿಮಗೆ ಗುರು-ಹಿರಿಯರ ಆಶೀರ್ವಾದವಿದ್ದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಪೇಕ್ಷಿಸಬಹುದು. ನಿವೃತ್ತಿ ಜೀವನದ ನಂತರದ ಕೆಲಸಗಳ ಬಗ್ಗೆ ಯೋಜನೆ ರೂಪಿಸಿಕೊಳ್ಳುವಿರಿ. ದೇಹಕ್ಕೆ ಶೀತ ಬಾಧೆ ಬರಲಿದೆ.
ಧನು
ಪ್ರಯಾಣದಲ್ಲಿನ ಒಂಟಿತನ ಸಮಾನ ಮನಸ್ಕರ ಭೇಟಿಯಿಂದಾಗಿ ನಿವಾರಣೆಯಾಗುವುದು. ಮನೆಗೆ ಬಂಧು ಮಿತ್ರರ ಆಗಮನ ನವ ಉಲ್ಲಾಸವನ್ನು ತರಲಿದೆ. ಹೊರಗಿನ ಆಹಾರ ಸೇವನೆ ಬೇಡ.
ಮಕರ
ರಬ್ಬರ್ ಅಥವಾ ಪ್ಲಾಸ್ಟಿಕ್ ವ್ಯವಹಾರದಲ್ಲಿರುವವರು ಉತ್ತಮ ಲಾಭ ಗಳಿಸುವಿರಿ. ನವದಂಪತಿಗಳಿಗೆ ಸಂತಾನದ ಶುಭ ಸುದ್ಧಿ ಸಿಗಲಿದೆ. ನಿವೃತ್ತ ಶಿಕ್ಷಕರಿಗೆ ಗೌರವಯುತ ಸ್ಥಾನಮಾನಗಳು ಲಭ್ಯವಾಗಲಿದೆ.
ಕುಂಭ
ಅಧಿಕಾರಿಗಳ ಭೇಟಿಯಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಇತರರ ಸಲಹೆಗಳನ್ನು ವಿಮರ್ಶಿಸದೇ ಒಪ್ಪಿಕೊಳ್ಳಬೇಡಿ. ಸತ್ಕಾರ ಸಮಾರಂಭ ಗಳಲ್ಲಿ ಭಾಗವಹಿಸುವ ಹಾಗೂ ಪುಣ್ಯಕ್ಷೇತ್ರಗಳಿಗೆ ತೆರಳುವ ಯೋಗವಿದೆ.
ಮೀನ
ಪ್ರಚಲಿತ ರಾಜಕೀಯ ಬೆಳವಣಿಗೆಗಳಿಂದ ಲಾಭವಾಗಲಿದೆಯಾದರೂ, ಹಿತ-ಶತ್ರುಗಳ ಬಗ್ಗೆ ಎಚ್ಚರ. ವೈದ್ಯಕೀಯ ಸಿಬ್ಬಂದಿಗೆ ಸರ್ಕಾರಿ ಸೌಲಭ್ಯ ಸಿಗಲಿದೆ. ಸಾಧು ಸಂತರ, ಪೀಠಾಧಿಪತಿಗಳ ದರ್ಶನ ಆಕಸ್ಮಿಕವಾಗಿ ಸಿಗಲಿದೆ.