ADVERTISEMENT

ದಿನ ಭವಿಷ್ಯ: ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಮೇ 2024, 18:30 IST
Last Updated 5 ಮೇ 2024, 18:30 IST
   
ಮೇಷ
  • ಸುಖಗಳ ಮೇಲಿನ ಮೋಹ ಬಿಟ್ಟು ಆಂತರಿಕ ಸಂತೋಷ ಹುಡುಕುವ ಕಾರ್ಯಕ್ಕೆ ಸಾಧಕರು ತೆರಳಲಿದ್ದೀರಿ. ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಉತ್ತಮ ಗಳಿಕೆ ನಿರೀಕ್ಷಿಸಬಹುದು.
  • ವೃಷಭ
  • ನೂತನವಾಗಿ ನಿರ್ಮಿಸಿರುವ ಮನೆಗಾಗಿ ಆಲಂಕಾರಿಕ ವಸ್ತುಗಳ ಖರೀದಿ ನಡೆಯುವುದು. ಯಶಸ್ಸಿನ ಹೊಸ ಮಾರ್ಗಗಳ ಅರಿವಾಗುವುದು. ರುಚಿ ರುಚಿಯಾದ ಅಡುಗೆಗೆ ಹೊಸ ಅಭಿಮಾನಿಗಳ ಸಂಪಾದನೆ ಆಗುತ್ತದೆ.
  • ಮಿಥುನ
  • ತಾಯಿಯ ಮಾತನ್ನು ಕೇಳಿದ್ದರೆ ಆಗುತ್ತಿತ್ತು ಎಂದು ಮುಂದೊಂದು ದಿನ ಸ್ಮರಿಸುವ ಬದಲು ಇಂದೇ ಕೇಳಿ. ಮಕ್ಕಳ ಮೊದಲ ತೊದಲ ನುಡಿಗಳು ಹರ್ಷಕ್ಕೆ ಕಾರಣೀಭೂತವಾಗುವುದು. ಲಂಚದ ಬಲೆಗೆ ಬೀಳದಿರಿ.
  • ಕರ್ಕಾಟಕ
  • ಮನೆಯ ಪ್ರಶಾಂತತೆ ಕಾಪಾಡಿಕೊಂಡು ಉತ್ತಮ ಕಾರ್ಯಗಳಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿರಿ. ಇಷ್ಟದ ತಿಂಡಿ ತಿನಿಸುಗಳೊಂದಿಗೆ ದಿನ ಕಳೆಯುವಿರಿ.
  • ಸಿಂಹ
  • ವೃತ್ತಿರಂಗದಲ್ಲಿ ಹಿತೈಷಿಗಳ ಅಥವಾ ಅಕ್ಕಪಕ್ಕದವರ ಮಾತುಗಳನ್ನು ಲೆಕ್ಕಿಸದೇ ಮುನ್ನುಗ್ಗುವುದು ಸರಿ ಎನಿಸುವುದು. ವಿಷಯಾನ್ವೇಷಣೆಯ ಕೌಶಲದಿಂದಾಗಿ ಪತ್ರಿಕೋದ್ಯಮಿಗಳು ಗೌರವಕ್ಕೆ ಪಾತ್ರರಾಗುವಿರಿ.
  • ಕನ್ಯಾ
  • ಅನೇಕ ಅಚ್ಚರಿಯ ಸಂಗತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಕೊಡಲು ದೇವರಲ್ಲಿ ಪ್ರಾರ್ಥಿಸಿ. ಸಣ್ಣ ಮಕ್ಕಳ ಶಿಕ್ಷಕರು ಸಂತೋಷದಿಂದ ಖುಷಿ ಹೊಂದುವಿರಿ. ಬಿಸಿ ವಸ್ತು ಹಾಗು ವಿದ್ಯುತ್ ವಿಚಾರದಲ್ಲಿ ಎಚ್ಚರವಿರಲಿ.
  • ತುಲಾ
  • ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ವಿದ್ಯಾರ್ಥಿಗಳಿಗೆ ನಿರಾಸೆ ಕಾಡಲಿದೆ. ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ವಾಗ್ವಾದಗಳಿಗೆ ಆಸ್ಪದ ಕೊಡಬೇಡಿ. ದೇವರ ಆರಾಧನೆಯಲ್ಲಿ ಸಂತಸ ಹೊಂದುವಿರಿ.
  • ವೃಶ್ಚಿಕ
  • ಕಚೇರಿಯಲ್ಲಿ ನ ಕೆಲಸದ ಒತ್ತಡಗಳನ್ನು ಕುಟುಂಬದ ಸದಸ್ಯರ ಮೇಲೆ ಹೇರಬೇಡಿ. ಕಾರ್ಯದ ಸಾಧನೆಗೆ ಕಳೆದುಕೊಂಡ ಸ್ನೇಹಿತನ ಸಹಾಯ ಅಗತ್ಯವೆನ್ನಿಸುವುದು. ಸೂಕ್ತವಾದ ಗೆಳೆಯರು ಸಿಗಲಿದ್ದಾರೆ.
  • ಧನು
  • ಜನವಾಣಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಹಿಂಬಾಲಕರ ಬೆಂಬಲ ಸಿಗಲಿದೆ. ಮೈದುನನ ಸಹಾಯದಿಂದ ತವರು ಮನೆಯ ಕೆಲವರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬೆಂಕಿಯ ಬಗ್ಗೆ ಜಾಗ್ರತೆಯಿಂದಿರಿ.
  • ಮಕರ
  • ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ತೊರೆದು ಬಂದ ಮೂಲಮನೆಯಲ್ಲಿದ್ದ ಸುವ್ಯವಸ್ಥೆಗಳನ್ನು ನೆನೆಸಿಕೊಂಡು ಈಗ ಮರುಗುವಂತಾಗುತ್ತದೆ.
  • ಕುಂಭ
  • ತಿಳಿದಿರುವ ವಿಶೇಷವಾದ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿ ಆಶ್ಚರ್ಯ ಪಡುವುದರಲ್ಲಿ ಖುಷಿ ಪಡುತ್ತೀರಿ. ಹೊಸ ವ್ಯವಹಾರವೊಂದರ ಪ್ರಾರಂಭಕ್ಕೆ ಬೇಕಾದ ಮಾಹಿತಿಗಳ ಸಂಗ್ರಹ ನಡೆಯುವುದು.
  • ಮೀನ
  • ಸರ್ವಗುಣ ಸಂಪನ್ನನಾದ ಮಗನ ಕೀರ್ತಿ ಉನ್ನತ ಮಟ್ಟದಲ್ಲಿ ಕೇಳಿಬರುತ್ತಿರುವ ಬಗ್ಗೆ ಹೆಮ್ಮೆಯೆಂದೆನಿಸುತ್ತದೆ. ಬಾಡಿಗೆ ರೂಪದಲ್ಲಿ ಸಂಘ ಸಂಸ್ಥೆಯೊಂದಕ್ಕೆ ಕಟ್ಟಡವನ್ನು ಕಟ್ಟಿಸಿಕೊಡಲು ಒತ್ತಡಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.