ದಿನ ಭವಿಷ್ಯ: ಅಜ್ಞಾನದಿಂದ ಮಾಡಿದ ತಪ್ಪು ಕೆಲಸ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
ದಿನ ಭವಿಷ್ಯ
ಮೇಷ
ಬ್ಯಾಂಕ್ ಉದ್ಯೋಗಿಯಾಗುವ ಸಾಮರ್ಥ್ಯವಿದೆ ಎಂದು ಧೈರ್ಯವಿದ್ದರಷ್ಟೇ ಪರೀಕ್ಷೆ ಕಟ್ಟುವ ಸಾಹಸ ಮಾಡಿ. ಇನ್ನೊಬ್ಬರ ಜೀವನದಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದು ತಿಳಿದು ಸಂತೋಷವಾಗುವುದು.
ವೃಷಭ
ಕೈಗೊಂಡ ಕೆಲಸಗಳ ಬಗೆಗೆ ಮುತುವರ್ಜಿ ವಹಿಸುವುದರಿಂದ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಪೂರ್ಣಗೊಳ್ಳುವುದು. ಮಾನಸಿಕವಾಗಿ ಕಾಡುತ್ತಿರುವ ಚಿಂತೆಗೆ ಉತ್ತಮ ಪರಿಹಾರ ಸಿಗಲಿದೆ.
ಮಿಥುನ
ಲೋಹದ ಕಾರ್ಖಾನೆ ಉದ್ಯಮಿಗಳು, ಚಿನ್ನಾಭರಣ ವ್ಯಾಪಾರಿಗಳು ಉದ್ಯೋಗದಲ್ಲಿ ಅಧಿಕ ಲಾಭವನ್ನು ಹೊಂದುವಿರಿ. ಶಿಕ್ಷಕರ ಹೆಸರನ್ನು ವಿದ್ಯಾರ್ಥಿಗಳು ಉನ್ನತಮಟ್ಟಕ್ಕೆ ಕೊಂಡೊಯ್ಯುವರು.
ಕರ್ಕಾಟಕ
ಕೆಲವೊಂದು ಅರ್ಥವಿಲ್ಲದ ಕುಟುಂಬದ ನಡೆಗಳನ್ನು ವಿರೋಧಿಸಿ ಧ್ವನಿಯನ್ನು ಎತ್ತುವಿರಿ. ಸ್ನೇಹಿತರ ಸಹಕಾರದಿಂದ ಪ್ರಾರಂಭಿಸಿದ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ಸಿಂಹ
ಗುರು-ಹಿರಿಯರ ಅನುಗ್ರಹದಿಂದ, ಶಾಂತಿಯುತ ಸ್ವಭಾವದಿಂದ ನೆಮ್ಮದಿ ಕಾಣುವಿರಿ. ಚರ ಆಸ್ತಿಯನ್ನು ಮಾರಾಟ ಮಾಡುವಲ್ಲಿ ನಷ್ಟ ಸಂಭವಿಸುವುದು. ವಾಹನ ಖರೀದಿಗೆ ಕಾಯಿರಿ.
ಕನ್ಯಾ
ದೇವರ ಕೃಪೆಯಿಂದಾಗಿ ವ್ಯವಹಾರ ಕ್ಷೇತ್ರದಲ್ಲಿ ಆಗಬೇಕಾದ ಅನಾಹುತಗಳು ನಿವಾರಣೆಯಾಗಲಿವೆ. ನಿಮ್ಮ ಪ್ರವಾಸದ ಕನಸು ನನಸಾಗು ವಂಥ ಲಕ್ಷಣಗಳಿವೆ. ಸಂತಸದ ವಿಚಾರವನ್ನು ಎಲ್ಲರಿಗೂ ತಿಳಿಸುವಿರಿ.
ತುಲಾ
ಮಗಳ ಮಾತಿಗೆ ಬೆಲೆ ಕೊಟ್ಟು ಆಕೆಯ ಇಚ್ಛೆಯಂತೆಯೇ ಆಗಲು ಬಿಟ್ಟರೂ ಮನಸ್ಸಿಗೆ ನೋವು ಮಾಡಬಹುದು. ಪ್ರಾರಂಭಿಸಿದ ಕಾರ್ಯಗಳು ಸೂಕ್ತ ಸಮಯದಲ್ಲಿ ಪೂರ್ಣಗೊಳ್ಳಲಿವೆ.
ವೃಶ್ಚಿಕ
ಮನೋಭಿಲಾಷೆಯಂತೆ ತವರು ಮನೆಯಂತೆಯೇ ಪತಿಯ ಗೃಹದಲ್ಲಿಯು ಜೀವನ ಪ್ರಾರಂಭಿಸುವಿರಿ. ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು.
ಧನು
ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕ ವಾತಾವರಣ ಸ್ನೇಹಿತರಿಂದ ಸಿಗಲಿದೆ. ಆರಾಧ್ಯ ದೇವತೆಯು ಅಭೀಷ್ಟವನ್ನು ನೆರವೇರಿಸಿದ್ದರಿಂದ ಹರಕೆ ತೀರಿಸುವಿರಿ.
ಮಕರ
ಮವಹಿಸಿ ಕೆಲಸ ನಿರ್ವಹಿಸಿದ ಕಾರಣದಿಂದಾಗಿ ದೇಹಾಯಾಸ ಕಾಡುವುದು. ಹೊರಗೆ ಸಂತೋಷವನ್ನು ಹುಡುಕುವ ಬದಲು ಮನೆಯವರೊಂದಿಗೆ ಖುಷಿಯಾಗಿ ಕಾಲಕಳೆಯಿರಿ.
ಕುಂಭ
ಸೂಕ್ತ ಸಮಯದಲ್ಲಿ ಕೆಲಸಗಳನ್ನು ಮಾಡಿಕೊಳ್ಳದೆ ಕಡೇಯ ಗಳಿಗೆಯಲ್ಲಿ ಕಷ್ಟಪಡುವಿರಿ. ಗ್ರಹದ ಫಲಗಳು ಅನುಕೂಲಕರವಾಗಿರುವುದರಿಂದ ವ್ಯಾಪಾರ ನಿರೀಕ್ಷೆಗೂ ಮಿಕ್ಕಿ ಲಾಭದಾಯಕವಾಗುವುದು.
ಮೀನ
ಅಜ್ಞಾನದಿಂದ ಮಾಡಿದ ತಪ್ಪು ಕೆಲಸವು ಭವಿಷ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ನೂತನ ವಸ್ತ್ರವನ್ನು ಇತರರಿಗೆ ಕೊಡಲು ಯೋಚನೆ ಮಾಡುವಿರಿ.