ADVERTISEMENT

ದಿನ ಭವಿಷ್ಯ: ಮಾರ್ಗ ಮತ್ತು ಪ್ರಯತ್ನದಲ್ಲಿ ನಂಬಿಕೆ ಇರಲಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಮೇ 2024, 18:30 IST
Last Updated 6 ಮೇ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಾಹನ ಮಾರಾಟಗಾರರು ವಾಕ್ಪಟುತ್ವದಿಂದ ಉತ್ತಮ ಹೊಗಳಿಕೆಯನ್ನು ಕೇಳುವಿರಿ. ಧಾನ್ಯ ಖರೀದಿ ಮಾಡುವಾಗ ಮಧ್ಯವರ್ತಿಗಳ ಅತಿಯಾಸೆಗೆ ಬೇಸರ ಪಡುವಿರಿ.
  • ವೃಷಭ
  • ಅಭಿವೃದ್ಧಿಗೆ ಕಾರಣರಾದವರನ್ನು ಮರೆತು ಶುಭ ಕಾರ್ಯಗಳನ್ನು ಹಮ್ಮಿಕೊಂಡಿದ್ದರೆ ಯೋಚಿಸಿ; ಅದರಿಂದಾಗುವ ಮನಸ್ತಾಪವನ್ನು ತಪ್ಪಿಸಿ. ಮುಖ್ಯವಾದ ಕೆಲಸಕ್ಕಾಗಿ ಪ್ರಯಾಣ ಬೆಳೆಸುವಿರಿ.
  • ಮಿಥುನ
  • ಸ್ನೇಹಿತನೊಂದಿಗೆ ಮುನಿಸಿನ ತೆರೆಯನ್ನು ಬದಿ ಸರಿಸಿ,ಉತ್ತಮ ಸಮಯ ಅನುಭವಿಸುವಿರಿ. ಈಟಿಯಲ್ಲಿ ಇರಿಯುವಂಥ ಮಾತುಗಳ ಮೇಲೆ ಹಿಡಿತವಿರಲಿ. ಮಾರ್ಗ ಮತ್ತು ಪ್ರಯತ್ನದಲ್ಲಿ ನಂಬಿಕೆ ಇರಲಿ.
  • ಕರ್ಕಾಟಕ
  • ಯಾವುದೋ ಯೋಚನೆ ಮಾಡುತ್ತಾ ಇನ್ನಾವುದೋ ಕೆಲಸ ಮಾಡಿ ಅಪಘಾತಗಳನ್ನು ಮಾಡಿಕೊಳ್ಳಬೇಡಿ. ಜವಾಬ್ದಾರಿಯುತ ಯೋಜನೆಯ ಸ್ಪಷ್ಟ ವಿಷಯವೊಂದನ್ನು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ.
  • ಸಿಂಹ
  • ತವರಿನಲ್ಲಿ ನಡೆದ ಘಟನೆಗಳಿಂದ ಅತ್ಯಂತ ಸಂತೋಷ ಹೊಂದುವಿರಿ. ತವರಿನ ಕಡೆಯವರು ಮನೆಗೆ ಬರುವ ಸಾಧ್ಯತೆಗಳಿವೆ. ಸುಗಂಧ ದ್ರವ್ಯ ತಯಾರಕರು ಹಾಗೂ ಮಾರಾಟಗಾರರಿಗೆ ಲಾಭದಾಯಕ ದಿನವಾಗಲಿದೆ.
  • ಕನ್ಯಾ
  • ಸಂಘ–ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ಸಮಪಾಲು ಸಮ ಬಾಳು ಎಂಬ ಧ್ಯೇಯವನ್ನು ಪಾಲಿಸಿ.
  • ತುಲಾ
  • ವಂಶಾಭಿವೃದ್ಧಿಯಾಗಿರುವ ವಿಚಾರದಿಂದ ಸಂತೋಷ ಮುಗಿಲುಮುಟ್ಟುವುದು. ಮಾನಸಿಕ ಶಕ್ತಿಗಳು ಬಲಯುತವಾಗಿ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ.
  • ವೃಶ್ಚಿಕ
  • ಮನಸ್ಸಿಗೆ ಬಂದ ಮಾತುಗಳನ್ನು ಆಡದೆ ಯೋಚನೆ ಮಾಡಿ ತೂಕದ ಮಾತುಗಳನ್ನು ಆಡಿದಲ್ಲಿ ಗೌರವಗಳು ಹೆಚ್ಚಾಗುವುದು. ಆಕಸ್ಮಿಕವಾಗಿ ಬರುವಂಥ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸುವಿರಿ.
  • ಧನು
  • ನೃತ್ಯ ಕಲಾವಿದರು ಹಾಗೂ ಪ್ರಹಸನಕಾರರಿಗೆ ಉತ್ತಮ ಅವಕಾಶಗಳು ಅರಸಿಕೊಂಡು ಬರಲಿವೆ. ವಾದ-ವಿವಾದಗಳಿಂದ, ರಾಜಿ–ಪಂಚಾಯ್ತಿಗಳಿಂದ ಇಂದು ದೂರವಿರಿ. ಸಾಧ್ಯವಾದಷ್ಟು ಶಾಂತಿಯಿಂದ ಕೆಲಸವನ್ನು ಸಾಧಿಸಿ.
  • ಮಕರ
  • ಮಾಡುತ್ತಿರುವ ಕೆಲಸದಲ್ಲಿ ಹಣದ ಕೊರತೆ ಕಂಡುಬಂದರೆ ಸಂಕೋಚ ಮಾಡಿಕೊಳ್ಳದೆ ಆತ್ಮೀಯರಲ್ಲಿ ಕೇಳಿ . ತೀರಿಸುವ ಸಾಮರ್ಥ್ಯ ಇದೆ. ಉತ್ತಮ ಬುದ್ಧಿಶಕ್ತಿಯಿಂದ ಜನ ಮನ್ನಣೆ ಗಳಿಸಬಹುದು.
  • ಕುಂಭ
  • ಬಹುದಿನಗಳ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀಡುವ ಪ್ರದರ್ಶನಕ್ಕೆ ಪ್ರಶಂಸೆಗಳ ಮಹಾಪೂರ ಹರಿದು ಬರಲಿದೆ. ಚುಟುಕಾದ ಹಾಗೂ ಸರಿಯಾದ ಮರುತ್ತರಗಳಿಗೆ ಪ್ರಶಂಸೆಗಳು ದೊರೆಯುತ್ತವೆ.
  • ಮೀನ
  • ಕೋರ್ಟ್ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆದಾಯದ ಎರಡರಷ್ಟು ಖರ್ಚು ಸಂಭವಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.