ADVERTISEMENT

ದಿನ ಭವಿಷ್ಯ: ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಆಗಸ್ಟ್ 2024, 23:30 IST
Last Updated 7 ಆಗಸ್ಟ್ 2024, 23:30 IST
   
ಮೇಷ
  • ಉತ್ತಮ ಸಂಸ್ಕೃತಿಯನ್ನು ಪಡೆದಿರುವ ಕೆಲಸ ಕಾರ್ಯಗಳಲ್ಲಿ ಖಂಡಿತ ಜಯ ಸಿಗುವುದು. ಹೆಂಡತಿ ಮಕ್ಕಳೊಂದಿಗೆ ಕೈಗೊಂಡ ಪ್ರವಾಸ ಸುಖದಾಯಕವಾಗಿರುವುದು. ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ.
  • ವೃಷಭ
  • ಸಾಂಸಾರಿಕ ಸಮಸ್ಯೆಗಳಿಂದ ವೃತ್ತಿಯಲ್ಲಿ ಬಿಡುವು ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಈ ದಿನದ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.  ಸೌಖ್ಯವೆಂದು ಅನಿಸಲಿದೆ.
  • ಮಿಥುನ
  • ನಿರುದ್ಯೋಗಿಗಳಿಗೆ ಪ್ರತಿಷ್ಠಿತರ ಪರಿಚಯದಿಂದ ಗೌರವಾನ್ವಿತ ಜಾಗದಲ್ಲಿ ಉದ್ಯೋಗ ಪ್ರಾಪ್ತಿ. ಹವಾ ಬದಲಾವಣೆಗಾಗಿ ಕಿರು ಪ್ರವಾಸದ ಸಾಧ್ಯತೆಗಳಿವೆ. ಲೇವಾದೇವಿ ವ್ಯವಹಾರಗಳಲ್ಲಿ  ಜಾಗ್ರತೆ ವಹಿಸಬೇಕಾಗುವುದು.
  • ಕರ್ಕಾಟಕ
  • ಆರ್ಥಿಕತೆಯಲ್ಲಿ ಅಗೌರವವಾಗುವಂಥ ಸನ್ನಿವೇಶ ಎದುರಾಗಿ ಕೊನೆಯ ಕ್ಷಣದಲ್ಲಿ ಹಣಕಾಸಿನ ಹೊಂದಿಕೆಯಾಗುವುದು. ಮಹಿಳೆಯರಿಗೆ ತವರಿನವರ ಆಗಮನವು ಅತೀವ ಸಂತೋಷಕ್ಕೆ ಕಾರಣವಾಗುವುದು.
  • ಸಿಂಹ
  • ಕಾರ್ಯಕ್ಷೇತ್ರದಲ್ಲಿ ಎಚ್ಚರ ವಹಿಸದೆ ಅತಿಯಾದ ವಿಶ್ವಾಸದಿಂದ ಮುಂದುವರಿದರೆ ನಿಮ್ಮ ಮೇಲಧಿಕಾರಿಗಳಿಂದ ಮುಖಭಂಗವಾಗಬಹುದು. ಸಾಂಸಾರಿಕವಾಗಿ ಸುಖ ಹಾಗೂ ನೆಮ್ಮದಿಯುಕ್ತ ಕುಟುಂಬ ನಿಮ್ಮದಾಗುವುದು.
  • ಕನ್ಯಾ
  • ಬುದ್ಧಿವಂತಿಕೆ ಹಾಗೂ ಯೋಜನೆಗಳು ನಿಮ್ಮ ವ್ಯವಹಾರ ಸುಲಭ ಗೊಳಿಸುತ್ತದೆ. ಸ್ನೇಹಿತರಿಂದ ವ್ಯಾಪಾರದಲ್ಲಿ ಉತ್ತಮ ಫಲಿತಾಂಶ  ಎದುರು ನೋಡಬಹುದು. ಹಿತಶತ್ರುಗಳ ಪರಾಜಯ ನೋಡಿ ಸಂತಸ.
  • ತುಲಾ
  • ಇಂದಿನ ದಿನದ ಪರಿಸ್ಥಿತಿಗಳನ್ನು ನೀವು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಮನೆ ದೇವರ ಪೂಜೆಯ ಹರಕೆಯ ಫಲವಾಗಿ ಮಗ/ ಮಗಳಿಗೆ ಉದ್ಯೋಗ ದೊರಕುವುದು.
  • ವೃಶ್ಚಿಕ
  • ವಾಣಿಜ್ಯೋದ್ಯಮ ಮಂದಿಗೆ ಇಂದು ಹೆಚ್ಚಿನ ಬಂಡವಾಳ ತೊಡಗಿಸಲು ಉತ್ತಮ ದಿನ.  ಕೆಲಸಮಾಡುವ ಸ್ಥಳದಲ್ಲಿ ಕೆಲವು ಬದಲಾವಣೆ ಮಾಡುವುದು ಉತ್ತಮ. ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ವೃದ್ಧಿಯಾಗುವುದು.
  • ಧನು
  • ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಬಹಳ ಕೆಲಸದ ಒತ್ತಡ ಇರುವುದು. ಧ್ಯೇಯವನ್ನು ತಲುಪುವ ಹಾದಿಯಲ್ಲಿ ನಿಮ್ಮ ಬಾಲ್ಯ ಸ್ನೇಹಿತರ ಸಹಕಾರ  ದೊರೆಯಲಿದೆ. ಅಧಿಕಾರಿಗಳ ವಿಶ್ವಾಸಗಳಿಸಲು ಪ್ರಯತ್ನಿಸಿ.
  • ಮಕರ
  • ಕ್ರಮಿಸಿ ಬಂದ ದಾರಿಯನ್ನು ಅವಲೋಕಿಸಿದಲ್ಲಿ ತಲುಪುಬೇಕೆಂದಿರುವ ಗುರಿ ದೂರವಿಲ್ಲವೆಂಬ ವಿಚಾರದಿಂದ ಉತ್ಸಾಹ ಹೊಂದುವಿರಿ. ನಿಮ್ಮ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮದ ಅಗತ್ಯವಿದೆ.
  • ಕುಂಭ
  • ವ್ಯವಹಾರದ ಮೂಲ ವಿಚಾರವನ್ನು ನಿಮ್ಮ ಉತ್ತರಾಧಿಕಾರಿಗಳಿಗೆ ತಿಳಿಸುವ ಮನಸ್ಸಾಗಲಿದೆ. ಕೃಷಿ ಕಾರ್ಯವು ವಿಳಂಬವಾಗದಂತೆ ಕೃಷಿಕರು ಗಮನವಹಿಸಿ.  ಭೋಜನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು.
  • ಮೀನ
  • ವಾಹನ ಮಾರಾಟಗಾರರಿಗೆ,ರಿಪೇರಿ ಮಾಡುವವರಿಗೆ ಉದ್ಯೋಗದಲ್ಲಿ ಬಿಡುವಿಲ್ಲ. ನಿಮ್ಮ ವೃತ್ತಿಯಲ್ಲಿ ಸಾಕಷ್ಟು ಸುಸಂದರ್ಭಗಳು ಎದುರಾ ಗಬಹುದು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಿಂದ ಲಾಭ ಸಿಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.