ADVERTISEMENT

ದಿನ ಭವಿಷ್ಯ: ಪ್ರಯಾಣದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಮೇ 2024, 18:30 IST
Last Updated 7 ಮೇ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಆರೋಗ್ಯದಲ್ಲಿನ ವ್ಯತ್ಯಾಸಕ್ಕೆ ನಿದ್ರಾಭಂಗವೇ ಮೂಲ ಕಾರಣ. ಮೃದು ಹಾಗೂ ಸ್ನಿಗ್ಧವಾದ ಮನಸ್ಸನ್ನು ಹೊಂದಿರುವಂಥರಿಗೆ ಇಂದು ನುಡಿಯುವ ಎಲ್ಲಾ ಮಾತುಗಳು ಚುಚ್ಚಿದ ಅನುಭವವಾಗುತ್ತದೆ.
  • ವೃಷಭ
  • ಹೆಚ್ಚಿನ ಎಲ್ಲಾ ಕೆಲಸಗಳು ಸಿಬ್ಬಂದಿ ವರ್ಗದವರ ಸಹಕಾರದಿಂದ ವ್ಯವಸ್ಥಿತವಾಗಿ ಕೈಗೂಡಲಿದೆ. ಹೋಟೆಲ್‌ ಹಾಗೂ ಲಾಡ್ಜ್‌ ನಿರ್ವಾಹಕರಿಗೆ ಲಾಭದಾಯಕ ದಿನ.
  • ಮಿಥುನ
  • ಕಾರ್ಯಗಳಲ್ಲಿ ಜಯಭೇರಿಯು ಎದುರಾಳಿಗಳ ಅಸೂಯೆಗೆ ಕಾರಣವಾಗುವುದು. ದೀರ್ಘಕಾಲದ ಕಾಯುವಿಕೆಯ ಬಳಿಕ ನಿಮ್ಮ ಜೀವನ ಸಂಗಾತಿಯು ನಿಮಗೆ ಜತೆಯಾಗುವರು.
  • ಕರ್ಕಾಟಕ
  • ಮಾರುಕಟ್ಟೆಯಲ್ಲಿ ನಿಮ್ಮ ವ್ಯಾಪಾರ ಅಧಿಕವಾಗಿದ್ದು , ಹೆಚ್ಚಿನ ಅವಕಾಶಗಳೊಂದಿಗೆ ಶುಭ ಫಲವನ್ನು ತರಲಿದೆ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಂಟೆ–ತಕರಾರುಗಳು ನಿಧಾನವಾಗಿ ದೂರ ಸರಿಯಲಿವೆ.
  • ಸಿಂಹ
  • ಉಡುಗೆ ತೊಡುಗೆಗಳ ಬಗ್ಗೆ ಇತರರು ಆಡಿಕೊಳ್ಳುತ್ತಿದ್ದರೂ ಸೂಕ್ತವೆನ್ನಿಸಿದಲ್ಲಿ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಗ್ರಾಮ ಪಂಚಾಯತಿ ಉದ್ಯೋಗಿಗಳಿಗೆ ಬಿಡುವಿಲ್ಲದ ದಿನವಾಗಿರುತ್ತದೆ.
  • ಕನ್ಯಾ
  • ಮನಸ್ಸಿನ ತೊಳಲಾಟಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದು. ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಸ್ವಂತ ಕಾರ್ಖಾನೆ ಉದ್ಯೋಗಿಗಳಿಗೆ ಲಾಭದಾಯಕ ದಿನ.
  • ತುಲಾ
  • ಉತ್ತಮವಾದ ನೆನಪಿನ ಶಕ್ತಿಯು ಇಂದು ನಿಮ್ಮ ಕೆಲಸಗಳಲ್ಲಿ ಸಹಾಯಕಾರಿಯಾಗಲಿದೆ. ಮಗಳ ಅಂತರರಾಷ್ಟ್ರೀಯ ಸಾಧನೆಯು ಹೆಮ್ಮೆಯ ಸಂಗತಿಯಾಗುವುದು. ಪ್ರಯಾಣದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ.
  • ವೃಶ್ಚಿಕ
  • ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಸಂಜೆಯ ಮುಂದೆ ತಂಗಾಳಿಯ ಜತೆ ಸ್ನೇಹಿತರೊ ಅಥವಾ ಸಂಗಾತಿಯೊಂದಿಗೆ ಕಾಲ ಕಳೆಯುವಿರಿ. ಹಳದಿ ಬಣ್ಣವು ಶುಭ ತರಲಿದೆ.
  • ಧನು
  • ಸಂದಿಗ್ಧ ಪರಿಸ್ಥಿತಿಯಲ್ಲಿರುವ ನೀವು ಪರಿಸ್ಥಿತಿಯನ್ನು ಅವಲೋಕಿಸಿ ಇಷ್ಟದೇವರನ್ನು ಪ್ರಾರ್ಥಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಮಗನ ವಿವಾಹದ ಸಿದ್ಧತೆಗಳು ಚುರುಕಾಗಿ ಸಾಗಲಿದೆ.
  • ಮಕರ
  • ಜಾಗತಿಕವಾಗಿ ವ್ಯವಹಾರವನ್ನು ಹೊಂದಿರುವವರು ಸಣ್ಣ ಮಟ್ಟದ ವ್ಯಾಪಾರಿಗಳ ಚಾಕಚಕ್ಯತೆಯನ್ನು ನೋಡಿ ಕಲಿಯುವಂಥ ವಿಚಾರಗಳ ಮೇಲೆ ಗಮನ ಹರಿಸುವಿರಿ. ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ.
  • ಕುಂಭ
  • ಕಿರಿಯರು ಹೇಳಿದ ಸಲಹೆಗಳನ್ನು ಅನನುಭವಿಗಳ ಮಾತು ಎಂದು ಕಡೆಗಣಿಸದೆ ಪರಾಮರ್ಶಿಸಿ ನೋಡಿ. ಮೂರನೇ ವ್ಯಕ್ತಿಗಳ ಮಾತನ್ನುಕೇಳಿಕೊಂಡು ವ್ಯವಹಾರದಲ್ಲಿ ಚನ್ನಾಗಿರುವ ವ್ಯಕ್ತಿಗಳ ಸ್ನೇಹ ಹಾಳು ಮಾಡಿಕೊಳ್ಳದಿರಿ.
  • ಮೀನ
  • ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಉದ್ಯೋಗಕ್ಕೆ ಸಂಬಂಧಿಸಿದಂಥ ಯಂತ್ರಗಳ ಹಾನಿಯು ಉಂಟಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.