ADVERTISEMENT

ದಿನ ಭವಿಷ್ಯ: ದೈವಬಲದಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಫೆಬ್ರುವರಿ 2026, 18:30 IST
Last Updated 8 ಫೆಬ್ರುವರಿ 2026, 18:30 IST
   
ಮೇಷ
  • ತೊಂದರೆಗಳೆಲ್ಲಾ ಉಪಶಮನಗೊಳ್ಳುತ್ತ ಹಂತ ಹಂತವಾಗಿ ಅಭಿವೃದ್ಧಿ ತೋರಿ ಬರಲಿದೆ. ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುವ ನೀವು ಸಂಬಂಧಿಕರ ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ.
  • ವೃಷಭ
  • ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂತೋಷದಿಂದ ಕೆಲಸ ಮಾಡುವ ಮತ್ತು ಹೊಸದಾದ ಜಾಗ ಪ್ರಾಪ್ತಿ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ. ಗೃಹ ತಾಪತ್ರಯಗಳಿಂದ ಮುಕ್ತರಾಗುವಿರಿ.
  • ಮಿಥುನ
  • ಬಂಧು-ಮಿತ್ರರ ಸಹಾಯ ಸಕಾಲಕ್ಕೆ ಒದಗುವುದರಿಂದ ನಿರಾಳ ಭಾವ ಮೂಡುವುದು. ನಿಮ್ಮ ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕಾದರೆ ಅವಿರತ ದುಡಿಮೆಯೊಂದೇ ಮಾರ್ಗ. ವಿದೇಶಿ ಪ್ರಯಾಣ ಸುಖಕರವಾಗಿರುವುದು.
  • ಕರ್ಕಾಟಕ
  • ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಆನಂದ ಸಿಗಬಹುದು. ತಂಗಿಗಾಗಿ ಹಣವನ್ನು ಮತ್ತು ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು.
  • ಸಿಂಹ
  • ಲೋಹ ಮಾರಾಟಗಾರರು ಹಳೆಯ ಲೋಹಗಳನ್ನು ಕೊಳ್ಳುವ ರೀತಿಯಲ್ಲಿ ಅನಿರೀಕ್ಷಿತವಾಗಿ ಲಾಭ ಪಡೆಯುವರು. ಬೇರೆಯವರನ್ನು ಮರುಳುಗೊಳಿಸುವ ಮಾತಿನ ಕೌಶಲ ನಿಮ್ಮಲ್ಲಿದೆ.
  • ಕನ್ಯಾ
  • ಮಹತ್ವದ ವಿಷಯಕ್ಕೆ ಗಂಭೀರ ಚಿಂತನೆ ಅಗತ್ಯ. ವಕೀಲರ ಸಲಹೆ, ಮಾರ್ಗದರ್ಶನ ಪಡೆದು ಮುನ್ನುಗ್ಗುವುದು ಅತ್ಯುತ್ತಮ. ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ.
  • ತುಲಾ
  • ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಸಮಯ ವಿನಿಯೋಗಿಸುವಿರಿ. ಹೊಸ ಕೆಲಸ ಕಾರ್ಯಗಳ ಬಗ್ಗೆ ಸುದೀರ್ಘವಾದ ಮಾತುಕತೆ ನಡೆಸಿ. ಸಾಲದ ಹಣ ಹಿಂತಿರುಗಿ ಬರುವುದು.
  • ವೃಶ್ಚಿಕ
  • ಋಣಬಾಧೆ, ಖರ್ಚು-ವೆಚ್ಚ, ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು.
  • ಧನು
  • ಸ್ವಯಂ ಔಷಧಿಗಳ ಅಧಿಕ ಬಳಕೆ ಅಥವಾ ಅದರ ಅಡ್ಡಪರಿಣಾಮದಿಂದ ಅನಾರೋಗ್ಯಕ್ಕೆ ಗುರಿಯಾಗಬೇಕಾಗುವುದು. ಮದುವೆಯ ವಿಚಾರದಲ್ಲಿ ಆಯ್ಕೆ ಸರಿಯಾಗಿದ್ದು ನಿರ್ಭಯವಾಗಿ ನಿರ್ಧಾರವನ್ನು ಎಲ್ಲರಲ್ಲಿ ತಿಳಿಸಿ.
  • ಮಕರ
  • ವಿವಾದ ಗೊಡವೆಗಳಿಂದ ದೂರ ಉಳಿಯುವಂಥ ನಿರ್ಧಾರ ಗೌರವವನ್ನು ಕಾಪಾಡಿಕೊಳ್ಳುವಲ್ಲಿ ಅನುಕೂಲ. ವಿಮಾ ಸಲಹೆಗಾರರು ಯಾರಿಗೂ ಬಲವಂತ ಪಡಿಸಬೇಡಿ. ನೂತನ ವಾಹನ ಖರೀದಿಯ ಯೋಗವಿದೆ.
  • ಕುಂಭ
  • ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವುದು ಸರಿಯಾದ ಮಾರ್ಗ. ನೆರೆಯವರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ. ಮಕ್ಕಳ ವರ್ತನೆ ಮನಸ್ಸಿಗೆ ಸಂತೋಷ ತಂದುಕೊಡಲಿದೆ.
  • ಮೀನ
  • ದೈವಬಲ ಒದಗುವುದರಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿವೆ. ಸಂಜೆಯ ಸಮಯದಲ್ಲಿ ಶಿರೋ ವೇದನದಿಂದ ಬಳಲುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.