ADVERTISEMENT

ದಿನ ಭವಿಷ್ಯ: ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಮೇ 2024, 18:30 IST
Last Updated 9 ಮೇ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ. ವಿಮರ್ಶಾತ್ಮಕ ಆಲೋಚನೆಯನ್ನು ಎಲ್ಲರೂ ಪ್ರಶಂಸಿಸುವರು. ನಿರಂತರ ಪ್ರಯತ್ನದಿಂದ ಕಾರ್ಯಸಿದ್ಧಿ ಆಗುತ್ತದೆ.
  • ವೃಷಭ
  • ಪ್ರತಿ ವಿಷಯವನ್ನು ಗಹನವಾಗಿ ಚಿಂತಿಸಿದರೆ ಲೋಪ ದೋಷಗಳೇ ಕಂಡು ಬರುವವು. ಸ್ನೇಹಿತನ ವಿಷಯದಲ್ಲಿ ಈ ದಿನ ಆಸಕ್ತಿಯನ್ನು ವಹಿಸಲಿದ್ದೀರಿ.
  • ಮಿಥುನ
  • ಸಸ್ಯ ಮಾರಾಟಗಾರರಿಗೆ, ನರ್ಸರಿ ಹೊಂದಿರುವವರಿಗೆ ಲಾಭದ ದಿನ. ಮನೆಯ ಅಥವಾ ಕಚೇರಿಯ ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆ ನಿಮ್ಮದಾಗುತ್ತದೆ. ಹಣಕಾಸಿನ ಕೊರತೆ ಇರುವುದಿಲ್ಲ.
  • ಕರ್ಕಾಟಕ
  • ದೂರದ ಪ್ರಯಾಣದ ಆಯಾಸವನ್ನು ಆರಾಮವಾಗಿ ಇರುವುದರಿಂದ ನೀಗಿಸಿಕೊಳ್ಳುವಿರಿ. ಕೆಲವೊಂದು ವಿಚಾರಗಳು ನೀವೆಷ್ಟೇ ತಲೆಕೆಡಿಸಿಕೊಂಡು ಮಾಡಿದರೂ ಸರಿಯಾಗಿ ಆಗುವುದಿಲ್ಲ.
  • ಸಿಂಹ
  • ಮನೆಯಲ್ಲಿನ ಸಣ್ಣ ಮಕ್ಕಳ ಆರೋಗ್ಯದಲ್ಲಿನ ಏರುಪೇರು ಕಳವಳವನ್ನು ತಂದೊಡ್ಡಬಹುದು. ಸ್ಥಿರಾಸ್ತಿ ಸಂಬಂಧಿಸಿದ ವ್ಯವಹಾರಗಳಿಂದ ಲಾಭ. ಹಲವು ದಿನಗಳ ನಂತರ ತಾಯಿಯೊಂದಿಗೆ ಕಳೆದ ಸಮಯ ಮನಸ್ಸಿಗೆ ಮುದ ನೀಡಲಿದೆ.
  • ಕನ್ಯಾ
  • ಅನೇಕ ವಿಚಾರಗಳನ್ನು ಒಂದೇ ಬಾರಿಗೆ ಸಮರ್ಥವಾಗಿ ನಿರ್ವಹಿಸುವ ಕಾರ್ಯನಿರ್ವಹಣಾ ವೈಖರಿಗೆ ಉತ್ತಮ ಮಾತುಗಳನ್ನು ಕೇಳುವಿರಿ.ಸದ್ಪರಂಪರೆಯಲ್ಲಿ ಜನಿಸಿದ್ದಕ್ಕಾಗಿ ಹೆಮ್ಮೆ ಪಡುವಂತೆ ಆಗುತ್ತದೆ.
  • ತುಲಾ
  • ಸಾಂತ್ವನ ನುಡಿಗಳು ಬೇಸರಗೊಂಡ ವ್ಯಕ್ತಿಗೆ ಆಸರೆಯ ಹೆಗಲಾದಂತೆ ಆಗುತ್ತದೆ. ಸಮಾಜ ಸೇವೆಯಲ್ಲಿ ಪುತ್ರರ ಘನತೆ ಗೌರವ ಹೆಚ್ಚಳವಾಗುವುದು. ಉಸಿರಾಟ ಸಂಬಂಧಿ ಸಮಸ್ಯೆಗಳಾಗಬಹುದು.
  • ವೃಶ್ಚಿಕ
  • ಕಾರ್ಯಕ್ರಮದಲ್ಲಿ ನಿಮ್ಮ ಪಾತ್ರವನ್ನು ಬಹಳ ಪ್ರಶಂಸಿಸಿ ಜನರು ಮಾತನಾಡುವರು . ಹೊಸ ಹಿಂಬಾಲಕರನ್ನು ಸಂಪಾದಿಸುವಿರಿ. ರೈತಾಪಿ ವರ್ಗದವರಿಗೆ ತಮ್ಮ ವೃತ್ತಿಯಲ್ಲಿನ ಕ್ರಿಯಾಶೀಲತೆ ಶುಭದಾಯಕ.
  • ಧನು
  • ಮಕ್ಕಳ ಅಗತ್ಯವನ್ನು ಪೂರೈಸುವುದರಲ್ಲಿ ಆಸಕ್ತರಾದ ನೀವು ಸಂಜೆ ಮಕ್ಕಳೊಂದಿಗೆ ತಿರುಗಾಟ ಮಾಡುವಿರಿ. ಕಷ್ಟ ಕೋಟಲೆಗಳಿಂದ ನಿರ್ಮುಕ್ತರಾಗುವ ಸುಸಂದರ್ಭ ತುಂಬಾ ಸನಿಹವಾಗಿ ಇದೆ.
  • ಮಕರ
  • ಸ್ವಲ್ಪ ಮಟ್ಟಿಗೆ ಧನ ವ್ಯಯವಿದ್ದರೂ ವಿವಿಧ ಹೊಸ ಮೂಲಗಳಿಂದ ಧನಾಗಮವಾಗುವುದು. ಇಂಪಾದ ವಾದ್ಯ ಸಂಗೀತ ಮನಸ್ಸನ್ನು ತಿಳಿಗೊಳಿಸುವಲ್ಲಿ ಸಹಕಾರಿ. ತಾಯಿಯ ಆರೈಕೆಯಿಂದಾಗಿ ಸುಖಕರವೆನಿಸುತ್ತದೆ.
  • ಕುಂಭ
  • ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಎದುರಾಗುವ ಏರಿಳಿತದ ನಡುವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ಈಡೇರಲಿವೆ. ಬೇಸರಪಡುವ ಅವಶ್ಯಕತೆ ಇಲ್ಲ.
  • ಮೀನ
  • ಆತ್ಮೀಯರ ಅಗಲಿಕೆಯಿಂದಾಗಿ ಕ್ಷಣವು ಯುಗಗಳನ್ನು ಕಳೆದ ಅನುಭವವಾಗಬಹುದು. ಉತ್ತರ ತಿಳಿಯದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿನಲ್ಲಿ ವಾಸ್ತವನ್ನು ಮರೆಯದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.