ADVERTISEMENT

ದಿನ ಭವಿಷ್ಯ: ಸ್ವಂತವಾಗಿ ಉದ್ಯೋಗ ಮಾಡುವ ಈ ರಾಶಿಯವರು ಪ್ರಗತಿ ಕಾಣಲಿದ್ದೀರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಮಾರ್ಚ್ 2024, 23:15 IST
Last Updated 9 ಮಾರ್ಚ್ 2024, 23:15 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಸೂಚನೆ ಕಾಣುತ್ತವೆ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಒಂದು ಶಿಶುವಿನ ಜನನ ಕುಟುಂಬದ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ.
  • ವೃಷಭ
  • ಮನೆಯ ನವೀಕರಣಗೊಳಿಸುವ ಕಾರ್ಯಕ್ಕೆ ಕೈ ಹಾಕುವವರು ವಾಸ್ತುಶಾಸ್ತ್ರದ ಬಗ್ಗೆ ಗಮನಕೊಡಿ. ಯಾವುದನ್ನೇ ಆದರೂ ಇಂದು ಷರತ್ತುಗಳ ರೀತಿಯಲ್ಲಿ ವರ್ತಿಸುವಿರಿ. ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದೆ.
  • ಮಿಥುನ
  • ಹೊಸ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದು ಸರಿಯಲ್ಲ. ಈ ದಿನ ನಿಮ್ಮ ಬಾಲ್ಯದ ಕನಸು ನನಸಾಗುವ ದಿನ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಣ ನಿಮ್ಮ ಕೈ ಸೇರಲಿದೆ.
  • ಕರ್ಕಾಟಕ
  • ಮಾತಿನಲ್ಲದೇ ವ್ಯವಹಾರದಲ್ಲಿಯೂ ಚಾಣಾಕ್ಷತನ ತೋರುವುದು ನಿಮ್ಮ ಏಳಿಗೆಗೆ ಕಾರಣವಾಗಲಿದೆ. ವ್ಯಾಪಾರದಲ್ಲಿ ಹಣವನ್ನು ಪಡೆಯಲು ಕಷ್ಟವಾಗಬಹುದು. ಇಂದು ನೀವು ರಾಜಕೀಯದಲ್ಲಿ ಮೇಲ್ದರ್ಜೆಗೇರುವಿರಿ.
  • ಸಿಂಹ
  • ಈ ದಿನದ ಕಾರ್ಯಕ್ಕೆ ನಿಮ್ಮ ಆರ್ಥಿಕ ಬಲ ಮತ್ತು ಪ್ರಯತ್ನಬಲ ಎಷ್ಟಿದ್ದರೂ, ಸಹೋದರರ ಅಥವಾ ಸಂಬAಧಿಕರ ಸಹಾಯ ಕೇಳುವುದು ಅನಿವಾರ್ಯವಾಗುವುದು. ಸಾಹಿತಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುವುದು.
  • ಕನ್ಯಾ
  • ವಿದೇಶೀ ಗೆಳೆಯನ ಆಗಮನ ಮತ್ತು ಅವನ ಸಹವಾಸದಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮ ಬದಲಾವಣೆ ಕಾಣುವಿರಿ. ಮಹತ್ವವಾದ ಕೆಲಸದ ಪೂರ್ವತಯಾರಿಗಾಗಿ ದೂರ ಸಂಚಾರದ ಯೋಗವಿದೆ.
  • ತುಲಾ
  • ಯಾವುದೇ ರೀತಿಯ ವಾದ ವಿವಾದಗಳು, ಅಸಮಾಧಾನ ನಿಮ್ಮ ಕಾರ್ಯಕ್ಕೆ ಅಡ್ಡಿ ಮಾಡದಂತೆ ಗಮನಹರಿಸಿ. ನಿಮ್ಮ ಸಾಮರ್ಥ್ಯದ ಅರಿವು ನಿಮಗಿರಲಿ. ಯಾವುದೇ ವಿಷಯದಲ್ಲಾದರೂ ನಿಮಗೆ ಜಯ ಇರಲಿದೆ.
  • ವೃಶ್ಚಿಕ
  • ದುಡ್ಡಿನ ವಿಷಯದಲ್ಲಿ ಮೋಸ ಹೋಗುವ ಅಥವಾ ಬೇಜವಾಬ್ದಾರಿತನದಿಂದಾಗಿ ಕಳೆದುಕೊಳ್ಳುವ ಸಂಭವವಿದೆ. ಮನೆಯಲ್ಲಿ ಆನಂದದ ವಾತಾವರಣ ಉದಯವಾಗುತ್ತದೆ. ವ್ಯಾಪಾರಿಗಳಿಗೆ ಬಂಡವಾಳ ಹೂಡಿಕೆಯಲ್ಲಿ ಲಾಭ.
  • ಧನು
  • ನೀವು ಬೇರೆ ಯಾರಿಗೂ ನಿಮ್ಮ ಯೋಜನೆಯ ಸುಳಿವು ನೀಡಬಾರದು. ಜೀವನದಲ್ಲಿ ಹಣಕ್ಕಿಂತ ಸ್ನೇಹ ಸಂಬಂಧಗಳು ಮುಖ್ಯವೆಂಬುವುದು ತಿಳಿಯುವುದು. ಕುಟುಂಬದಲ್ಲಿ ಅತ್ಯಂತ ಸಂತೋಷದ ವಾತಾವರಣವಿರಲಿದೆ.
  • ಮಕರ
  • ತರಕಾರಿ, ಹಣ್ಣು, ಹೂವು ವ್ಯಾಪಾರಿಗಳಿಗೆ ಉದ್ಯೋಗದಲ್ಲಿ ಲಾಭ ಬರುತ್ತದೆ. ಕಲಾವಿದರುಗಳಿಗೆ, ಪತ್ರಕರ್ತರಿಗೆ ಪ್ರಶಂಸೆಯ ಮಾತುಗಳು ಕೇಳಿ ಬರುವವು. ಹೋಟೆಲ್ ಉದ್ದಿಮೆಯವರಿಗೆ ಕ್ಲೇಶ ಕಂಡುಬರಲಿದೆ.
  • ಕುಂಭ
  • ಇಂದಿನ ದಿನದ ಪ್ರಾರಂಭದಲ್ಲಿ ಉಂಟಾಗುವ ವಿಫಲತೆ ಬಗ್ಗೆ ನಿರಾಶೆಗೊಳ್ಳಬಾರದು. ಆಹಾರ ಪದಾರ್ಥಗಳ ತಯಾರಕರಿಗೆ, ವ್ಯಾಪಾರಸ್ಥರಿಗೆ ಉತ್ತಮ ಲಾಭ. ಕೇವಲ ಮನರಂಜನೆಗಾಗಿ ದೂರ ಪ್ರಯಾಣ ಸರಿಯಲ್ಲ.
  • ಮೀನ
  • ಹಿತಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನ ಮಾಡಬಹುದು, ಜಾಗ್ರತರಾಗಿರಿ. ಶತ್ರುಗಳ ಬಲೆಗೆ ಬೀಳದಂತೆ ನೀವು ಎಚ್ಚರ ವಹಿಸಬೇಕು. ನಿರಂತರ ಕೆಲಸ ಕಾರ್ಯಗಳಿಂದ ಹೊರ ಬರಲು ಪ್ರಯತ್ನಿಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.