ದಿನ ಭವಿಷ್ಯ: ಯಾವುದೇ ಕೆಲಸ ಕೈಗೊಳ್ಳುವ ಮುನ್ನ ತಾಳ್ಮೆ ವಹಿಸುವುದು ಉತ್ತಮ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಮೇ 2024, 18:30 IST
Last Updated 11 ಮೇ 2024, 18:30 IST
ದಿನ ಭವಿಷ್ಯ
ಮೇಷ
ನವದಂಪತಿಗಳಿಗೆ ಉಲ್ಲಾಸಕರ ಸಮಯ ಅನುಭವಿಸಲು ಕಾಲಾವಕಾಶ ಸಿಗಲಿದೆ. ನಿಮ್ಮ ಮನಸ್ಸಿಗೆ ಹತ್ತಿರವಾಗಿರುವ ಜನರಿಗೆ ಚುಚ್ಚು ಮಾತುಗಳನ್ನಾಡಿ ಸಂಬಂಧ ಹಾಳು ಮಾಡಿಕೊಳ್ಳದಿರಿ.
ವೃಷಭ
ಬಿಡುವಿಲ್ಲದ ನಿಮ್ಮ ದಿನಚರಿಯಲ್ಲಿ ಎಷ್ಟೇ ಆಯಾಸವಾಗಿದ್ದರೂ, ಮನೆಯವರಿಗೆ ನೀಡುವ ಸಮಯವು ಅತ್ಯಂತ ಪ್ರಮುಖವಾಗಿರುತ್ತದೆ. ಹರಿತವಾದ ಮಾತುಗಳು ನಿಮ್ಮನ್ನು ಇಂದು ಘಾಸಿಗೊಳಿಸುವ ಸಾಧ್ಯತೆ ಇದೆ.
ಮಿಥುನ
ನಿಮ್ಮ ಸಂತೋಷ ಹೆಚ್ಚಿಸಲು ನಿಮ್ಮ ಸೋದರ ಸಂಬಂಧಿಗಳು ವಿಶೇಷ ಪ್ರಯತ್ನ ಮಾಡಲಿದ್ದಾರೆ. ನಿಮಗೆ ಎಷ್ಟೇ ಒತ್ತಡವಿದ್ದರೂ, ನಿಮ್ಮ ಮುಖದಲ್ಲಿನ ನಗುವು ಮಾಸದೇ ಇರಲಿ.
ಕರ್ಕಾಟಕ
ಶ್ರದ್ಧೆಯಿಂದ ನೀವು ಮಾಡುತ್ತಿರುವ ಕೆಲಸಗಳಿಗೆ ನಿಮ್ಮ ಸಹಚರರು ಕೈಜೋಡಿಸದೆ ಇರಬಹುದು. ನಿಮ್ಮ ಸಂಕಷ್ಟಕ್ಕೆ ಕಾರಣವಾಗಬಹುದು. ದೂಳಿನಿಂದಾಗಿ ಶ್ವಾಸಕೋಶಕ್ಕೆ ತೊಂದರೆ ಉಂಟಾಗಬಹುದು.
ಸಿಂಹ
ಕುಟುಂಬದ ಗೌರವ ಉಳಿಸುವುದಕ್ಕಾಗಿ ನೀವು ಮಾಡುತ್ತಿರುವ ತ್ಯಾಗವು ಪ್ರಶಂಸನೀಯ. ಗೃಹ ನಿರ್ಮಾಣ ಕಾರ್ಯದ ಆಲೋಚನೆಯು ಕಾರ್ಯರೂಪಕ್ಕೆ ಬರಲಿದೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ತಾಳ್ಮೆ ವಹಿಸುವುದು ಉತ್ತಮ
ಕನ್ಯಾ
ನಿಮ್ಮ ನಿಸ್ವಾರ್ಥ ಸೇವೆಗೆ ಜನರಿಂದ ಉತ್ತಮ ಸ್ಪಂದನೆ ದೊರೆಯಲಿದೆ. ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು, ತಂದೆಯ ಮಾತಿನಂತೆಯೇ ನಡೆಯಲು ಒಪ್ಪಲಿದ್ದೀರಿ.
ತುಲಾ
ನಿಮಗೆ ಇಂದು ನಿರಂತರವಾಗಿ ಆಗುತ್ತಿರುವ ಎಡವಟ್ಟುಗಳು ಸಂಗಾತಿಯ ಮಾತುಗಳು ಮರುಕಳಿಸುವಂತೆ ಮಾಡುತ್ತದೆ. ಓಡಾಟ ತಿರುಗಾಟಗಳು ಹೆಚ್ಚಿದ ಕಾರಣ ದೇಹಾಯಾಸವು ಬಾಧಿಸುತ್ತದೆ.
ವೃಶ್ಚಿಕ
ಸಹೋದರರ ಅಥವಾ ದಾಯಾದಿಗಳ ಭಿನ್ನಾಭಿಪ್ರಾಯದಿಂದ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗಲಿದೆ. ಮಗಳ ಅನಾರೋಗ್ಯವು ಹಂತ ಹಂತವಾಗಿ ಸರಿಯಾಗಲಿದ್ದು, ಸಮಾಧಾನಕರ ಎನ್ನಿಸಲಿದೆ.
ಧನು
ಕೆಲವು ವಸ್ತುಗಳ ಸಂಪಾದನೆಗಾಗಿ ನೀವು ಶ್ರಮಿಸಿದ ರೀತಿಗೆ ಹಲವರು ಗೇಲಿ ಮಾಡಬಹುದು. ಕಳೆದು ಹೋದ ವಸ್ತು ಲಭ್ಯವಾಗಲಿದ್ದು, ಹರ್ಷವನ್ನುಂಟು ಮಾಡಲಿದೆ. ಕುಟುಂಬದ ಸಂತೋಷವು ಹರ್ಷ ತರಲಿದೆ.
ಮಕರ
ನಿಮ್ಮ ಕುಟುಂಬದ ಹಿರಿಯರ ದರ್ಶನ ಹಾಗೂ ಅವರಿಂದ ಪಡೆದ ಆಶೀರ್ವಾದದಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಲಿದೆ. ನಿಮ್ಮ ಅತಿಯಾದ ನಿರ್ಲಕ್ಷ್ಯದಿಂದ ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕುಂಭ
ಎಂಜಿನಿಯರ್‌ಗಳಿಗೆ ಹಿರಿಯ ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ಹಾಗೂ ಶುಭ ಹಾರೈಕೆ ದೊರೆಯುತ್ತದೆ. ಮಕ್ಕಳ ಸಣ್ಣ ಪುಟ್ಟ ಜಗಳಗಳನ್ನು ಬಗೆಹರಿಸಲು ಮುಂದಾಗುವಿರಿ. ಬೆಂಕಿಯಿಂದ ಜಾಗೃತೆ ವಹಿಸಿ.
ಮೀನ
ಕಟ್ಟಡ ರಚನೆಯಂತಹ ಕಾರ್ಯಗಳು ಭರದಿಂದ ಸಾಗಲಿವೆ. ಈಗಿನ ಪೈಪೋಟಿ ಜೀವನದಲ್ಲಿ ಕೇವಲ ಲಾಭವನ್ನು ಪರಿಗಣಿಸಬೇಡಿ. ವಿದ್ಯುತ್ ಉಪಕರಣಗಳಿಂದ ಅಪಾಯ ಸಾಧ್ಯತೆ ಇದ್ದು, ಎಚ್ಚರ ವಹಿಸಿ.