ದಿನ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಜುಲೈ 2024, 22:51 IST
Last Updated 12 ಜುಲೈ 2024, 22:51 IST
ಮೇಷ
ನಿಮ್ಮನ್ನು ನೀವೇ ವಿಮರ್ಶಿಕೊಳ್ಳಿ ನಿಮ್ಮ ನಡುವಳಿಕೆಯ ತಪ್ಪುಗಳು ನಿಮಗೇ ಅರಿವಾಗುವುದು. ಬರುವ ಸಂಬಂಧಿಗಳು ನಿಮ್ಮ ಆದರಾತಿಥ್ಯದಿಂದ ಸಂತುಷ್ಟರಾಗುವರು. ಖರ್ಚುವೆಚ್ಚಗಳನ್ನು ಸರಿಯಾದ ಲೆಕ್ಕಾಚಾರ ನಡೆಸಿ.
ವೃಷಭ
ತಾಂತ್ರಿಕ ವಿದ್ಯಾರ್ಥಿಗಳು ನಿಮ್ಮ ವಿನೂತನವಾದ ಯೋಜನೆಯನ್ನು ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಬಹಳ ಕಷ್ಟದಿಂದ ಸಂಪಾದನೆ ಮಾಡಿದ ಹಣವನ್ನು ಸರಿಯಾದ ವಿನಿಯೋಗಕ್ಕಾಗಿ ಬಹಳವಾಗಿ ಯೋಚಿಸುವಿರಿ.
ಮಿಥುನ
ಜೀವನದಲ್ಲಿ ಸೋಮಾರಿತನವನ್ನು ಜೊತೆಯಲ್ಲಿ ಅಹಂಕಾರವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈಹಕಿದರೂ ಸಮಸ್ಯೆ ಆಗುದಿಲ್ಲ. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ.
ಕರ್ಕಾಟಕ
ಹಿರಿಯರ ಜೀವನಾನುಭವ ಸಲಹೆಗಳನ್ನು ಕೇಳಿ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿಕೊಳ್ಳಿರಿ. ನಿಮ್ಮಲ್ಲಿರುವ ಪಾರಮಾರ್ಥಿಕತೆಯಿಂದಾಗಿ ದೇವರ ರಕ್ಷಣೆ ಸದಾಕಾಲ ದೊರೆಯುವುದು.
ಸಿಂಹ
ತಂದೆಯಾಗುವ ಸುದ್ದಿ ಕೇಳಿ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತಾಗುವುದು. ಕಾರ್ಯ ಸಾಧನೆಗೆ ಅಧಿಕ ತಿರುಗಾಟ, ಗಣ್ಯರ ಭೇಟಿ ಅನಿವಾರ್ಯವಾಗಲಿದೆ. ಮಗಳ ಮದುವೆ ಬಗ್ಗೆ ಯೋಚಿಸುವಿರಿ.
ಕನ್ಯಾ
ಒಳಗೊಳಗೆ ಅಸೂಯೆ ಪಡುವ ಸಂಬಂಧಿಗಳು ನಿಮ್ಮ ಸಾಧನೆಗೆ ಅಡ್ಡಿ ತಂದಾರು. ಯಾವುದೇ ವಿಷಯವನ್ನಾಗಲಿ ಅಧಿಕಾರಿಗಳಿಂದ ಒಂದಕ್ಕಿಂತ ಹೆಚ್ಚು ಬಾರಿ ಹೇಳಿಸಿಕೊಳ್ಳಬೇಡಿ. ವಾತಕ್ಕೆ ಔಷಧಿ ತೆಗೆದುಕೊಳ್ಳಿರಿ.
ತುಲಾ
ಪತ್ರಿಕಾ ವರದಿಗಾರರಿಗೆ ಈ ದಿನವು ಬಹಳ ವಿಶೇಷ ದಿನವಾಗಿ ಸದಾಕಾಲ ನೆನಪಿರುವಂತೆ ಆಗಬಹುದು. ಅನಾವಶ್ಯಕವಾಗಿ ಸಹೋದರರ ಜೊತೆ ವಾದಿಸಬೇಡಿ. ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ.
ವೃಶ್ಚಿಕ
ನಿಮ್ಮ ಬಗ್ಗೆ ಕಾಳಜಿ ಹೊಂದಿದವರ ಸಲಹೆಗಳಿಂದ ಅನುಕೂಲವಾಗುವುದು. ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿ, ಗೆಲುವು ನಿಮ್ಮದಾಗುವುದು. ಅಧಿಕಾರಕ್ಕಾಗಿ ಹೆಚ್ಚಿನ ಓಡಾಟ ನಡೆಸುವಿರಿ.
ಧನು
ಕರ್ತವ್ಯ ಕೊರತೆಯಿಂದಾಗಿ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ. ರಾಜಕೀಯ ಭವಿಷ್ಯದಲ್ಲಿ ಉತ್ತಮವಾದ ಅವಕಾಶ ಸಿಕ್ಕಿದರೂ, ಕಾದು ನೋಡುವ ಪ್ರವೃತ್ತಿ ಉತ್ತಮ.
ಮಕರ
ಮಕ್ಕಳು ಜೀವನದಲ್ಲಿ ಒಂದು ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ಸಂತಸ ಪಡುವಂತಾಗುವುದು. ಸಾಂಕ್ರಾಮಿಕ ರೋಗಗಳಿಂದ ಅಧ್ಯಯನ, ಅಧ್ಯಾಪನಕ್ಕೆ ತೊಂದರೆಯಾಗಬಹುದು.
ಕುಂಭ
ಇದುವರೆಗೆ ನೀವು ಮಾಡಿ ಮುಗಿಸಬೇಕೆಂದು ಆಲೋಚಿಸಿದ್ದ ಮನೆಯ ಕೆಲಸಗಳನ್ನೆಲ್ಲಾ ಈ ದಿನ ಪೂರ್ಣಗೊಳಿಸುವಿರಿ. ಹಲವಾರು ಅವಕಾಶಗಳು ನಿಮಗೆ ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ.
ಮೀನ
ಸಾಹಸಿ ಕಾರ್ಯವನ್ನು ಮಾಡುವ ಮನಸ್ಥಿತಿ ಹೊಂದಿದವರಿಗೆ ದಾಖಲೆಯನ್ನು ಸೃಷ್ಟಿಸುವ ಅವಕಾಶ ಸಿಗುವುದು. ಈ ದಿನವು ನಿಮಗೆ ವೈಯಕ್ತಿಕ ಅಭಿವೃದ್ಧಿಗೂ ಸಾಮಾಜಿಕ ಏಳಿಗೆಗೂ ಅನುಕೂಲ ಮಾಡಲಿದೆ.