ADVERTISEMENT

ದಿನ ಭವಿಷ್ಯ: ಜನವರಿ 12 ಶುಕ್ರವಾರ 2024– ಈ ರಾಶಿಯವರಿಗೆ ಉದ್ಯೋಗ ಲಭಿಸುವ ಸಾಧ್ಯತೆ

ದಿನ ಭವಿಷ್ಯ: ಜನವರಿ 12 ಶುಕ್ರವಾರ 2024.

ಪ್ರಜಾವಾಣಿ ವಿಶೇಷ
Published 11 ಜನವರಿ 2024, 18:31 IST
Last Updated 11 ಜನವರಿ 2024, 18:31 IST
<div class="paragraphs"><p>ದಿನ ಭವಿಷ್ಯ: ಜನವರಿ 12 ಶುಕ್ರವಾರ 2024</p></div>

ದಿನ ಭವಿಷ್ಯ: ಜನವರಿ 12 ಶುಕ್ರವಾರ 2024

   
ಮೇಷ
  • ಉದ್ಯೋಗಾಕಾಂಕ್ಷಿಗಳಿಗೆ ಬಯಸಿದ ಕ್ಷೇತ್ರದಲ್ಲಿ ಸದವಕಾಶ ದೊರೆ ಯಲಿದೆ. ಗೆಳೆಯನಿಂದ ಆರ್ಥಿಕ ಸಹಾಯ ನಿರೀಕ್ಷಿಸಬಹುದು. ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು.
  • ವೃಷಭ
  • ರಾಸಾಯನಿಕ ವಸ್ತುಗಳ ರಫ್ತು ವ್ಯವಹಾರ ನಡೆಸುವವರು ನಿಯಮಕ್ಕೆ ಬದ್ಧರಾಗಿರುವುದು ಉತ್ತಮ. ಮಹಿಳಾ ಉದ್ಯೋಗಿಗಳಿಗೆ ಜವಾಬ್ದಾರಿ ದೊರೆಯಲಿದೆ. ನಯ, ವಿನಯ, ಶಿಷ್ಟಾಚಾರಗಳನ್ನು ಕಾಪಾಡಿಕೊಳ್ಳಿ.
  • ಮಿಥುನ
  • ಪ್ರಮುಖ ಗುರಿ ಸಾಧನೆಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೇಡಿಕೆ ಸಿಗುವುದು. ಹೊಂದಾಣಿಕೆಯ ಮನೋಭಾವ ಕಡಿಮೆಯಾಗುವುದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಜಾಗ್ರತೆ ವಹಿಸಿ.
  • ಕರ್ಕಾಟಕ
  • ಯಾವುದೇ ಅನುಮಾನಗಳಿಲ್ಲದೇ ಏಕಮುಖವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಅಸಾಧ್ಯವಾಗುವುದು. ಮಕ್ಕಳ ಅಥವಾ ಸಾಕುಪ್ರಾಣಿಗಳ ಆರೋಗ್ಯ ವ್ಯತ್ಯಾಸದಿಂದ ಭಯ ಉಂಟಾಗಲಿದೆ.
  • ಸಿಂಹ
  • ವೃತ್ತಿಯಲ್ಲಿ ಅಧಿಕಾರಿಗಳು ಕಾರ್ಯಸಾಧನೆ ಗುರುತಿಸಿ ಹೆಚ್ಚಿನ ಸೌಲಭ್ಯ ಒದಗಿಸಿ ಕೊಡುವರು. ಕೈ ಹಾಕಿದ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ನೆರವೇರುವುದು. ವಾಹನ ಖರೀದಿಯ ಬಗ್ಗೆ ಚಿಂತನೆ ಬರಲಿದೆ.
  • ಕನ್ಯಾ
  • ವೃತ್ತಿಯಲ್ಲಿ ಮೇಲಧಿಕಾರಿಗಳಿಗೂ ನಿಮಗೂ ಹೊಂದಾಣಿಕೆ ಮೂಡುವುದು ಕಷ್ಟವೆನಿಸಲಿದೆ. ದೂರದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದು ಉತ್ತಮ. ಹಸಿರು ಬಣ್ಣ ಅದೃಷ್ಟ ತರುವುದು.
  • ತುಲಾ
  • ಜನ ಸಂಪರ್ಕ ಬೆಳೆಸಿಕೊಳ್ಳುವುದನ್ನು ಅಭ್ಯಸಿಸಿಕೊಳ್ಳುವುದು ಉತ್ತಮ. ಮನೆ ಕಟ್ಟಡದ ಕೆಲಸಗಳು ಮುಕ್ತಾಯದ ಹಂತಕ್ಕೆ ತಲುಪುವುದು. ಯಾವುದೇ ಅನಿವಾರ್ಯಗಳಿದ್ದರೂ ದೂರದ ಪ್ರಯಾಣ ಸರಿಯಲ್ಲ.
  • ವೃಶ್ಚಿಕ
  • ಅನಿಸಿಕೆಗಳನ್ನು ಉತ್ತಮ ರೀತಿಯಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದು ಕಷ್ಟವೆನಿಸುತ್ತದೆ. ವಕೀಲರು ಕೋರ್ಟು ಕೆಲಸಗಳಲ್ಲಿ ಅಧಿಕ ವರಮಾನ ಗಳಿಸುವರು. ಕೋರ್ಟು ವ್ಯವಹಾರಗಳು ಮುಂದುವರಿಯುವುದು.
  • ಧನು
  • ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಿಂದ ವಿಚಾರ ತಿಳಿದುಕೊಳ್ಳುವುದು ಉತ್ತಮ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಲಭಿಸುವಂಥ ಸಾಧ್ಯತೆ ಇದೆ.
  • ಮಕರ
  • ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ಈ ದಿನ ನಿಮ್ಮ ನೆರವಿಗೆ ನಿಲ್ಲುವರು. ಟ್ರಾವೆಲ್ ಏಜೆಂಟ್‌ಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತದೆ. ಅಧ್ಯಾಪಕ ವರ್ಗದವರಿಗೆ ಹೆಚ್ಚಿನ ಕೆಲಸ ಇರುವುದು.
  • ಕುಂಭ
  • ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅಧಿಕ ಕಮಿಷನ್ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸವು ಉತ್ತಮವಾಗಿ ನಡೆದು ಸಂತೋಷ ಉಂಟಾಗಲಿದೆ. ಸರ್ಕಾರಿ ಕೆಲಸಗಳು ಈ ದಿನ ಸುಲಭವಾಗಿ ಆಗಲಿದೆ.
  • ಮೀನ
  • ನಿರ್ಧಾರಗಳಿಗೆ ಪಾಲುದಾರರಿಂದ ಉತ್ತೇಜನಕಾರಿ ಪ್ರತಿಕ್ರಿಯೆ ದೊರೆಯುವುದು. ಮನೆಯಲ್ಲಿ ಮತ್ತು ಕುಟುಂಬ ಸದಸ್ಯರಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ವಾಣಿಜ್ಯ ವ್ಯಾಪಾರಗಳಿಂದ ಅಧಿಕ ಲಾಭ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.