ADVERTISEMENT

ದಿನ ಭವಿಷ್ಯ: ಉತ್ತಮ ಅವಕಾಶಗಳು ಎದುರಾಗಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಫೆಬ್ರುವರಿ 2026, 18:30 IST
Last Updated 13 ಫೆಬ್ರುವರಿ 2026, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೌಟುಂಬಿಕವಾಗಿ ಜವಾಬ್ದಾರಿಗಳನ್ನು ಕಡಿಮೆ ಮಾಡುವ ಬಗ್ಗೆ ಗಮನಹರಿಸಿ. ಸಿನಿಮಾ ನಟ ನಟಿಯರಿಗೆ ಅವಕಾಶದ ಶುಭ ಸುದ್ದಿ ಸಿಗುವುದು. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ.
  • ವೃಷಭ
  • ಮೊಬೈಲ್ ಫೋನ್‌ಗಳ ಅಥವಾ ಕಂಪ್ಯೂಟರ್‌ಗಳ ಮಾರಾಟಗಾರರಿಗೆ ಅಥವಾ ರಿಪೇರಿ ಮಾಡುವವರಿಗೆ ಆದಾಯ ಕಂಡುಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆಯುವಿರಿ.
  • ಮಿಥುನ
  • ದಾಖಲೆ ಪರಿಶೀಲನೆ ತೀರ್ಮಾನದಿಂದ ನಿಸ್ಸಂಶಯವಾಗಿ ಮನೋವ್ಯಾಧಿ ದೂರಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಅನಿವಾರ್ಯ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
  • ಕರ್ಕಾಟಕ
  • ಸ್ವಂತ ಉದ್ಯೋಗದವರು ಅಧಿಕ ಬಂಡವಾಳ ಹಾಕುವುದರಿಂದ ಕೈ ಸುಡುವಂತಾಗುವುದು. ಸಣ್ಣ ಪುಟ್ಟ ವಿಚಾರಗಳನ್ನೂ ಉಪೇಕ್ಷಿಸದೆ ಮಾತನಾಡುವಿರಿ. ಸಂಶೋಧಕರು ಹೆಮ್ಮೆ ಪಡೆಯುವಿರಿ.
  • ಸಿಂಹ
  • ಕೌಟುಂಬಿಕವಾಗಿ ಸಹೋದರನ ಏಳಿಗೆ ಸಹಿಸುವ ಮನೋಭಿಲಾಷೆ ಯನ್ನು ಬೆಳೆಸಿಕೊಳ್ಳಿರಿ. ಜ್ಞಾನಾರ್ಜನೆಯಾಗುವುದು. ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸ ಬೇಕಾಗಬಹುದು.
  • ಕನ್ಯಾ
  • ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸ್ನೇಹಿತರಲ್ಲಿ ವ್ಯವಹರಿಸಿ. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಮಾರಾಟ, ಲಾಭವಾಗುವುದು.
  • ತುಲಾ
  • ಸಂಸ್ಥೆಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದುರಾದಲ್ಲಿ ಸದುಪಯೋಗ ಪಡಿಸಿಕೊಳ್ಳಿ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿ.
  • ವೃಶ್ಚಿಕ
  • ಮಕ್ಕಳು ಜೀವನದಲ್ಲಿ ಒಂದು ಉತ್ತಮ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ನೆಮ್ಮದಿ ಹಾಗೂ ಸಂತಸ ಪಡುವಂತಾಗುವುದು. ಉತ್ತಮ ಅವಕಾಶಗಳು ಎದುರಾಗಲಿವೆ.
  • ಧನು
  • ಕಾರ್ಖಾನೆಯೊಂದನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ನಂಬಿಕಸ್ಥ ಸ್ನೇಹಿತನ ಸಹಾಯದಿಂದ ನಡೆಸಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ಪೈಪೋಟಿ ಎದುರಾಗಲಿದೆ.
  • ಮಕರ
  • ಮನಸ್ಸಿನ ದುಗುಡಗಳು ಕಡಿಮೆಯಾಗಿ ಸಹಾಯ ಮಾಡಿದ ಸ್ನೇಹಿತರ ಪಾತ್ರವೇ ಜೀವನದಲ್ಲಿ ಮುಖ್ಯ ಎನಿಸಲಿದೆ. ಬೆಳ್ಳಿ ವಸ್ತುಗಳ ಮಾರಾಟ ಮಾಡುವವರು ಆದಾಯವನ್ನು ಗಳಿಸುವಿರಿ.
  • ಕುಂಭ
  • ಜವಾಬ್ದಾರಿಯುತ ಊರಿನ ಸಾರ್ವಜನಿಕ ಕಾರ್ಯಗಳು ಮುಂದಾಳ ತ್ವದಲ್ಲಿ ನಡೆಯಲಿದೆ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾಗಿದೆ.
  • ಮೀನ
  • ಆಲೋಚನೆಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಗದೇ ಇರಬಹುದು. ಆಹಾರದಲ್ಲಿ ಎಣ್ಣೆಯ ಪದಾರ್ಥ ಮತ್ತು ಖಾರದ ಪದಾರ್ಥಗಳನ್ನು ಕಡಿಮೆ ಮಾಡಿ. ಗ್ಲಾಸ್ ಗಳಿಂದ ಗಾಯ ಆಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.