ADVERTISEMENT

ದಿನ ಭವಿಷ್ಯ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ ಮೂಡಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಮೇ 2025, 18:30 IST
Last Updated 13 ಮೇ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಂಚನೆಯ ಕಡೆಗೆ ಕರೆದೊಯ್ಯುವ ಪ್ರಯತ್ನ ಸ್ನೇಹಿತರ ಬಳಗದಲ್ಲಿ ನಡೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯವಹಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ.
  • ವೃಷಭ
  • ಜೀವನದ ಬಗ್ಗೆ ನಿರುತ್ಸಾಹ ತಾಳದಿರಿ. ಲೇವಾದೇವಿ ವ್ಯವಹಾರದಲ್ಲಿ ಭಾಗಶಃ ಅನುಕೂಲವಿದೆ. ರೈತರು ಪ್ರಾಯೋಗಿಕವಾಗಿ ಬೆಳೆದ ಬೆಳೆಯಿಂದ ಸಂತೋಷವನ್ನು ಹೊಂದುವರು.
  • ಮಿಥುನ
  • ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟದಿಂದ ನೆಮ್ಮದಿ ಕಾಣಬಹುದು. ಮಕ್ಕಳ ಅಗತ್ಯಗಳನ್ನು ಪೂರೈಸಿ. ನೂತನ ವಾಹನ ಖರೀದಿಯ ಆಲೋಚನೆ ಮುಂದೂಡುವುದು ಉತ್ತಮ.
  • ಕರ್ಕಾಟಕ
  • ಬಹಳ ದಿನದ ಹುಡುಕಾಟದ ನಂತರ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಪ್ರಾಪ್ತಿಯಾಗಿ ಮನೆಯಲ್ಲಿ ಸಂತಸ ಮೂಡಲಿದೆ. ರಾಜಕೀಯ ರಂಗದಲ್ಲಿ ಸೇವಾಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ದೊರೆಯಲಿದೆ.
  • ಸಿಂಹ
  • ಪ್ರಯತ್ನ ಪಟ್ಟ ಕೆಲಸಗಳು ಫಲ ನೀಡಲಿವೆ. ಧಾರ್ಮಿಕ ವ್ಯಕ್ತಿಯ ಸ್ನೇಹ ಸಂಬಂಧ ಅಥವಾ ಧಾರ್ಮಿಕ ಉಪನ್ಯಾಸಗಳಿಂದ ಜೀವನ ಶೈಲಿ ಬದಲಾಗಲಿದೆ. ಮನೆಯವರ ಆರೋಗ್ಯ ಸುಧಾರಣೆಯಾಗುತ್ತದೆ.
  • ಕನ್ಯಾ
  • ಕೌಟುಂಬಿಕ ಸುಖದೊಂದಿಗೆ ಸರ್ವತೋಮುಖ ಅಭಿವೃದ್ಧಿ ಪಡೆಯುವಿರಿ. ಹೊಸ ಕೆಲಸಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಮೆಕಾನಿಕಲ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಅಗತ್ಯ. ಶ್ರೀವಿಷ್ಣು ಸಹಸ್ರನಾಮ ಪಠಿಸಿರಿ.
  • ತುಲಾ
  • ಮಕ್ಕಳ ಮಾನಸಿಕ ಬೆಳವಣಿಗೆಯ ಬಗ್ಗೆ ಪೋಷಕರು ಗಮನವಹಿಸಿ. ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಇಂದು ಸೂಕ್ತ ಕಾಲ. ಖಾದಿ ಉದ್ಯಮದವರು ಸರ್ಕಾರದಿಂದ ಸಹಾಯ ಅಪೇಕ್ಷಿಸಬಹುದು.
  • ವೃಶ್ಚಿಕ
  • ಕೋರ್ಟು ವ್ಯವಹಾರಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ಬಗ್ಗೆ ಪ್ರಯತ್ನವಿರಲಿ. ಒಬ್ಬೊಬ್ಬರ ಮುಂದೆ ಒಂದೊಂದು ರೀತಿಯಲ್ಲಿ ಮುಖಸ್ತುತಿ ಮಾಡುವ ಬದಲು ಸತ್ಯವನ್ನಾಡುವ ತೀರ್ಮಾನ ಮಾಡಿ.
  • ಧನು
  • ಕಾರ್ಮಿಕ ವರ್ಗದವರಲ್ಲಿ ಜನ ಸಂಪತ್ತಿನ ಕೊರತೆಯ ಕಾರಣದಿಂದಾಗಿ ಅಧಿಕ ಶ್ರಮ ಉಂಟಾಗುವುದು. ಪುಸ್ತಕ ಪ್ರಕಾಶಕರಿಗೆ ಏಕಾಗ್ರತೆ ಕೊರತೆಯಿಂದಾಗಿ ಹಲವು ಅಡಚಣೆಗಳು ಎದುರಾಗಲಿವೆ.
  • ಮಕರ
  • ಸಂಶೋಧನಾ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮುನ್ನಡೆ ಸಾಧಿಸುವರು. ಕೃಷಿ ಕೆಲಸಗಳಿಗೆ ಸಹೋದರರಿಂದ, ಮಕ್ಕಳಿಂದ ಆರ್ಥಿಕ ಸಹಾಯ ಪಡೆಯುವ ಬದಲು ಸಂಘ ಸಂಸ್ಥೆಯಲ್ಲಿ ಸಾಲ ತೆಗೆದುಕೊಳ್ಳುವುದು ಉತ್ತಮ.
  • ಕುಂಭ
  • ಕ್ರೀಡೆಯಲ್ಲಿ ಅಥವಾ ಮನರಂಜನೆಯ ಕಾರ್ಯಕ್ರಮದಲ್ಲಿ ಸಮಯ ಕಳೆಯುವಿರಿ. ಹಿರಿಯರ ಇಚ್ಛೆಯಂತೆ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಂತೋಷಕ್ಕೆ ಕಾರಣವಾಗುತ್ತದೆ.
  • ಮೀನ
  • ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ ಮೂಡಲಿದೆ. ರಾಜಕೀಯ ವಿಷಯಗಳಿಗಾಗಿ ದಿಢೀರ್ ಪ್ರಯಾಣದ ಸಂಭವವಿದೆ. ಈ ದಿನದ ನಿಮ್ಮ ಜೀವನ ಶೈಲಿಯ ಬದಲಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.