ADVERTISEMENT

ದಿನ ಭವಿಷ್ಯ | ಈ ರಾಶಿಯವರಿಗೆ ಉದ್ಯೋಗ ವಿಷಯದ ಚಿಂತೆ ದೂರಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಡಿಸೆಂಬರ್ 2025, 22:24 IST
Last Updated 13 ಡಿಸೆಂಬರ್ 2025, 22:24 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಧನಾಗಮನದಲ್ಲಿ ವಿಳಂಬ ತೋರಿಬರಲಿದೆ. ಸಂಘ ಸಂಸ್ಥೆಗಳ ಹುದ್ದೆಯನ್ನು ಅಲಂಕರಿಸುವ ಅವಕಾಶ ಎದುರಾಗಲಿದೆ. ಸಣ್ಣ ಪ್ರಮಾಣದಲ್ಲಿ ನಿಮ್ಮ ವಾಹನಕ್ಕೆ ಅವಘಡಗಳಾಗುವ ಸಾಧ್ಯತೆ ಇದೆ.
  • ವೃಷಭ
  • ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ಸಿಗುತ್ತದೆ. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಉಂಟಾಗುವುದು. ನಟ ನಟಿಯರಿಗೆ ವಿಪುಲ ಅವಕಾಶಗಳು ದೊರೆಯಲಿವೆ.
  • ಮಿಥುನ
  • ಸಿದ್ಧ ಉಡುಪುಗಳ ರಫ್ತು ವ್ಯಾಪಾರಗಳನ್ನು ನಡೆಸುವವರು ಲಾಭ ಹೊಂದುವಿರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿನ ಪ್ರಸಿದ್ಧಿಗಾಗಿ ಹೆಚ್ಚಿನ ತರಬೇತಿಯನ್ನು ಪಡೆಯಲು ಬೇಕಾದ ಮಾರ್ಗ ಹುಡುಕಿ, ಅಳವಡಿಸಿಕೊಳ್ಳುವುದು ಉತ್ತಮ.
  • ಕರ್ಕಾಟಕ
  • ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭ ಪಡೆಯಬಹುದು. ಮನೆ ಜಾಗದ, ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಪರಿಸ್ಥಿತಿ ಬರುವುದು.
  • ಸಿಂಹ
  • ಕಾರಣಾಂತರದಿಂದ ಸಿಕ್ಕಂತಹ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಜಾಣತನಕ್ಕೆ ಬಿಟ್ಟಿರುವ ವಿಚಾರ. ಅಪರಿಚಿತರ ಹತ್ತಿರ ನಿಮ್ಮ ಯಾವುದೇ ಗೌಪ್ಯತೆಯನ್ನು ಹಂಚಿಕೊಳ್ಳಬೇಡಿ.
  • ಕನ್ಯಾ
  • ಲೇವಾದೇವಿ ವ್ಯವಹಾರ ನೆಡೆಸುವವರು ವ್ಯವಹಾರದಲ್ಲಿ ಸ್ವಲ್ಪ ಪ್ರಮಾಣದ ನಷ್ಟ ಸಂಭವಿಸಿ ಹಿನ್ನಡೆಯನ್ನು ಕಾಣುವಂತಾಗಲಿದೆ. ರಾಜಕೀಯವಾಗಿ ಪ್ರಬಲಗೊಳ್ಳುವ ಅವಕಾಶಗಳು ಈ ದಿನದಂದು ಹೆಚ್ಚಲಿದೆ.
  • ತುಲಾ
  • ನಿಮ್ಮ ಏಕಾಗ್ರತೆಯ ಕೊರತೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ಉಂಟಾಗುತ್ತವೆ, ಅದರಿಂದಾಗಿ ನಷ್ಟ ಅನುಭವಿಸುವಿರಿ. ಆತ್ಮೀಯನಿಗೆ ಸಾಂತ್ವನ ಹೇಳ ಬೇಕಾಗಬಹುದು. ಉದ್ಯೋಗದ ವಿಷಯದ ಚಿಂತೆ ದೂರಾಗುವುದು.
  • ವೃಶ್ಚಿಕ
  • ಹಿರಿಯರು ನಿಮ್ಮ ಗಹನವಾದ ಸಮಸ್ಯೆಗಳಿಗೆ ತಕ್ಷಣ ಸುಲಭವಾದ ಪರಿಹಾರಗಳನ್ನು ತಿಳಿಸಿ ಕೊಡುವರು. ಸಹೋದರರಿಂದ ಬರಬೇಕಿದ್ದ ಹಣ ಹಿಂತಿರುಗಿ ಬರುವುದು. ಸೌಂದರ್ಯ ವಿನ್ಯಾಸಕರಿಗೆ ಇದು ಉತ್ತಮ ದಿನ.
  • ಧನು
  • ಕೆಲಸದ ಒತ್ತಡದಿಂದ ದೇಹಾಯಾಸ ತೋರಿಬಂದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮಲ್ಲಿರುವ ಅಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ಮನೆಯ ದಿನ ನಿತ್ಯದ ಖರ್ಚಿನಲ್ಲಿ ಹಿಡಿತವಿರಲಿ.
  • ಮಕರ
  • ಭೋಜನ ನಿಮಿತ್ತ ಮಾಡುವ ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ ಅದರಲ್ಲಿಯೆ ನಿಮಗೆ ಹೆಚ್ಚಿನ ಲಾಭ. ಬೆಂಕಿ ಅನಾಹುತ ಸಂಭವಿಸಬಹುದು, ಜಾಗೃತರಾಗಿರಿ. ಸಾಮಾಜಿಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ.
  • ಕುಂಭ
  • ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ನಿಮ್ಮ ಕಲ್ಪನೆಗಿಂತ ಅಧಿಕ ಕಮಿಶನ್ ದೊರೆಯಲಿದೆ. ಹೊಸ ಮನೆಯ ನಿರ್ಮಾಣ ಕಾರ್ಯಗಳು ಚುರುಕುಗತಿಯಲ್ಲಿ ಸಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧ್ಯ.
  • ಮೀನ
  • ಸಣ್ಣ ಪುಟ್ಟ ವಿಚಾರವಾಗಿ ಅತ್ತೆ ಸೊಸೆಯ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವಾಹನ ರಿಪೇರಿಗಾಗಿ ಖರ್ಚು ಮಾಡಬೇಕಾಗುವುದು. ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.