ADVERTISEMENT

ದಿನ ಭವಿಷ್ಯ | ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಜುಲೈ 2025, 18:30 IST
Last Updated 14 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪರಂಪರೆಯಲ್ಲಿ ಬಂದಿರುವ ಆಸ್ತಿಯನ್ನು ಮಾರಾಟ ಮಾಡುವ ಯೋಚನೆಗಳಿದ್ದಲ್ಲಿ ಅದನ್ನು ಕೈ ಬಿಡುವುದು ಸೂಕ್ತ. ದುರದೃಷ್ಟವಶಾತ್ ಆರಂಭವಾಗಿದ್ದ ಹೊಸ ಕೆಲಸವು ನಿಲ್ಲುವಂಥ ಸೂಚನೆಗಳು ಕಾಣಬಹುದು.
  • ವೃಷಭ
  • ವೃದ್ಧರು ಹಾಗೂ ಅಶಕ್ತರನ್ನು ಗೌರವದಿಂದ ಕಾಣುವ ಸ್ವಭಾವವು ಇತರರನ್ನು ಆಕರ್ಷಿಸುತ್ತದೆ. ಮಾಡುವ ಕೆಲಸವು ಉತ್ತಮವಾಗಿ, ಸರಾಗವಾಗಿ, ಲಾಭದಾಯಕವಾಗಿ ಮುಗಿಯುತ್ತದೆ.
  • ಮಿಥುನ
  • ಹೊಸ ವ್ಯಕ್ತಿಯೊಂದಿಗೆ ವ್ಯವಹಾರ ಮಾತುಕತೆ ನಡೆಸುವುದು ಸರಿಯಲ್ಲ. ಸಹೋದ್ಯೋಗಿಗಳಿಗೆ ಕಿರಿಕಿರಿ ಉಂಟಾಗಬಹುದು. ಮಕ್ಕಳ ಅಭಿವೃದ್ಧಿ ವಿಚಾರವಾಗಿ ಶುಭಸುದ್ದಿಯನ್ನು ಕೇಳುವಿರಿ.
  • ಕರ್ಕಾಟಕ
  • ಉತ್ತಮ ಪ್ರಯತ್ನದಿಂದಾಗಿ ಬಯಸಿದ ಕಡೆ ಕೆಲಸ ಸಿಗುವ ಸಾಧ್ಯತೆ ಇದೆ. ಹೊಸ ವೃತ್ತಿ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವವರಿಗೆ ಮಾರ್ಗದರ್ಶನ ನೀಡಿ ಸಮಾಧಾನವಾಗುತ್ತದೆ.
  • ಸಿಂಹ
  • ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ವ್ಯಕ್ತಿಯನ್ನು ಆರಿಸಿಕೊಳ್ಳಲು ಗಡಿಬಿಡಿ ಬೇಡ, ಸರಿಯಾಗಿ ವಿಚಾರಿಸಿ ತೀರ್ಮಾನಿಸಿ. ವಾಸಕ್ಕೆ ಯೋಗ್ಯವಾದ ಭೂ ಖರೀದಿಯ ಯೋಗವಿದೆ.
  • ಕನ್ಯಾ
  • ಎಲ್ಲರ ಜೊತೆಯಲ್ಲೂ ಬೆರೆಯುವುದರಿಂದ ಹೆಚ್ಚಿನ ಕಾರ್ಯಗಳಲ್ಲಿ ಅನುಕೂಲ ಇರುವುದು. ಸಂಶೋಧನೆ ನಡೆಸುವವರು ಒಂದು ವಿಚಾರವಾಗಿ ಆಳವಾದ ಜ್ಞಾನವನ್ನು ಸಂಪಾದಿಸಿಕೊಳ್ಳಲು ಪ್ರಯತ್ನಿಸಿ.
  • ತುಲಾ
  • ವ್ಯವಹಾರದಲ್ಲಿ ಎಲ್ಲವೂ ಸಕಾರಾತ್ಮಕವಾಗಿ ಇರುವುದರಿಂದ ನೆಮ್ಮದಿಯ ದಿನ. ಸಾಗರ, ಜಲಾಶಯ, ಜಲಪಾತ ಸಮೀಪದ ಪ್ರವಾಸಗಳನ್ನು ನಿಶ್ಚಯಿಸಿದ್ದರೆ ತಾತ್ಕಾಲಿಕವಾಗಿ ಅದನ್ನು ಮುಂದೂಡಿ.
  • ವೃಶ್ಚಿಕ
  • ಚರ್ಮ ಸಂಬಂಧಿ ಕಾಯಿಲೆಗಳನ್ನು ಪರಿಹರಿಸಿಕೊಳ್ಳಲು ಹೊಸ ಔಷಧಿಗಳ ಪ್ರಯೋಗ ಬೇಡ. ಸಾಂಸಾರಿಕ ವಿಷಯದಲ್ಲಿ ಗುರು-ಹಿರಿಯರ ಮಾತು ಮೀರದಿರುವುದು ಲೇಸು. ವಿಫುಲ ಅವಕಾಶಗಳು ದೊರೆಯಲಿವೆ.
  • ಧನು
  • ಕೆಲಸದ ಫಲಿತಾಂಶವು ಸರಿಯಾಗಿದ್ದರೂ ವಿಧಾನವನ್ನು ಬದಲಿಕೊಳ್ಳಬೇಕೆಂಬ ಅನಿವಾರ್ಯತೆ ಕಾಡುವುದು. ಗುಣಮಟ್ಟದ ಹಣ್ಣು ಮಾರಾಟಗಾರರಿಗೆ ಉತ್ತಮ ವ್ಯಾಪಾರ ಹಾಗೂ ಲಾಭ ಇರುವುದು.
  • ಮಕರ
  • ಸಣ್ಣ ಕೈಗಾರಿಕೆಯನ್ನು ನಡೆಸುತ್ತಿರುವವರು ನೂತನ ಘಟಕಗಳನ್ನು ಆರಂಭಿಸುವ ಬಗ್ಗೆ ಯೋಚಿಸಬಹುದು. ಪ್ರವೃತ್ತಿಯ ಕಾರ್ಯಗಳಿಂದ ವೃತ್ತಿಯ ಕಾರ್ಯದ ವೇಗ, ಗುಣಮಟ್ಟ ಕಡಿಮೆಯಾಗುವ ಸಾಧ್ಯತೆಯಿದೆ.
  • ಕುಂಭ
  • ಹೊಸದೊಂದು ಆದಾಯದ ದಾರಿ ಸಿಗಲಿದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವ ವಾಕ್ಯದಂತೆ ಹೆದರದೆ ಒಪ್ಪಿಕೊಳ್ಳಿ. ಕೆಲಸವನ್ನು ಶ್ರದ್ಧೆಯಿಂದ, ಸಮಯಕ್ಕೆ ಸರಿಯಾಗಿ ಮಾಡಿದರೆ ಜಯವಾಗುವುದು.
  • ಮೀನ
  • ಕಾರ್ಯ ನಿಮಿತ್ತವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿ ಬಂದರೂ ತಾಳ್ಮೆ, ಸಮಾಧಾನ ಇರಲಿ. ಮಕ್ಕಳ ವರ್ತನೆಯು ಆತಂಕವನ್ನು ತರಲಿದೆ. ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.