ADVERTISEMENT

ದಿನ ಭವಿಷ್ಯ: ಸ್ವತಂತ್ರವಾಗಿ ವ್ಯವಹಾರ ಮಾಡುವವರಿಗೆ ಉತ್ತಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಮೇ 2025, 18:30 IST
Last Updated 15 ಮೇ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇತರರ ಭಾವನೆಗಳಿಗೆ ಬೆಲೆ ಕೊಡುವುದು ಮತ್ತು ಸಹನೆಯಿಂದ ಕೇಳುವುದನ್ನು ರೂಢಿಸಿಕೊಳ್ಳುವಿರಿ. ಕಂದಾಯ ಇಲಾಖೆಯವರಿಗೆ ಬಿಡುವಿಲ್ಲದ ಕೆಲಸಗಳು ಇರಲಿವೆ. ಅಭಿರುಚಿಗೆ ತಕ್ಕ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳಿರಿ.
  • ವೃಷಭ
  • ಕಲೆ, ಸಾಹಿತ್ಯವನ್ನು ಪ್ರವೃತ್ತಿಯಾಗಿ ಹೊಂದಿದವರಿಗೆ ಹಿನ್ನಡೆ ತೋರಿ ಬಂದರೂ ಸ್ಥಾನ-ಮಾನ, ಗೌರವಕ್ಕೆ ಚ್ಯುತಿ ಬರುವುದಿಲ್ಲ. ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ಇರಲಿದೆ. ಧರ್ಮ-ಕರ್ಮದಂತಹ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು.
  • ಮಿಥುನ
  • ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು. ಕೆಂಪು ಬಣ್ಣವು ಜಯ ತರಲಿದೆ. ಶುಭ ಕಾರ್ಯಗಳಿಗೆ ಅಡ್ಡಿ ಬಾರದಂತೆ ದೇವರ ಸೇವೆ ಮಾಡುವುದು ಉತ್ತಮ.
  • ಕರ್ಕಾಟಕ
  • ನೀವೇ ಮಿಶ್ರ ಮಾಡಿದ ಸುಣ್ಣದ ನೀರನ್ನು ನೀವೇ ಹಾಲೆಂದು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಿಮ್ಮದಾಗಿರುತ್ತದೆ. ಕೆಲಸ ಕಾರ್ಯಗಳಿಗೆ ಅಧಿಕಾರಿ ವರ್ಗಗಳ ವಿರೋಧ ವ್ಯಕ್ತವಾಗಲಿದೆ.
  • ಸಿಂಹ
  • ಕೌಟುಂಬಿಕ ವಿಚಾರಗಳ ಹೊಸ ಚಿಂತನೆಗೆ ಪೂರಕ ವಾತಾವರಣ ಮೂಡುತ್ತದೆ. ತಾಂತ್ರಿಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಅಧಿಕ ಪರಿಶ್ರಮ ಹಾಕಿದ್ದರೂ ಅದೃಷ್ಟವು ಕೈ ಕೊಡಲಿದೆ. ಅನಾರೋಗ್ಯವನ್ನು ನಿರ್ಲಕ್ಷಿಸಬೇಡಿ.
  • ಕನ್ಯಾ
  • ಬ್ಯಾಂಕ್ ಉದ್ಯೋಗಿಗಳಿಗೆ ಶುಭಸುದ್ದಿ ಕೇಳಿಬರಲಿದೆ. ಆಫೀಸಿನ ಕೆಲಸ ದಲ್ಲಿ ಅಧಿಕಾರಿಗಳ ಮಾತನ್ನು ತಾಳ್ಮೆಯಿಂದ ಕೇಳಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ವನಸ್ಪತಿ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
  • ತುಲಾ
  • ಅಭಿಪ್ರಾಯಗಳಿಗೆ ಮನ್ನಣೆ ಇದೆ ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ಹಿತವಚನಗಳನ್ನು ಹೇಳಲು ಮುಂದುವರಿಯುವುದು ಉತ್ತಮ. ಸ್ವತಂತ್ರವಾಗಿ ವ್ಯವಹಾರ ಮಾಡುವವರಿಗೆ ಉತ್ತಮ.
  • ವೃಶ್ಚಿಕ
  • ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು. ಸ್ನೇಹಿತರೊಂದಿಗೆ ಅಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ. ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ.
  • ಧನು
  • ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗಲಿವೆ. ಸಮೀಪವರ್ತಿಗಳ ಸಹಾಯದಿಂದ ಬಾಕಿ ಇದ್ದ ಕೆಲಸ ಪೂರ್ತಿ ಗೊಳಿಸುವಿರಿ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ಮಾತಾಡಿ.
  • ಮಕರ
  • ಮಕ್ಕಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಲು ಸಂಘ ಸಂಸ್ಥೆಗಳು ನೆರವಾಗುವುದು. ವಾಹನ ಕೊಡು ಕೊಳ್ಳುವಿಕೆಯಲ್ಲಿ ಲೆಕ್ಕ ಪತ್ರಗಳಲ್ಲಿ ಗಮನ ಇರಲಿ. ಮನೆ ಕೊಳ್ಳುವ ಯೋಗ ಅಥವಾ ಭೂಮಿ ಖರೀದಿಯ ಯೋಗವಿದೆ.
  • ಕುಂಭ
  • ಮಧ್ಯಾಹ್ನದ ಸಮಯದವರೆಗೆ ಕೆಲಸಗಳು ಕುಂಠಿತವಾಗಿ ಸಾಗಿದರೂ ಉತ್ತರಾರ್ಧದ ವೇಳೆಗೆ ಸಮರ್ಪಕವಾಗಿ ಮಾಡಿ ಮುಗಿಸಿದ ತೃಪ್ತಿ ನಿಮ್ಮಲ್ಲಿ ಉಂಟಾಗಲಿದೆ. ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡುವ ಅವಕಾಶವಿದೆ.
  • ಮೀನ
  • ವಾಸ್ತು, ಶಿಲ್ಪಕೆತ್ತನೆಯ ಕೆಲಸಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಅನುಕೂಲ ಇರಲಿದೆ. ವೃತ್ತಿಯನ್ನು ಅಭಿವೃದ್ಧಿ ಮಾಡುವ ಸಂಕಲ್ಪದಿಂದ ಬಂಡವಾಳ ಹಾಕಿದರೆ ದೇವತಾನುಗ್ರಹದಿಂದ ಅಭಿವೃದ್ಧಿಯಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.