ದಿನ ಭವಿಷ್ಯ: ಈ ರಾಶಿಯವರಿಗೆ ಸದ್ಯಕ್ಕೆ ವೃತ್ತಿ ಬದಲಾವಣೆಯ ಯೋಚನೆ ಸರಿಯಲ್ಲ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಜುಲೈ 2024, 21:22 IST
Last Updated 16 ಜುಲೈ 2024, 21:22 IST
ಮೇಷ
ಮಿತ್ರನ ಮನೆಯ ಸಮಾರಂಭದಲ್ಲಿ ಭಾಗವಹಿಸುವುದರಿಂದ ಹಳೇಯ ಮಿತ್ರರನ್ನು ಭೇಟಿಯಾದ ಸಂಭ್ರಮ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳಿಗೆ ಇಂದು ಸಾಧನೆಗೆ ಪೂರಕ
ವೃಷಭ
ಆಫೀಸಿನಲ್ಲಿ ಮೇಲಧಿಕಾರಿಗಳ ಒತ್ತಡದಿಂದ ಕೆಲಸದಲ್ಲಿ ಆಯಾಸವೆನಿಸುವುದಾದರು ಅಧಿಕಾರಿಗಳ ಮನ ಗೆಲ್ಲುವಂತಾಗುತ್ತದೆ. ಮಾಂಗಲ್ಯ ಯೋಗ ತೋರಿ ಬಂದರೂ ನಿಮ್ಮ ನಿಶ್ಚಿತ ನಿರ್ಧಾರವೇ ಮುಖ್ಯವೆನಿಸಲಿದೆ.
ಮಿಥುನ
ಈ ದಿನ ನಿಮಗೆ ಎದುರಾಗುವ ಪರಿಸ್ಥಿತಿಗೆ ನೀವೇ ಹೊಂದುಕೊಳ್ಳುವ ತೀರ್ಮಾನವನ್ನು ಮಾಡಿರಿ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರುವುದು ಒಳ್ಳೆಯದು. ನಿಮ್ಮ ಅಧಿಕಾರವನ್ನು ಎಲ್ಲೆಂದರೆ ಅಲ್ಲಿ ಚಲಾಯಿಸಬೇಡಿ.
ಕರ್ಕಾಟಕ
ಆರ್ಥಿಕವಾಗಿ ಹೆಚ್ಚಾಗಿ ಚೇತರಿಕೆ ಕಂಡುಬರದಿದ್ದರೂ ಜೀವನಕ್ಕೆ ಕೊರತೆ ಇರಲಾರದು. ಹಲವು ಪ್ರಯತ್ನದ ನಂತರ ನಿಮ್ಮ ಪ್ರವಾಸದ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ಉದರ ಸಂಬAಧದ ವ್ಯಾಧಿಗಳು ಕಾಣಿಸಿಕೊಳ್ಳಬಹುದು.
ಸಿಂಹ
ಉದ್ಯೋಗ ಬದಲಾವಣೆ ಮಾಡುವ ಯೋಚನೆಯು ಸರಿಯಲ್ಲ, ಇದೇ ಉದ್ಯೋಗದಲ್ಲಿ ವರಮಾನ ಹೆಚ್ಚಿಸಿಕೊಳ್ಳುವ ಹೊಸ ದಾರಿ ಹುಡುಕಿ. ಹೊಸಾ ವೃತ್ತಿಯ ವಿಚಾರವಾಗಿ ಯಾವ ಜಾಗದಲ್ಲಿ ವೃತ್ತಿಯನ್ನು ಮಾಡುವುದೆಂದು ಚಿಂತಿಸುವಿರಿ.
ಕನ್ಯಾ
ನಿಮ್ಮ ಕೆಲಸದಲ್ಲಿ ತೊಡಕನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು. ಹೊಸಾ ವಿನ್ಯಾಸದ ನಿಮ್ಮ ಉಡುಪುಗಳು ನೀವಿರುವ ಸ್ಥಳಕ್ಕೆ ಸರಿಯಾಗದಿರಬಹುದು. ಕೆಲಸದ ಕಡೆ ಹೆಚ್ಚಿನ ಗಮನ ಹರಿಸುವಿರಿ.
ತುಲಾ
ಮಕ್ಕಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಹುಟ್ಟುವಂತೆ ಮನೆಯ ಪರಿಸರವನ್ನು ನಿರ್ಮಿಸಿ. ಗೃಹ ಸಾಮಾಗ್ರಿ ವಸ್ತುಗಳ ಖರೀದಿಯಿಂದ ಅಧಿಕವಾದ ಖರ್ಚು ಬರುವುದು. ಕೆಲವರ ದುಷ್ಟಬುದ್ಧಿಯ ಅನಾವರಣ ಆಗಲಿದೆ.
ವೃಶ್ಚಿಕ
ಕೆಲಸದಲ್ಲಿ ಆತುರದ ಸ್ವಭಾವ ಬೇಡ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ. ಮಗನೊಡನೆ ಗಹನವಾದ ಮಾತುಕತೆ ನಡೆಯುವ ಸಂಭವವಿದೆ. ನಿಮ್ಮ ಚಾಣಾಕ್ಷತನದಿಂದ ಪ್ರತಿಸ್ಪರ್ಧಿಗಳು ದೂರಾಗುವರು.
ಧನು
ನಿಮ್ಮ ಪ್ರಯತ್ನ ಬಲ ಹಾಗು ಮನೆಯಲ್ಲಿ ಪಿತೃ ಕಾರ್ಯವನ್ನು ನೆಡೆಸಿದರೆ ಕೌಟುಂಬಿಕವಾದ ವಿವಾದಗಳು ರಾಜೀ ಮನೋಭಾವಗಳಿಂದ ಸಮಾಪ್ತಿ ಹೊಂದಿಯಾವು. ಸಮಸ್ಯೆಗಳ ಸರಮಾಲೆಗಳು ಒಂದೊAದಾಗಿ ನಿವಾರಣೆಯಾಗುತ್ತದೆ.
ಮಕರ
ನಿಮ್ಮ ಕಲ್ಪನಾಶಕ್ತಿ ಇಂದು ಚುರುಕಾಗಿ ಕೆಲಸ ಮಾಡಲಿದೆ. ನೀವು ವ್ಯಾವಹಾರಿಕವಾಗಿ ಕೊಟ್ಟಮಾತನ್ನು ಉಳಿಸಿಕೊಳ್ಳುವಲ್ಲಿ ಜಯಶೀಲರಾಗುವಿರಿ. ಹಿರಿಯರ ಆರೋಗ್ಯದ ಕಾರಣ ನಿಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ.
ಕುಂಭ
ಮನೆಯ ಕೆಲಸಗಳನ್ನು ನಿಭಾಯಿಸುವುದರಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯುವಿರಿ. ಖಾದಿ ಉದ್ಯಮದವರಿಗೆ ಸರಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ. ಸಂಬAಧಿಗಳ ಆಗಮನವಾಗಬಹುದು.
ಮೀನ
ಹೆಚ್ಚಿನ ಗಮನ ನಿಮ್ಮ ಸಹೋದ್ಯೋಗಿಗಳಲ್ಲಿ ಇಡುವುದರಿಂದ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮಾರ್ಗ ದೊರೆಯುತ್ತದೆ. ನಿಮ್ಮ ನೈಪುಣ್ಯದಿಂದಾಗಿ ಹೆಚ್ಚಿನ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುವ ಯೋಗವಿದೆ.