ADVERTISEMENT

ದಿನ ಭವಿಷ್ಯ: ವೈಜ್ಞಾನಿಕ ಸಂಶೋಧಕರಿಗೆ ಅನಿರೀಕ್ಷಿತ ಫಲಿತಾಂಶ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಜನವರಿ 2024, 23:25 IST
Last Updated 17 ಜನವರಿ 2024, 23:25 IST
   
ಮೇಷ
  • ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಪ್ರಾಮಾಣಿಕ ಪ್ರಯತ್ನಬಲ ಹಾಗೂ ಒಳ್ಳೆಯತನ ಈ ದಿನದಂದು ಉಪಯೋಗಕ್ಕೆ ಬರದು.
  • ವೃಷಭ
  • ಯಾವುದೇ ವಾದ ವಿವಾದಗಳು ನಡೆದರೂ ಈ ದಿನದ ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗದು. ಬಂಗಾರದಂಥ ಬೆಲೆಬಾಳುವ ವಸ್ತು ಕಳೆದು ಹೋಗುವ ಸಾಧ್ಯತೆಯಿದೆ ಜಾಗ್ರತರಾಗಿರಿ. ಗೃಹದಲ್ಲಿ ಶಾಂತಿ ವರ್ಧಿಸುತ್ತದೆ.
  • ಮಿಥುನ
  • ಜನರನ್ನು ಆಕರ್ಷಿಸುವ ಕಲೆ ನಿಮ್ಮಲ್ಲಿದೆ. ತಂತ್ರಗಾರಿಕೆಯನ್ನು ಬಳಸಿಕೊಳ್ಳುವುದರಿಂದ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಾಣುವಿರಿ.
  • ಕರ್ಕಾಟಕ
  • ದೇವರ ಕೆಲಸಗಳಿಗಾಗಿ ಹಣ ವ್ಯಯವಾದರೂ ಆದಾಯದಲ್ಲಿ ಕೊರತೆಯೇನು ಬರಲಾರದು. ತಂತ್ರಜ್ಞರಿಗೆ ಮತ್ತು ಕುಶಲ ಕಾರ್ಮಿಕರಿಗೆ ಬೇಡಿಕೆಗಳು ಹೆಚ್ಚುವುದು. ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯುವುದು.
  • ಸಿಂಹ
  • ತೆಗೆದುಕೊಂಡ ನಿರ್ಧಾರದ ಬಗ್ಗೆ ಅನುಮಾನಗಳು ಎದುರಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟವಿರುವುದು. ನಿಮ್ಮ ಸ್ವಲ್ಪ ಪರಿಶ್ರಮ ಕೂಡ ಕಾರ್ಯಸಾಧನೆಯಲ್ಲಿ ಹೆಚ್ಚಿನ ಫಲ ನೀಡಲಿದೆ.
  • ಕನ್ಯಾ
  • ಕೆಲಸದಲ್ಲಿ ನಿಮ್ಮ ಗಮನಕ್ಕೆ ಬರುವ ತಪ್ಪುಗಳನ್ನು ಪುನರಾವರ್ತನೆಯಾಗದಂತೆ ಗಮನಿಸಿದರೆ ಯಶಸ್ಸಿನ ದಾರಿ ಕಾಣಬಹುದು. ವಿದ್ಯಾರ್ಜನೆಯಲ್ಲಿ ಉತ್ತಮವಾದ ಹಂತ ತಲುಪಲು ಸಾಧ್ಯ.
  • ತುಲಾ
  • ನಾಲ್ಕಾರು ದಿನದ ಹಿಂದೆ ಪ್ರಾರಂಭಿಸಿದ್ದ ಒಂದು ಯೋಜನೆ ಈ ದಿನ ನಿಶ್ಚಿತ ಹಂತ ತಲುಪಿ ಮನಸ್ಸಿಗೆ ಹೆಚ್ಚಿನ ಸಮಾಧಾನವಾಗುವುದು. ಪತ್ರಿಕೋದ್ಯಮದವರಿಗೆ ಕೆಲಸದ ಹೊರೆ ಅತಿ ಎನಿಸುವುದು.
  • ವೃಶ್ಚಿಕ
  • ನೀವು ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ. ಆಭರಣಗಳ ಖರೀದಿ ನಡೆಸುವುದರಿಂದ ಸಂತೋಷ ವಾಗುವುದು. ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರ ಉತ್ತಮವಾಗಿರುವುದು.
  • ಧನು
  • ವೃತ್ತಿಯಲ್ಲಿ ಅನುಸರಿಸುತ್ತಿರುವ ಮಾರ್ಗದ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಿ ಮುಂದೆ ಸಾಗುವುದು ಉತ್ತಮ. ಸ್ವಯಂ ಉದ್ಯೋಗಸ್ಥರಿಗೆ ಇನ್ನೊಬ್ಬರ ಸಹಾಯ ಅನಿವಾರ್ಯ. ಅಧಿಕಾರಕ್ಕಾಗಿ ಹೋರಾಟ ನಡೆಸುವಿರಿ.
  • ಮಕರ
  • ತಮ್ಮನ ಕೆಲಸಕ್ಕಾಗಿ ಉನ್ನತ ಅಧಿಕಾರಿಗಳನ್ನು ಕಾಣಲು ದಿನವಿಡೀ ಓಡಾಟ ನಡೆಸುವಿರಿ. ದೇಹದಲ್ಲಿ ಪಿತ್ತಾಧಿಕ್ಯದಿಂದ ಅಥವಾ ನಿದ್ದೆಯ ಅಭಾವದಿಂದ ಅನಾರೋಗ್ಯ ಉಂಟಾಗಬಹುದು.
  • ಕುಂಭ
  • ಅಧಿಕ ಕೆಲಸಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಬದುಕಿನ ಧನ್ಯತೆಗೆ ಅಚಲವಾದ ನಂಬಿಕೆಯೇ ಮುಖ್ಯವೆಂದು ಅನಿಸುವುದು.
  • ಮೀನ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಆಲೋಚನೆಯನ್ನು ಕಾರ್ಯರೂಪಕ್ಕೆ ತನ್ನಿರಿ. ಸ್ವಾದಿಷ್ಟ ಭೋಜನದ ಯೋಗ ನಿಮಗೆ ಪ್ರಾಪ್ತವಾಗುವುದು. ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಪ್ರಗತಿ ಕಂಡು ಬರುವುದು. See also:
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.