ADVERTISEMENT

ದಿನ ಭವಿಷ್ಯ | ಈ ರಾಶಿಯವರು ಶತ್ರುಗಳ ಬಲೆಗೆ ಬೀಳದಂತೆ ಎಚ್ಚರವಹಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಅಕ್ಟೋಬರ್ 2025, 21:34 IST
Last Updated 17 ಅಕ್ಟೋಬರ್ 2025, 21:34 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವ್ಯಕ್ತಿತ್ವದಲ್ಲಿ ಹಾಗೂ ಧನಲಾಭದಲ್ಲಿ ಒಂದು ರೀತಿಯ ಹೊಸ ಅನುಭವ ಹಾಗೂ ಅದೃಷ್ಟವನ್ನು ಕಾಣುವಿರಿ. ಬಟ್ಟೆ ವ್ಯಾಪಾರಿಗಳಿಗೆ ಲಾಭ ಸಿಗುವುದು. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ.
  • ವೃಷಭ
  • ವ್ಯವಹಾರ ವೃದ್ಧಿಯಾಗಿ ಸಮಸ್ಯೆಗಳು ಬಗೆ ಹರಿಯಲಿವೆ. ಲೆಕ್ಕ ಪರಿಶೋಧಕರ ಕೆಲಸದಲ್ಲಿ ತೃಪ್ತಿಯಿದೆ. ಸ್ವತ್ತು ವಿವಾದ ರಾಜಿ ಸಂಧಾನದ ಮೂಲಕ ಬಗೆಹರಿಯಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ.
  • ಮಿಥುನ
  • ಸೃಜನಶೀಲತೆಯನ್ನು ಪ್ರದರ್ಶಿಸಲು ಬೇಕಾದಷ್ಟು ಅವಕಾಶಗಳು ಒದಗಿ ಬರಲಿವೆ. ಮಾನಸಿಕ ಸ್ಥೈರ್ಯ ದೃಢವಾಗಿದೆ. ಹಲವು ಕಾರಣಗಳಿಗೆ ಸ್ನೇಹಿತರ ಮಾರ್ಗದರ್ಶನ, ಬೆಂಬಲವನ್ನು ಅಪೇಕ್ಷಿಸುವಂತಾಗುವುದು.
  • ಕರ್ಕಾಟಕ
  • ವ್ಯವಹಾರಗಳಲ್ಲಿ ಈ ದಿನ ಹಿಡಿತವನ್ನು ಸಾಧಿಸಲಿದ್ದೀರಿ. ಮನೆಯ ರಿಪೇರಿ ಕೆಲಸಗಳಿಗೆ ಹಣ ವ್ಯಯವಾಗುತ್ತದೆ. ಹಿರಿಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿದಲ್ಲಿ ಜಯ ನಿಮ್ಮದೇ ಆಗಿರುತ್ತದೆ.
  • ಸಿಂಹ
  • ಕೌಟುಂಬಿಕ ವಿಷಯಗಳಲ್ಲಿ ಬಹಳ ಖುಷಿ ಸಿಗುವುದು. ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರಿ.
  • ಕನ್ಯಾ
  • ಆರ್ಥಿಕ ಸಮಸ್ಯೆ ಎದುರಾಗಿ ಸಹೋದರರ ಅಥವಾ ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯ. ಸೋದರ ಮಾವನ ಮಾತನ್ನು ಕೇಳಿ. ದೇಹದಲ್ಲಿನ ಅಧಿಕ ಉಷ್ಣಾಂಶದಿಂದ ದಂತವ್ಯಾಧಿ ಸಂಭವಿಸಬಹುದು.
  • ತುಲಾ
  • ನಿಮ್ಮೊಳಗಿನ ಶಕ್ತಿ ಪ್ರಕಾಶಿಸಲಿದೆ. ಅಪರೂಪದ ಸಮಾರಂಭಕ್ಕೆ ಆಹ್ವಾನ ಬರುವುದು. ಹಾಲು ಮಾರಾಟಗಾರರಿಗೆ ಲಾಭವಿದೆ. ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ಪರಿಶೀಲನೆ ಅಗತ್ಯ.
  • ವೃಶ್ಚಿಕ
  • ನಂಬಿಕಸ್ಥರಿಂದ ಮೋಸದ ಕೃತ್ಯಗಳು ನಡೆಯುವ ಸಂದರ್ಭಗಳಿವೆ. ವ್ಯವಹಾರಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಶತ್ರುಗಳ ಬಲೆಗೆ ಬೀಳದಂತೆ ಎಚ್ಚರವಹಿಸಬೇಕು.
  • ಧನು
  • ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಬಂಗಾರದ ಮೇಲಿನ ಧನ ಹೂಡಿಕೆಯಲ್ಲಿ ಲಾಭವಿದೆ. ಬಾಲ ಕಲಾವಿದರಿಗೆ ಉತ್ತಮ ಹೆಸರು ಬರಲಿದೆ. ದ್ವಿಚಕ್ರ ವಾಹನಗಳ ಮಾರಾಟಗಾರರಿಗೆ ಉತ್ತಮ ವಹಿವಾಟು.
  • ಮಕರ
  • ಚರ್ಚೆ ಹಾಗೂ ವ್ಯವಹಾರಗಳಲ್ಲಿ ಬಹಳ ಜಾಗರೂಕತೆಯನ್ನು ವಹಿಸಿ. ಯಂತ್ರಗಳ ಕೆಲಸ ಮಾಡುವಾಗ ಜಾಗರೂಕರಾಗಿರಿ. ಕುಟುಂಬದ ವ್ಯಕ್ತಿಗಳನ್ನು ಬಿಟ್ಟು ಹೋಗುವುದು ಮನಸ್ತಾಪಗಳಿಗೆ ಕಾರಣವಾಗಬಹುದು.
  • ಕುಂಭ
  • ಉತ್ತಮರ ಅಥವಾ ಸಾಧನೆ ಮಾಡಿರುವವರ ಸಹವಾಸ ಮಾಡುವುದು ಅಭಿವೃದ್ಧಿಗೆ ಸಹಾಯವಾಗುತ್ತದೆ. ಸಕಲ ವಿಘ್ನ, ವಿಪತ್ತುಗಳನ್ನು ಕಳೆದುಕೊಂಡು ಕಾರ್ಯಸಾಧನೆಗಾಗಿ ಮಹಾಗಣಪತಿಯನ್ನು ಪ್ರಾರ್ಥಿಸಿ.
  • ಮೀನ
  • ಮನೆಯಲ್ಲಿನ ಸಂತೋಷವು ಅನಿರೀಕ್ಷಿತ ಭೇಟಿಯಿಂದ ಇಮ್ಮಡಿಯಾಗುತ್ತದೆ. ಪುಷ್ಪವಿನ್ಯಾಸಕರ ಅಪರೂಪದ ಪುಷ್ಪ ಸಂಯೋಜನೆಯು ಪ್ರಸಿದ್ಧಿ ಯನ್ನು ಗಳಿಸುವುದು. ಚರ್ಮ ಸಂಬಂಧಿ ತೊಂದರೆಗಳು ಪೀಡಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.