ADVERTISEMENT

ದಿನ ಭವಿಷ್ಯ | ಇತರರ ಬಗ್ಗೆ ಗೌರವ ಹಾಗೂ ತಾಳ್ಮೆ ಹೊಂದಿರುವುದು ಮುಖ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಜುಲೈ 2025, 18:30 IST
Last Updated 18 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉತ್ಪತ್ತಿಯನ್ನು ಲೆಕ್ಕಿಸಿ ಅರಸಿ ಬಂದ ಉದ್ಯೋಗವನ್ನು ದೂರ ಮಾಡುವುದು ಮೂರ್ಖತನಕ್ಕೆ ಉದಾಹರಣೆ. ಸಾಯಂಕಾಲದ ವೇಳೆ ಬಾಲ್ಯದ ನೆನಪುಗಳ ಜತೆಯಲ್ಲಿ ಆತ್ಮೀಯರೊಂದಿಗೆ ಕಾಲ ಕಳೆಯುವ ಲಕ್ಷಣಗಳಿದೆ.
  • ವೃಷಭ
  • ಮನೆಯಲ್ಲಿ ಸಣ್ಣ ಪ್ರಮಾಣದ ಕಲಹಕ್ಕೆ ಕಾರಣರಾದಿರಿ ಎಂದು ದುಃಖಿಸುವಂತಾಗುತ್ತದೆ. ವಿಮರ್ಶಿಕೊಳ್ಳಬೇಕಾದ ಸ್ಥಿತಿ ಬರಲಿದೆ. ಅನಿರೀಕ್ಷಿತವಾಗಿ ತೋರಿಬರುವ ಅಡ್ಡಿ-ಆತಂಕಗಳಿಗೆ ಧೈರ್ಯಗೆಡದಿರಿ.
  • ಮಿಥುನ
  • ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕೆಲಸದ ವಿಚಾರವಾಗಿ ದೀರ್ಘ ಶ್ವಾಸವನ್ನು ಬಿಡುವಂಥ ಸಂದರ್ಭ ಎದುರಾಗಲಿದೆ. ಭೇಟಿ ಮಾಡುವಂಥ ವ್ಯಕ್ತಿಯ ಸಾಂಗತ್ಯವು ಸಾರ್ಥಕವೆಂದು ಎನಿಸುವುದು.
  • ಕರ್ಕಾಟಕ
  • ಹಿಂದಿನ ಕಹಿ ಘಟನೆಗಳನ್ನು ಮರೆತು ಮುನ್ನಡೆದಲ್ಲಿ ಸಿಹಿ ದಿನ ಗಳನ್ನು ಆನಂದದಿಂದ ಅನುಭವಿಸುವಂತೆ ಆಗಲಿದೆ. ವೈದ್ಯಕೀಯ ಲೋಕದಲ್ಲಿ ಅದರಲ್ಲೂ ಆಯುರ್ವೇದ ತಿಳಿದವರಿಗೆ, ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚಾದೀತು.
  • ಸಿಂಹ
  • ದಿನಗೂಲಿ ಕೆಲಸದಲ್ಲಿ ಇರುವವರಿಗೆ ಕೆಲಸದಲ್ಲಿ ಹೊಸತನ ಕಂಡುಕೊಳ್ಳುವಿರಿ. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪ್ರಗತಿಯ ಹಾದಿಯನ್ನು ಸ್ಪರ್ಶಿಸಲಿದ್ದೀರಿ.
  • ಕನ್ಯಾ
  • ಅಕ್ಕ ಪಕ್ಕದಲ್ಲಿನ ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಭಾರದ ವಸ್ತುಗಳನ್ನು ಎತ್ತಿ ಇಳಿಸುವಂಥ ಕೆಲಸ ಮಾಡಲು ಹೋಗಿ ದೇಹದ ಭಾಗಗಳನ್ನು ಉಳುಕಿಸಿಕೊಳ್ಳುವಂತೆ ಆಗಬಹುದು ಎಚ್ಚರ.
  • ತುಲಾ
  • ಪರಿಸ್ಥಿತಿ , ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆ ಪ್ರಾಪ್ತಿಯಾಗುವುದು. ಏಕಾಗ್ರತೆಯ ಕೊರತೆಯಿಂದ ನೀವು ಮಾಡುವ ಕೆಲಸದಲ್ಲಿ ಏನಾದರೂ ತಪ್ಪುಗಳಾಗುತ್ತಲೇ ಇರುತ್ತವೆ. ‌
  • ವೃಶ್ಚಿಕ
  • ಉತ್ತಮ ಕಾರ್ಯವನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ಬೇಡ. ಕೃಷಿಗೆ ಸಂಬಂಧಿಸಿದಂತೆ ಪ್ರಾಕೃತಿಕ ವಿಕೋಪ, ಕಾಡು ಪ್ರಾಣಿಗಳ ಹಾವಳಿ, ಬೆಳೆರೋಗದಂಥ ಸಮಸ್ಯೆ ಕಾಡಬಹುದು. ಅಪವಾದಗಳಿಗೆ ಕುಗ್ಗಬೇಡಿ.
  • ಧನು
  • ಮನೆಯ ನವೀಕರಣ ವಿಷಯದಲ್ಲಿ ಮಾಡುವ ಪ್ರಯತ್ನ ಸಫಲವಾಗುತ್ತದೆ. ಗೆಳೆತನದ ಮಧ್ಯದಲ್ಲಿ ಹಣಕಾಸು ಬಂದು ಸಂಬಂಧ, ಬಾಂಧವ್ಯ ಸ್ಥಾನ ಕಳೆದುಕೊಳ್ಳಲಿವೆ. ಪರೋಪಕಾರದ ಪ್ರತಿಫಲ ಅನುಭವಕ್ಕೆ ಬರುತ್ತದೆ.
  • ಮಕರ
  • ಹೊಸ ವ್ಯಕ್ತಿಗಳ ಸ್ನೇಹವನ್ನು ಬೆಳೆಸಿ ವ್ಯವಹರಿಸುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಅತಿಯಾದ ಉಷ್ಣದಿಂದ ಕೆಲವು ಸಮಸ್ಯೆಗಳಾಗಬಹುದು. ನಷ್ಟವಾದ ವಸ್ತು ಮರಳಿ ಕೈ ಸೇರಲಿದೆ.
  • ಕುಂಭ
  • ಮಾಡದೆ ಇರುವ ತಪ್ಪುಗಳ ಆಪಾದನೆ ಬಂದು ಅದನ್ನು ನಿವಾರಿಸಿಕೊಳ್ಳಲಾಗದೇ ತೊಳಲಾಡಬೇಕಾಗುವುದು. ಇತರರ ಬಗ್ಗೆ ಗೌರವ ಹಾಗೂ ತಾಳ್ಮೆ ಹೊಂದಿರುವುದು ಮುಖ್ಯ.
  • ಮೀನ
  • ವಿದ್ಯುತ್ ಉಪಕರಣಗಳ ಮಾರಾಟ, ರಿಪೇರಿ ಮಾಡುವವರಿಗೆ ಲಾಭ. ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಪುಸ್ತಕ ಓದುವ ಹವ್ಯಾಸ ಇಮ್ಮಡಿಗೊಳ್ಳುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.