ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಗಳಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜುಲೈ 2024, 21:38 IST
Last Updated 20 ಜುಲೈ 2024, 21:38 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಕೆಲಸದ ಸ್ಥಳದಲ್ಲಿ ವಾದ–ವಿವಾದಕ್ಕಿಳಿದರೆ, ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗುವುದು. ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿ ಹೊರುವ ಸಂದರ್ಭ ಬಂದಲ್ಲಿ, ಹಿಂದೆ ಸರಿಯುವುದು ಉತ್ತಮ.
  • ವೃಷಭ
  • ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಗಳಿದೆ, ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳು ಸಿಗಲಿವೆ. ಹಿರಿಯರ ಆಶೀರ್ವಾದದಿಂದ ಕಾರ್ಯಗಳಲ್ಲಿ ಜಯ ಸಿಗಲಿದೆ.
  • ಮಿಥುನ
  • ಕೀಳರಿಮೆ, ಹಿಂಜರಿಕೆ ಸ್ವಭಾವ ಅಥವಾ ಅಹಂಕಾರದ ನಡವಳಿಕೆ ಬಿಟ್ಟು ಕಾರ್ಯೋನ್ಮುಖವಾದಲ್ಲಿ ಗೆಲುವು ನಿಮ್ಮದಾಗುತ್ತದೆ. ಭೋಗದ ವಸ್ತು ಖರೀದಿಯ ಅವಕಾಶ ನಿಮ್ಮದಾಗಲಿದೆ.
  • ಕರ್ಕಾಟಕ
  • ಎಲ್ಲ ಕೆಲಸಗಳಲ್ಲಿಯೂ ಯಶಸ್ಸು ಮತ್ತು ಲಾಭದಿಂದಾಗಿ ಮನಸ್ಸಿಗೆ ಸಂತೋಷವಾಗಲಿದೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚಲಿದೆ. ಕ್ರೀಡೆಯಲ್ಲಿ ಹೆಸರು ಮಾಡುವ ಅವಕಾಶವಿದೆ.
  • ಸಿಂಹ
  • ಆಸ್ತಿ ಕೊಳ್ಳುವುದರಲ್ಲಾಗಲೀ, ಮನೆ ಕಟ್ಟುವ ವಿಚಾರದಲ್ಲಾಗಲೀ ಅದೃಷ್ಟ ನಿಮ್ಮ ಪಾಲಿಗಿದೆ. ವಿದೇಶಿ ವಸ್ತುಗಳ ಖರೀದಿಗಾಗಿ ಅಧಿಕ ಧನ ವ್ಯಯ ಮಾಡುವಿರಿ. ಹಣದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ.
  • ಕನ್ಯಾ
  • ಅಡುಗೆ ಮಾಡುವ ವಿಚಾರವಾಗಿ ಗೃಹಿಣಿಯರಿಗೆ ಪ್ರಶಂಸೆ ಸಿಗಲಿದೆ. ಮನೆಯಲ್ಲಿ ಪ್ರತಿನಿತ್ಯ ದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ನಿಶ್ಚಿತವಾಗಿ ನಿಮ್ಮದಾಗುವುದು.
  • ತುಲಾ
  • ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶವಿದೆ. ಶತ್ರುಗಳ ಬಾಧೆ ದೂರಾಗಿ ನಿಮ್ಮ ಇತರ ಯೋಜನೆಗಳು ಈಡೇರಲಿದೆ. ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟ ಅಧಿಕಗೊಳ್ಳುವುದು.
  • ವೃಶ್ಚಿಕ
  • ಏಜೆನ್ಸಿಯಂತಹ ಉದ್ಯೋಗ ಆರಂಭಿಸಲು ಸೂಕ್ತ ಸ್ಥಳದ ಹುಡುಕಾಟ ಆರಂಭಿಸುವಿರಿ. ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ಲಾಭವಾಗಲಿದೆ. ಚಿನ್ನಾಭರಣ ಮಾರಾಟಗಾರರಿಗೆ ಆದಾಯ ಹೆಚ್ಚಲಿದೆ.
  • ಧನು
  • ಆಸ್ತಿ ವಿಷಯಗಳನ್ನು ತ್ವರಿತವಾಗಿ ಬಗೆ ಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಉಪಹಾರ ಗೃಹಗಳಿಂದ ಲಾಭ ಪಡೆಯುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ದಿನ ನಿಶ್ಚಿತವಾಗುವುದು.
  • ಮಕರ
  • ಧಾರ್ಮಿಕವಾಗಿ ಏಕಾಗ್ರತೆ ಹಾಗೂ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ. ನಿಮ್ಮಲ್ಲಿರುವ ಪ್ರತಿಭೆಯನ್ನು ಇತರರು ಗಮನಿಸುವರು. ಸ್ನೇಹಿತರು ನಿಮ್ಮ ಯೋಜನೆಗಳನ್ನು ಬೆಂಬಲಿಸಲಿದ್ದಾರೆ.
  • ಕುಂಭ
  • ಗಣ್ಯ ವ್ಯಕ್ತಿಗಳ ಸಹಾಯದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿವೆ. ಇನ್ನೊಬ್ಬರಿಗೆ ಗೌರವ ಕೊಟ್ಟು, ನೀವು ಗೌರವ ಸಂಪಾದಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿದೆ.
  • ಮೀನ
  • ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ತುರ್ತಾಗಿ ಚರ್ಚಿಸಬೇಕಾದ ಅಗತ್ಯವಿದೆ. ಅವಿವಾಹಿತರು ಅಸ್ಪಷ್ಟ ನಿಲುವಿಂದ ಹೊಬಂದಲ್ಲಿ ಕಂಕಣಬಲದ ಸಾಧ್ಯತೆ ಇದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.