ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಆಶ್ವಾಸನೀಯ ವರ್ತನೆಯಿಂದ ಸಂತಸ ಉಂಟಾಗುವುದು. ಪ್ರವಾಸಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿ ಕೊಡಲಿದ್ದಾರೆ.
  • ವೃಷಭ
  • ಎಲ್ಲಾ ಪ್ರಯತ್ನಗಳು ಯಶಸ್ಸು ಕಾಣುವ ಹಾದಿಯಲ್ಲಿರುವುದು. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಫಲವನ್ನು ಅನುಭವಿಸುವಿರಿ. ಹಣದ ಪರಿಸ್ಥಿತಿ ಸುಧಾರಿಸಿ ನೆಮ್ಮದಿ. ಕಟ್ಟಡ ನಿರ್ಮಾಣದ ಬಗ್ಗೆ ಸಲಹೆ ಸಿಗುವುದು.
  • ಮಿಥುನ
  • ಕೆಲಸ ಕಾರ್ಯಗಳ ಬಗ್ಗೆ ನಿಗಾ ಕೊಡುವಂತೆ ತಂದೆ-ತಾಯಿಯಿಂದ ತೀವ್ರ ಸಂದೇಶ ಬರಲಿದೆ. ಮೇಲಧಿಕಾರಿಗಳು ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯನಿರ್ವಹಿಸಲು ಅಶಕ್ತರಾಗುವ ಸಂಭವವಿದೆ.
  • ಕರ್ಕಾಟಕ
  • ಬಹಳ ದಿನಗಳ ನಂತರ ಮನಸ್ಸಿಗೆ ಹಿತವಾದ ಅನುಭವ ಸಿಗಲಿದೆ. ಹೆಂಡತಿಯ ಆರೈಕೆ ವಿಷಯವಾಗಿ ತಾಯಿ ಅಥವಾ ಅತ್ತೆಯವರನ್ನು ಕರೆ ತರುವಂತೆ ಆಗುವುದು. ಪರಿಶ್ರಮದ ಜೊತೆ ಅಧಿಕ ಸಮಯ ಮೀಸಲಿಡಿ.
  • ಸಿಂಹ
  • ಹಾಸ್ಯಪ್ರಜ್ಞೆ ಹೆಚ್ಚುವುದು ಆದರೆ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ಮದುವೆಯ ವಿಷಯಕ್ಕೆ ಸಂಬಂಧ ಪಟ್ಟಂತೆ ತಾಯಿಯ ಮತ್ತು ಅಣ್ಣಂದಿರ ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ.
  • ಕನ್ಯಾ
  • ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ. ವೃತ್ತಿಪರ ಗಮನಹರಿಸಿ.
  • ತುಲಾ
  • ಸಿಟ್ಟು ಅಥವಾ ಯೋಚನಾರಹಿತ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗಲಿವೆ. ನೆಂಟರಿಷ್ಟರ ಸಲಹೆಸೂಚನೆಗಳನ್ನು ಆಲಿಸಿ ನಂತರದಲ್ಲಿ ಸನ್ಮಾರ್ಗದಲ್ಲಿ ನೆಡೆಯಿರಿ. ದೈವಬಲ ಒದಗಿ ಬಂದು ಅಭಿವೃದ್ಧಿಗೊಳ್ಳುವಿರಿ.
  • ವೃಶ್ಚಿಕ
  • ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಸಾಮಾಜಿಕ ಬದುಕಿನಲ್ಲಿ ಹೊಸ ತಿರುವು ಮೂಡುತ್ತದೆ. ಗೃಹನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ತೊಂದರೆ ಸೃಷ್ಟಿ ಮಾಡುವುದು.
  • ಧನು
  • ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು ಅಥವಾ ಸಂಶೋಧನಾ ವೃತ್ತಿಯಲ್ಲಿರುವವರಿಗೆ ಅಧ್ಯಯನಕ್ಕೆ ಸುಸಮಯ. ದೇಹದಲ್ಲಿ ಪಿತ್ತದ ಅಂಶ ಅಧಿಕವಾಗುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
  • ಮಕರ
  • ಸಹೋದ್ಯೋಗಿಗಳೊಂದಿಗೆ ಆತ್ಮೀಯ ನಡೆ ಮತ್ತು ನುಡಿ ಮನಸ್ತಾಪಗಳನ್ನು ದೂರಮಾಡಲಿದೆ. ಸಮಾಜಸೇವೆಯಲ್ಲಿ ತೊಡಗಿ ಕೊಳ್ಳುವಿರಿ. ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು .
  • ಕುಂಭ
  • ವಾಹನ ವಹಿವಾಟುಗಳಿಂದ ಲಾಭವಿದೆ. ಶುಭಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ದೂರ ಉಳಿಯುವುದು ಕ್ಷೇಮವುಂಟುಮಾಡುತ್ತದೆ.
  • ಮೀನ
  • ಮನೋಬಲದಿಂದ ಕೆಲಸ ಕಾರ್ಯಗಳು ಚುರುಕಾಗಿ ಮತ್ತು ಅಚ್ಚುಕಟ್ಟಾಗಿ ನಡೆಯಲಿವೆ. ಹಣದ ಅಡಚಣೆ ಇರುವುದಿಲ್ಲ. ತಂದೆ-ತಾಯಿ ಆರೋಗ್ಯ ಸ್ಥಿತಿ ಉತ್ತಮ. ಮನರಂಜನೆಗಾಗಿ ಅಲ್ಪಕಾಲ ಮೀಸಲಿಡಿ
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.