ADVERTISEMENT

ದಿನ ಭವಿಷ್ಯ: ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ, ದೂರ ಉಳಿಯುವುದು ಕ್ಷೇಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಜುಲೈ 2024, 23:30 IST
Last Updated 22 ಜುಲೈ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ವೈಯಕ್ತಿಕ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುವತ್ತ ಸಾಗುವುದು. ವಾಹನದ ವಹಿವಾಟುಗಳನ್ನು ಮಾಡುವವರು ಲಾಭ ಪಡೆಯಬಹುದು. ಚಿಲ್ಲರೆ ವ್ಯಾಪಾರಿಗಳಿಗೆ, ಸಿಹಿ ತಿನಿಸು ಮಾರಾಟಗಾರರಿಗೆ ಹೆಚ್ಚಿನ ಲಾಭ.
  • ವೃಷಭ
  • ಷೇರು ವ್ಯವಹಾರ, ಸಿನಿಮಾ ತಯಾರಿಕೆಯಂಥ ಕಾರ್ಯ ಲಾಭ ತರಲಿದೆ. ವೃತ್ತಿ ಜೀವನವನ್ನು ಗಂಭೀರವಾಗಿ ಪರಿಗಣಿಸುವಿರಿ. ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರುವುದು.
  • ಮಿಥುನ
  • ದೈನಂದಿನ ಬದುಕಿನ ವಿಚಾರಗಳಲ್ಲಿ ನಡೆದಿರುವ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ಕೆಲಸದ ಒತ್ತಡದಿಂದ ದೇಹಾಯಾಸವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
  • ಕರ್ಕಾಟಕ
  • ಶೈಕ್ಷಣಿಕ ರಂಗದಲ್ಲಿ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಗಳಿಸಿಕೊಳ್ಳಬಹುದು. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ದೂರ ಉಳಿಯುವುದು ಕ್ಷೇಮ. ಕೆಲಸದ ಒತ್ತಡ ಕಡಿಮೆಯಾಗಲಿದೆ.
  • ಸಿಂಹ
  • ವಿದೇಶ ಪ್ರಯಾಣದ ಕನಸು ನೆರವೇರುವ ಅವಕಾಶ ಸಿಗುವುದು. ಧನಾದಾಯಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಇರುವುದಿಲ್ಲ. ಆತ್ಮವಿಶ್ವಾಸದಿಂದ ಎಲ್ಲವನ್ನೂ ಸಾಧಿಸಲಿದ್ದೀರಿ.
  • ಕನ್ಯಾ
  • ಎಲ್ಲಾ ಆಸೆಗಳನ್ನು ಕೈಬಿಟ್ಟು ಜೀವನ ನಡೆಸುವ ಸಮಯದಲ್ಲಿ ಅದೃಷ್ಟ ಕೈ ಬೀಸಿ ಕರೆಯುವುದು. ದೇಹದಲ್ಲಿ ಉತ್ಸಾಹವಿರುವುದರಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು.
  • ತುಲಾ
  • ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಯಕನನ್ನು ಜಾಗೃತ ಗೊಳಿಸಿ. ಒಪ್ಪಂದ ಹಾಗೂ ಸಹಕಾರಗಳು ಇಂದು ಬಹಳ ಸುಲಭವಾಗುವುದು.ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ, ಗೌರವ ತೋರಿಬರುವುದು.
  • ವೃಶ್ಚಿಕ
  • ಸ್ವಯಂಕೃತ ಅಪರಾಧದಿಂದ ಜೀವನದಲ್ಲಿ ಉಲ್ಲಾಸ ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಮಂಗಳಕಾರ್ಯಗಳು ನಡೆಯುವ ಸೂಚನೆ ಕಾಣುತ್ತದೆ. ಸ್ವಂತ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ.
  • ಧನು
  • ವಾಹನಗಳ ಅಥವಾ ದೊಡ್ಡ ದೊಡ್ಡ ಯಂತ್ರಗಳಲ್ಲಿ ಕೆಲಸ ಮಾಡುವವರಿಗೆ ಜಾಗ್ರತೆ ಅಗತ್ಯ.ಔದ್ಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ಭೂ ವ್ಯವಹಾರಗಳು ಕೈಗೂಡುವುದು.
  • ಮಕರ
  • ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ. ಅದರಲ್ಲೂ ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹ ಸಿಗಲಿದೆ. ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ.
  • ಕುಂಭ
  • ಆಫೀಸಿನ ಕೆಲಸದ ವಿಚಾರದಲ್ಲಿ ಕ್ರಮ ಮತ್ತು ಉತ್ಸಾಹವನ್ನು ಕೈಗೊಳ್ಳಬೇಕಾಗುವುದು. ಸರ್ಕಾರಿ ಅಧಿಕಾರಿಗಳು ಕಾನೂನು ವಿಷಯಗಳತ್ತ ಗಮನ ಹರಿಸಬೇಕಾಗಬಹುದು. ದಿಢೀರ್ ಪ್ರಯಾಣದ ಸಂಭವವಿರಲಿದೆ.
  • ಮೀನ
  • ಸೃಜನಶೀಲ ಯೋಜನೆಯನ್ನು ಮುಂದುವರಿಸಲು ಶುಭದಿನ. ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕೆಲಸವಿರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.