ADVERTISEMENT

ದಿನ ಭವಿಷ್ಯ: ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚನೆ ಮಾಡಿ

ದಿನ ಭವಿಷ್ಯ: 24 ಜುಲೈ 2024 ಬುಧವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜುಲೈ 2024, 23:52 IST
Last Updated 23 ಜುಲೈ 2024, 23:52 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲವು ಪ್ರಮುಖ ಕಾರ್ಯಗಳನ್ನು ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಅವನ್ನು ಲೆಕ್ಕಿಸದೆ ಗುರಿ ಸಾಧನೆಯ ಬಗ್ಗೆ ಯೋಚಿಸಿರಿ. ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ.
  • ವೃಷಭ
  • ಅಧಿಕಾರಿ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜನ ಸಾಮಾನ್ಯರಿಂದ ಪ್ರೋತ್ಸಾಹ ದೊರಕುತ್ತವೆ. ಹೊಸ ವ್ಯವಹಾರಗಳ ಚಾಲನೆಗೆಂದು ಉತ್ತಮ ಮಾರ್ಗದರ್ಶನವನ್ನು ಹೊಂದುವಿರಿ.
  • ಮಿಥುನ
  • ವಿದ್ಯಾರ್ಥಿ ವರ್ಗಕ್ಕೆ ಬಂದಿರುವ ಜವಾಬ್ದಾರಿಯುಕ್ತ ನಡವಳಿಕೆ ಮತ್ತು ಉತ್ಸಾಹದಿಂದ ಏಳಿಗೆಯ ಸೂಚನೆ ಇರುವುದು. ಮದುವೆ ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ ಬರಲಿದೆ.
  • ಕರ್ಕಾಟಕ
  • ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಇರುತ್ತದೆ.
  • ಸಿಂಹ
  • ಅತಿ ಔದಾರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿಯನ್ನು ಗಮನಿಸಿಕೊಳ್ಳಿರಿ. ಏಕಾಗ್ರತೆಯಿಂದಾಗಿ ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಕೆಲಸವನ್ನು ಒಪ್ಪಿಕೊಳ್ಳಬಹುದು.
  • ಕನ್ಯಾ
  • ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸಿ ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ. ಪರಿಸ್ಥಿತಿಯನ್ನು ಬುದ್ಧಿವಂತಿಕೆ ಮತ್ತು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು.
  • ತುಲಾ
  • ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚನೆ ಮಾಡಿ. ಪೆಟ್ರೋಲಿಯಂ ಉತ್ಪನ್ನಗಳಿಂದ ಆದಾಯವಿದೆ. ಮನೆಯ ಹೆಚ್ಚುವರಿ ಆದಾಯದಿಂದ ಹುಮ್ಮಸ್ಸು ಹೆಚ್ಚುವುದು.
  • ವೃಶ್ಚಿಕ
  • ಗೃಹದಲ್ಲಿ ಸಂಭ್ರಮಾಚರಣೆಯ ಸಲುವಾಗಿ ಖರ್ಚುಗಳು ಸಂಭವಿಸಲಿವೆ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳಿ.
  • ಧನು
  • ಆಸ್ತಿ ಕೊಳ್ಳುವಾಗ ಎಲ್ಲಾ ವಿವರಗಳ ಬಗ್ಗೆ ಎರಡೆರಡು ಬಾರಿ ಮಾಹಿತಿಯನ್ನು ಪಡೆದುಕೊಳ್ಳಿರಿ. ಒತ್ತಡ ತರುವಂಥ ಕೆಲಸಗಳಿಂದ ದೂರವಿರಿ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಹೊಂದುವಿರಿ.
  • ಮಕರ
  • ಈ ದಿನ ಹೆಚ್ಚಿನ ಆತ್ಮಸ್ಥೈರ್ಯದಿಂದ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಜಯ ಕಾಣುವಿರಿ. ವಾಹನ ಮಾರಾಟಗಳಿಂದ ಆದಾಯ ಪಡೆದುಕೊಳ್ಳುವಿರಿ. ಶ್ರಮದ ಬದುಕಿನಿಂದ ಹೊಸ ಘಟ್ಟ ತಲುಪುವಿರಿ.
  • ಕುಂಭ
  • ಬಿಸಿನೆಸ್ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು. ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಸಫಲತೆ ಹೊಂದುವರು.
  • ಮೀನ
  • ಮನೆಯ ದಾಖಲೆ ಪತ್ರಗಳನ್ನು, ಲೆಕ್ಕಪತ್ರಗಳನ್ನು ಪರಿಶೀಲಿಸಿ, ಸರಿಪಡಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ. ಗೌರವಯುತ ಸ್ಥಾನಮಾನಗಳು ದೊರಕುತ್ತವೆ. ದಿನದ ಅಂತ್ಯದಲ್ಲಿ ಸಂತಸದ ಸುದ್ದಿ ಸಿಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.